24
September, 2026

A News 365Times Venture

24
Thursday
September, 2026

A News 365Times Venture

ಕರಾವಳಿ ಕೋಮುವಾದ ಪ್ರಯೋಗ ಶಾಲೆಯ ಬ್ರಾಂಚ್ ಹಳೆ ಮೈಸೂರಿನಲ್ಲೂ ಓಪನ್ ಮಾಡಲು ಬಿಜೆಪಿ ಪ್ರಯತ್ನ- ಸಚಿವ ಪ್ರಿಯಾಂಕ್ ಖರ್ಗೆ

Date:

ಬೆಂಗಳೂರು,ಸೆಪ್ಟಂಬರ್,9,2025 (www.justkannada.in):  ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಂತರ ಬಿಜೆಪಿಯಿಂದ ಮದ್ದೂರಿನಲ್ಲಿ ಪ್ರತಿಭಟನೆ ಸಂಬಂಧ ಟ್ವೀಟ್ ಮಾಡಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ  ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ. ಶ್ರೀರಂಗಪಟ್ಟಣದ ಕೋಮು ಸಂಘರ್ಷ, ಕೆರೆಗೋಡು ಧ್ವಜ ಗಲಾಟೆ, ನಾಗಮಂಗಲ ಗಲಾಟೆ, ಮದ್ದೂರು ಗಲಾಟೆ.

ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ, ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆ. ಬಿಜೆಪಿಯೊಂದಿಗೆ ಜೆಡಿಎಸ್ ಸೈದ್ದಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಾ ಮುತ್ತ ಗಲಾಟೆಗಳು ಶುರುವಾಗಿವೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತದೆ. ಸಾಮರಸ್ಯ, ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ದವಾಗಿದೆ ಎಂದು  ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Key words: BJP,  coastal, communal , school, branch, Mysore, Minister, Priyank kharge

The post ಕರಾವಳಿ ಕೋಮುವಾದ ಪ್ರಯೋಗ ಶಾಲೆಯ ಬ್ರಾಂಚ್ ಹಳೆ ಮೈಸೂರಿನಲ್ಲೂ ಓಪನ್ ಮಾಡಲು ಬಿಜೆಪಿ ಪ್ರಯತ್ನ- ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗ്യാനേഷ് കുമാറിനെ ജയിലിലടക്കണം; ബാലറ്റ് പേപ്പറുകള്‍ ഉപയോഗിച്ച് തെരഞ്ഞെടുപ്പുകള്‍ വീണ്ടും നടത്തണം: ഉദ്ധവ് താക്കറെ

ന്യൂദല്‍ഹി: മുഖ്യ തെരഞ്ഞെടുപ്പ് കമ്മീഷണര്‍ ഗ്യാനേഷ് കുമാറിനെതിരെ രൂക്ഷവിമര്‍ശനവുമായി ശിവസേന (യു.ബി.ടി)...

`தேர்தல் முடிவுகள் மீது கடும் சந்தேகங்களை எழுப்புகிறது; ஞானேஷ் குமார் பதவி விலக வேண்டும்!'- ஸ்டாலின்

வாக்காளர் சிறப்பு தீவிர திருத்தம் (SIR) மூலம் வாக்காளர் பட்டியலிலிருந்து சுமார்...

Priyanka Gandhi: ‘మహిళలకు భద్రత లేకపోతే ఎన్ని పథకాలు పెడితే ఏం లాభం?’.. బీహార్, ఢిల్లీ ఘటనలపై ప్రియాంక గాంధీ ఆవేదన

దేశంలో మహిళలపై పెరుగుతున్న నేరాలపై కాంగ్రెస్ ఎంపీ ప్రియాంక గాంధీ వాద్రా...

ശമ്പളം കൊടുക്കാതിരിക്കാൻ എന്താണ് മാർഗം എന്ന നിലയിലേക്കാണ് ‘മാധ്യമം’ മാനേജ്‌മന്റ് പോകുന്നത് – ആർ. ചന്ദ്രശേഖരൻ

കോഴിക്കോട്: ശമ്പളസമരം ഒത്തുതീർക്കണമെന്നാവശ്യപ്പെട്ട് സംയുക്ത ട്രേഡ് യൂണിയ​ന്റെ നേതൃത്വത്തിൽ ‘മാധ്യമം’ ദിനപത്രത്തിന്റെ...