18
April, 2026

A News 365Times Venture

18
Saturday
April, 2026

A News 365Times Venture

ಶಾಸಕ ಜನಾರ್ಧನ್ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಸಸಿಕಾಂತ್ ಸೆಂಥಿಲ್

Date:

ಬೆಂಗಳೂರು ,ಸೆಪ್ಟಂಬರ್,6,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದು ಆರೋಪ ಮಾಡಿದ್ದ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ವಿರುದ್ದ ಸಂಸದ ಸಸಿಕಾಂತ್ ಸೆಂಥಿಲ್ ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಸಿಕಾಂತ್ ಸೆಂಥಿಲ್, ನಾನು 10 ವರ್ಷಗಳ ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಆರೋಪ ಮಾಡಿದ ವ್ಯಕ್ತಿ ಯಾರು ಗೊತ್ತಾ? ಕರ್ನಾಟಕದ ಸಂಪತ್ತು ಲೂಟಿ ಹೊಡೆದು 7 ವರ್ಷ ಜೈಲಿನಲ್ಲಿ ಇದ್ದವರು. ಶಾಸಕ ಜನಾರ್ದನ ರೆಡ್ಡಿ ರಾಜ್ಯದ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಇಮೇಜ್ ತಂದಿದ್ದಾರೆ, ಇಂಥವರು ನನ್ನ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯವರು ತಮ್ಮ ಹೆಸರನ್ನು ಎಳೆದು ತರುತ್ತಿರುವ ಬಗ್ಗೆ ಸ್ಪಷ್ಟೀಕರಣ ಕೋರಿ ನ್ಯಾಯಾಲಯದ ಮುಂದೆ ದೂರು ದಾಖಲಿಸಿದ್ದೇನೆ. ಚೈಲ್ಡಿಶ್ ಗಳಿಗೆ ಉತ್ತರ ಕೊಡಬೇಕಾ ಅಂತ ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಪ್ರತಿದಿನ ಒಂದು ಸ್ಟೋರಿ ಬರುತ್ತಿದೆ ಇದು ಸರಿಯಾದ ಸಮಯವೆಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಎಂದು ತಿಳಿಸಿದರು.

Key words: Sasikant Senthil, MP, defamation case, against, MLA, Janardhan Reddy

The post ಶಾಸಕ ಜನಾರ್ಧನ್ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಸಸಿಕಾಂತ್ ಸೆಂಥಿಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ആ നുണയും മായ്ച്ചു; വയനാട് ടൗണ്‍ഷിപ്പിലെ വീടിന് വിള്ളലെന്നത് വ്യാജ വാര്‍ത്തയെന്ന് മന്ത്രി കെ. രാജന്‍; നേരിട്ടെത്തി പരിശോധന

കല്പറ്റ: വയനാട് ദുരന്തബാധിധർക്കായി സർക്കാർ നിർമിച്ച വീടുകളിൽ വിള്ളൽ കണ്ടെന്ന വാർത്തയെ...

"தமிழக மக்களை சொந்த நாட்டிலேயே அகதிகளாக்க பார்த்த பாஜக, ஏவல் அடிமைகள் அதிமுக" – ஸ்டாலின்

நாடாளுமன்றத்தில் தொகுதி மறுவரையறை மசோதா தோல்வியைத் தழுவியதையொட்டி, தமிழ்நாடு முதலமைச்சர் ஸ்டாலின்...

Shreyas Iyer: ‘సర్పంచ్ సాబ్’.. శ్రేయస్ అయ్యర్‌కు ఆ పేరు ఎలా వచ్చిందో తెలుసా?

Shreyas Iyer: ఐపీఎల్‌లో పంజాబ్ కింగ్స్ జట్టును సక్సెస్‌పుల్‌గా నడిపిస్తున్న సారథిగా...

 ಸಚಿವ ಸ್ಥಾನದಿಂದ ಜಮೀರ್ ಇಳಿಸೋದು ಕೇವಲ ಊಹಾಪೋಹ- ದಿನೇಶ್ ಗುಂಡೂರಾವ್

ಮಂಗಳೂರು,ಏಪ್ರಿಲ್,18,2026 (www.justkannada.in):  ಸಚಿವ ಸ್ಥಾನದಿಂದ ಜಮೀರ್ ಅಹ್ಮದ್ ಖಾನ್ ಅವರನ್ನ...