8
February, 2026

A News 365Times Venture

8
Sunday
February, 2026

A News 365Times Venture

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಮೈಸೂರಿನ ಶಿಕ್ಷಕ ಮಧುಸೂದನ್ ಕೆ.ಎಸ್ ಆಯ್ಕೆ

Date:

ಮೈಸೂರು,ಆಗಸ್ಟ್,25,2025 (www.justkannada.in):  ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಮೈಸೂರಿನ ಶಿಕ್ಷಕ ಮಧುಸೂದನ್ ಕೆ.ಎಸ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಸ್ತುತ ಮೈಸೂರು ಜಿಲ್ಲೆ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಸಹಾಯಕ ವಿಜ್ಞಾನ ಶಿಕ್ಷಕರಾಗಿ ಮಧುಸೂದನ್ ಕೆ.ಎಸ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟಂಬರ್ 5 ಶಿಕ್ಷಕರ ದಿನಾಚಾರಣೆಯಂದು ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಮಧುಸೂದನ್ ಕೆ.ಎಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮಧುಸೂದನ್ ಕೆ.ಎಸ್ ಅವರು ಕೆ.ಆರ್ ನಗರದ ನಿವಾಸಿಯಾಗಿದ್ದು 2008ರಲ್ಲಿ ಶಿಕ್ಷಕರಾಗಿ ಆಯ್ಕೆಯಾಗಿ ಕೆಆರ್ ನಗರ ತಾಲ್ಲೂಕಿನ ಎರೆಮುದ್ದನಹಳ್ಳಿಯಲ್ಲಿ ಸೇವೆ ಆರಂಭಿಸಿದರು. ನಂತರ ಮುದ್ದನಹಳ್ಳಿಯಲ್ಲಿ ಶಿಕ್ಷಕರಾಗಿ ಬಳಿಕ ಭೇರ್ಯ  ಸಿಆರ್ ಪಿ ಆಗಿ ಕರ್ತವ್ಯ ನಿರ್ವಹಿಸಿದ್ದು ನಂತರ 2019ರಲ್ಲಿ ವರ್ಗಾವಣೆಗೊಂಡು ಪ್ರಸ್ತುತ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಸೂದನ್ ಅವರು ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿಗೂ ಕೂಡ ಭಾಜನರಾಗಿದ್ದರು.

Key words: Mysore, teacher, selected ,  National Teacher Award

The post ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಮೈಸೂರಿನ ಶಿಕ್ಷಕ ಮಧುಸೂದನ್ ಕೆ.ಎಸ್ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നൂറ് വര്‍ഷമെന്നത് ഒരു പ്രസ്ഥാനത്തെ സംബന്ധിച്ച് ചെറിയ കാര്യമല്ല; സമസ്തയെ പ്രശംസിച്ച് മുഖ്യമന്ത്രി

കാസര്‍ഗോഡ്: സമസ്ത കേരള ജംഇയ്യത്തുല്‍ ഉലമ കേരളത്തിന്റെ ബഹുജന പണ്ഡിത സഭയെന്ന്...

Cryptocurrency Tragedy: హైదరాబాద్ పాతబస్తీలో విషాదం.. క్రిప్టో నష్టాలతో యువకుడి ఆత్మహత్య

హైదరాబాద్ పాతబస్తీలో క్రిప్టోకరెన్సీ రూపంలో మరో నిండు ప్రాణం బలైంది. వేగంగా...

ಯುವ ಶಾಸಕರು ಡಿಕೆಶಿ ಬೆಂಬಲಕ್ಕೆ ನಿಂತಿದ್ದೇವೆ: ಪ್ರಾಣ ಬೇಕಾದ್ರೂ ಕೊಡ್ತೇವೆ- ಕಾಂಗ್ರೆಸ್ ಶಾಸಕ

ದಾವಣಗೆರೆ,ಫೆಬ್ರವರಿ,7,2026 (www.justkannada.in):  ರಾಜ್ಯದಲ್ಲಿ ಇದೀಗ ಅಧಿಕಾರ ಹಂಚಿಕೆ, ಕುರ್ಚಿ ವಿಚಾರದ...