26
July, 2026

A News 365Times Venture

26
Sunday
July, 2026

A News 365Times Venture

ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ- ಸುನೀಲ್ ಕುಮಾರ್ ಟೀಕೆ

Date:

ಬೆಂಗಳೂರು,ಆಗಸ್ಟ್,21,2025 (www.justkannada.in): ರಾಜ್ಯದಲ್ಲಿ ಈ ಸರ್ಕಾರದ ಆಡಳಿತದಲ್ಲಿ ಅನುದಾನ ಇಲ್ಲದೆ ಶಾಸಕರು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.  ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಟೀಕಿಸಿದರು.

ವಿಧಾನಸಭೆಯಲ್ಲಿ ನಿಯಮ 69 ರಡಿಯಲ್ಲಿ ಅನುದಾನದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧ ಕೆಲಸ ಆಗಿಲ್ಲ. ರಸ್ತೆಗೆ ಮಣ್ಣು ಹಾಕಲೂ ಈ ಸರ್ಕಾರ ಹಣ ಕೊಟ್ಟಿಲ್ಲ. ಒಂದೇ ಒಂದು ಕಿ.ಮೀ ಹೊಸ ರಸ್ತೆ ನಿರ್ಮಾಣ ಆಗಿಲ್ಲ. ಅನುದಾನವನ್ನ ಯಾರಿಂದ ಕೊಡಿಸುತ್ತೀರಿ  ಗ್ರಾಮಾಂತರ ಭಾಗದ ರಸ್ತೆಗಳ ಕಥೆ ಹೇಳೋಕೆ ಆಗುವುದಿಲ್ಲ  ರಸ್ತೆಯಲ್ಲಿ ಗುಂಡಿ ಹುಡುಕಬೇಕೋ ಗುಂಡಿಯಲ್ಲಿ ರಸ್ತೆ ಹುಡುಕಬೇಕೋ ಗೊತ್ತಾಗುತ್ತಿಲ್ಲ.  ಗ್ಯಾರಂಟಿ ಯೋಜನೆಗಳಿಂದ ಈ ಎಲ್ಲಾ ಚಟುವಟಿಕೆಗಳು ಬಂದ್ ಆಗಿವೆ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಸು ಫ್ರಮ್‌ ಸೋ ಸಿನಿಮಾ ಪ್ರಸಿದ್ದವಾಗಿದೆ. ಆದರೆ ನಾನು ಈ ಸರ್ಕಾರವನ್ನು ಬಿ ಫ್ರಮ್‌ ಸಿ ಎಂದು ಹೇಳುತ್ತೇನೆ. ಬೋಗಸ್‌ ಫ್ರಮ್‌ ಕಾಂಗ್ರೆಸ್.‌ ಕಳೆದ ಎರಡು ವರ್ಷದಲ್ಲಿ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಟೀಕೆ ಮಾಡಿದರು.

Key words: Session, grant, Discussion, BJP, MLA, Sunil kumar

The post ಕಾಂಗ್ರೆಸ್ ಸರ್ಕಾರ ಎರಡು ವರ್ಷ ಬೋಗಸ್‌ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ- ಸುನೀಲ್ ಕುಮಾರ್ ಟೀಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರದಲ್ಲಿ ರಾಜಿ ಇಲ್ಲ- ಸಿಜೆಪಿ ವಕ್ತಾರ

ನವದೆಹಲಿ,ಜುಲೈ,25,2026 (www.justkannada.in):  ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ...

தொகுதி மறுவரையறை மசோதா: 'அடுத்தகட்ட திட்டம் என்ன?' – கே.சி.வேணுகோபால் பதில்

நீட் தேர்வு முறைகேடு மற்றும் வினாத்தாள் கசிவு விவகாரத்தில் மத்திய பா.ஜ.க...