1
May, 2026

A News 365Times Venture

1
Friday
May, 2026

A News 365Times Venture

ಸಾರಿಗೆ ನೌಕರರ ಮುಷ್ಕರ: ಸಿಎಂ ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ- ಬಿ.ವೈ.ವಿಜಯೇಂದ್ರ

Date:

ಬೆಂಗಳೂರು, ಆಗಸ್ಟ್‌ 05,2025 (www.justkannada.in): ಸರ್ಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಕೂಡಲೇ ಪರಿಹಾರ ನೀಡಬೇಕು ಸಿಎಂ  ಸಿದ್ದರಾಮಯ್ಯ ಅವರು ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ಆಗ್ರಹಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆಗೆ  ಮಾತನಾಡಿದ ಬಿ ವೈ ವಿಜಯೇಂದ್ರ, ಮುಷ್ಕರದಿಂದ ಬಸ್ ಸಿಗದೇ ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆ ಆಗಿದೆ. ಜನರಿಗೆ ತೊಂದರೆಯಾಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಹಳ್ಳಿಗಳಲ್ಲಿ ಬಸ್ ಗಳನ್ನ ಕಡಿತ ಮಾಡಿದ್ದೀರಿ ಇದರಿಂದ ಬಸ್ ಗಳಿಲ್ಲದೆ ಈಗ ತೊಂದರೆಗೊಳಗಾಗಿದ್ದಾರೆ.  ಸರಕಾರಿ ಬಸ್ಸಿಲ್ಲದೆ ಕಾಲೇಜು, ಶಾಲಾ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದರು.

ಕೆಎಸ್‍ ಆರ್‍ಟಿಸಿ ಮತ್ತಿತರ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ತಿಂಗಳುಗಳಿಂದ ಆರ್ಥಿಕ ಮುಗ್ಗಟ್ಟು ಇದ್ದು, ಸಮಸ್ಯೆ ಉಲ್ಬಣವಾಗಿದೆ. ಹಾಗಾಗಿ ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡ ಮಾಡದೇ, ತಕ್ಷಣವೇ ಕಾರ್ಮಿಕರ ಮತ್ತು ಅಧಿಕಾರಿಗಳ ಸಭೆ ಕರೆಯಬೇಕು. ತಕ್ಷಣವೇ ಸಭೆ ಕರೆದು ಸೂಕ್ತತೀರ್ಮಾನ ತೆಗೆದಕೊಳ್ಳಬೇಕು ಇವತ್ತೇ ಸಭೆ ಕರೆದು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Key words: Transport employees, strike,  CM, meeting, B.Y. Vijayendra

 

The post ಸಾರಿಗೆ ನೌಕರರ ಮುಷ್ಕರ: ಸಿಎಂ ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ- ಬಿ.ವೈ.ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നെതന്യാഹുവിന് മാപ്പ് നല്‍കാന്‍ ഇസ്രഈല്‍ പ്രസിഡന്റിന് മേല്‍ ട്രംപിന്റെ കടുത്ത സമ്മര്‍ദം; ‘മാപ്പ് നല്‍കിയാല്‍ ഹെര്‍സോഗ് നാഷണല്‍ ഹീറോയാകും’

  വാഷിങ്ടണ്‍: അഴിമതിക്കേസുകളില്‍ വിചാരണ നേരിടുന്ന ഇസ്രഈല്‍ പ്രധാനമന്ത്രി ബെഞ്ചമിന്‍ നെതന്യാഹുവിന്...

'மோடியின் வசூல் வேட்டை தொடர்கிறது' – வணிக சிலிண்டர் விலை உயர்வுக்கு காங்கிரஸ் கண்டனம்

வணிகப் பயன்பாட்டிற்கான சிலிண்டர் விலை ஒரே நாளில் அதிரடியாக உயர்ந்துள்ளதால் பொதுமக்கள்...

Shocking: 55 ఏళ్ల గ్రామపెద్దతో లేచిపోయిన 22 ఏళ్ల భార్య..

Shocking: 22 ఏళ్ల వివాహిత మహిళ, తన కన్నా 33 ఏళ్ల...

ಎಲೆಕ್ಷನ್ ಮುಗಿದ ತಕ್ಷಣವೇ ಬೆಲೆ ಏರಿಕೆ: ಕೇಂದ್ರದ ವಿರುದ್ದ ಡಿಸಿಎಂ ಡಿಕೆಶಿ ಗುಡುಗು

ಬೆಂಗಳೂರು,ಮೇ,1,2026 (www.justkannada.in):  ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 993 ರೂ....