22
September, 2026

A News 365Times Venture

22
Tuesday
September, 2026

A News 365Times Venture

ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ- ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು,ಜೂನ್,20,2025 (www.justkannada.in): ಲೋನ್ ಕಟ್ಟುವುದು ತಡವಾಗಿದ್ದಕ್ಕೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ  ದಂಪತಿಯ ಮಗುವನ್ನ ಮೈಕ್ರೋ ಫೈನಾನ್ಸ್  ಸಿಬ್ಬಂದಿಗಳು ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್,  ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಲು ಈಗಾಗಲೇ ಕಠಿಣ ಕಾನೂನು ತಂದಿದ್ದೇವೆ. ಆದರೂ ಇಂತಹ ವರ್ತನೆ ಸರಿಯಲ್ಲ. ಮಗುವನ್ನ ಕರೆದೊಯ್ದವರು  ಕಠಿಣ ಹೃದಯಿಗಳು. ಮಾನವೀಯತೆ ಇಲ್ಲದವರು ಮಗುವನ್ನ ಅಪಹರಣ ಮಾಡಿದಾರೆ.  ಈ ಬಗ್ಗೆ ಇಂದು ಮೈಸೂರು ಪೊಲೀಸ್ ಕಮಿಷನರ್ ಅಥವಾ ಐಜಿ ಬಳಿ ಮಾತಾನಾಡುತ್ತೇನೆ. ಮಾತಾಡಿ‌ ಕ್ರಮ ತಗೋತೇವೆ ಎಂದರು.

ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನ ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್‌. ಪಾಟೀಲ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೇನೆ. ಬಿ. ಆರ್ ಪಾಟೀಲರು ಯಾವ ಅರ್ಥದಲ್ಲಿ ಹೇಳಿದಾರೆ ಅಂತಾ ಗೊತ್ತಿಲ್ಲ. ಅವರು ನೇರವಾಗಿ ಹೇಳಿಲ್ಲ. ವಸತಿ ಇಲಾಖೆ‌ ಸಚಿವರು ಜಮೀರ್ ಇದ್ದಾರೆ. ಯಾರು‌ ಲಂಚ ಕೇಳುತ್ತಿದ್ದಾರೆ ಅಂತಾ ದೂರು‌ ಕೊಡಲಿ,  ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.vtu

Key words: Mysore, Action. Against. Microfinance,Home Minister, Parameshwar

The post ಮಾನವೀಯತೆ ಇಲ್ಲದವರು ಮಗು ಅಪಹರಣ ಮಾಡಿದಾರೆ: ಮೈಕ್ರೋ ಫೈನಾನ್ಸ್ ವಿರುದ್ದ ಕ್ರಮ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

റോഡിന് വീതി കൂട്ടല്‍: അനധികൃത നിര്‍മാണമാരോപിച്ച്‌ കെട്ടിടങ്ങള്‍ പൊളിച്ചുനീക്കി ദല്‍ഹി പൊലീസ്

ന്യൂദല്‍ഹി: റോഡിന് വീതി കൂട്ടുന്നതിന്റെ ഭാഗമായി തെക്കന്‍ ദല്‍ഹിയിലെ ഛത്തര്‍പൂര് പ്രദേശത്തെ...

”நம்ம கட்சி திமுக கூடாரமா மாறிட்டு வருது தலைவரே…” – விஷமருந்தி தற்கொலைக்கு முயன்ற தவெக நிர்வாகி

தூத்துக்குடி மாவட்ட த.வெ.கவில், புறநகர் மாவட்ட செயலாளராக அமைச்சர் மதன் ராஜாவும்,...

ನೇಮಕಾತಿ ಪ್ರಮಾಣಪತ್ರ ಪಡೆಯಲು ಬಂದಿದ್ದ ವೇಳೆ ಕಾರು ಡಿಕ್ಕಿ: ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮೈಸೂರು,ಸೆಪ್ಟಂಬರ್‌,22,2026 (www.justkannada.in) ಕಾಲೇಜು ಮುಂಭಾಗ ನಿಂತಿದ್ದ ವೇಳೆ ಕಾರು ಡಿಕ್ಕಿಯಾಗಿ...