4
May, 2026

A News 365Times Venture

4
Monday
May, 2026

A News 365Times Venture

ಮೋದಿ ಸರ್ಕಾರದ ವೈಪಲ್ಯದಿಂದಲೇ ಪಹಲ್ಗಾಮ್ ನಲ್ಲಿ 26 ಅಮಾಯಕರು ಬಲಿ- ಮಲ್ಲಿಕಾರ್ಜುನ ಖರ್ಗೆ ಕಿಡಿ

Date:

ವಿಜಯನಗರ, ಮೇ, 20, 2025 (www.justkannada.in): ಪಹಲ್ಗಾಮ್ ನಲ್ಲಿ ಮೋದಿ ಸರ್ಕಾರ ಭದ್ರತೆ ಕೊಡಲಿಲ್ಲ. ಹೀಗಾಗಿ 26 ಅಮಾಯಕರ ಹತ್ಯೆಯಾಯಿತು. ಮೋದಿ ಸರ್ಕಾರದ ವೈಪಲ್ಯದಿಂದಲೇ ಹತ್ಯೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ಇಂದು ವಿಜಯನಗರದ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,  ಸಿಎಂ ಸಿದ್ದರಾಮಯ್ಯ ಸರ್ಕಾರವನ್ನ ಅಭಿನಂದಿಸುತ್ತೇನೆ.  ನಮ್ಮ ವಾಗ್ದಾನಗಳನ್ನ ನಾವು ಈಡೇರಿಸಿದ್ದೇವೆ. ಇದು ನಮ್ಮ ಸರ್ಕಾರದ ದೊಡ್ಡ ಸಾಧನೆ. ಮೋದಿಯವರು ಅನೇಕ ಗ್ಯಾರಂಟಿಗಳನ್ನ ಕೊಟ್ಟರು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ ಎಂದರು, ತಂದ್ರಾ? ನೋಟ್ ಬ್ಯಾನ್ ಮಾಡಿ ಬಡವರ ಸಂಸಾರ ಹಾಳು ಮಾಡಿದರು ಎಂದು ಕುಟುಕಿದರು.

ಕಾಂಗ್ರೆಸ್ ಪಕ್ಷ ನಿಮಗೆ ಹೆದರುವ ಪ್ರಶ್ನೆಯೇ ಇಲ್ಲ ನಾವು ಪಕ್ಷ ಪಂಗಡ ಕ್ರೆಡಿಟ್ ನೋಡಲ್ಲ.  ನಮಗೆ ದೇಶ ಮುಖ್ಯ.  ಕೇಂದ್ರದ ಬಿಜೆಪಿ ಸರ್ಕಾರ ದುರಾಡಳಿತ ನಡೆಸುತ್ತಿದೆ. ಕರ್ನಲ್ ಸೋಫಿಯಾ ಖುರೇಷಿ ಅವರ  ಬಗ್ಗೆ ಬಿಜೆಪಿ ಸಚಿವ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೆ ಆ ಸಚಿವರ ವಿರುದ್ದ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಬರೀ ಸುಳ್ಳಿನ ರಾಜಕೀಯ ಮಾಡುತ್ತಾರೆ. ಅವರಿಗೆ ಚುನಾವಣೆ ಮೇಲೆ ಹೆಚ್ಚು ಪ್ರೀತಿ.  ಬೊಗಳೆ ಭಾಷಣದಿಂದ ಎಂದೂ ದೇಶ ಉದ್ದಾರ ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

Key words: Pahalgam Attack, failure, Modi government. Mallikarjuna kharge

The post ಮೋದಿ ಸರ್ಕಾರದ ವೈಪಲ್ಯದಿಂದಲೇ ಪಹಲ್ಗಾಮ್ ನಲ್ಲಿ 26 ಅಮಾಯಕರು ಬಲಿ- ಮಲ್ಲಿಕಾರ್ಜುನ ಖರ್ಗೆ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

2027 അല്ല 2047 ആയാലും സമാജ്‌വാദി പാര്‍ട്ടി അധികാരത്തിലെത്തില്ല; അഖിലേഷിനെതിരെ പരിഹാസവുമായി യു.പി ഉപമുഖ്യമന്ത്രി

ലഖ്നൗ: ഉത്തര്‍പ്രദേശ് രാഷ്ട്രീയത്തില്‍ ഭരണകക്ഷിയായ ബി.ജെ.പിയും സമാജ്‌വാദി പാര്‍ട്ടിയും (എസ്.പി) തമ്മിലുള്ള...

Assembly Elections Results 2026: రిజల్ట్ డే.. తమిళనాడు, బెంగాల్ ఫలితాలపైనే ఉత్కంఠ..

Assembly Elections Results 2026: నాలుగు రాష్ట్రాలు, ఒక కేంద్రపాలిత ప్రాంతానికి...

ഖലിസ്ഥാനെ തീവ്രവാദികളെ രാജ്യസുരക്ഷാ ഭീഷണിയായി പ്രഖ്യാപിച്ച് കാനഡ

  ഒട്ടാവ: ഖലിസ്ഥാന്‍ തീവ്രവാദികളെ രാജ്യസുരക്ഷാ ഭീഷണിയായി പ്രഖ്യാപിച്ച് കാനഡ. രഹസ്യാന്വേഷണ...