24
August, 2026

A News 365Times Venture

24
Monday
August, 2026

A News 365Times Venture

ಗುಂಡಿನ ದಾಳಿಗೆ ವ್ಯಕ್ತಿ ಬಲಿ: ತಮ್ಮನನ್ನ ಹತ್ಯೆಗೈದ ಅಣ್ಣ..?

Date:

ಕೊಡಗು,ಮೇ,7,2025 (www.justkannada.in):  ಕೊಡಗಿನಲ್ಲಿ ಗುಂಡಿನ ಸದ್ದು ಕೇಳಿದ್ದು  ಗುಂಡಿನ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ  ಮಂಗಲದಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಿನು ಕುಮಾರ್ (53) ಮೃತಪಟ್ಟ ವ್ಯಕ್ತಿ. ತೋಟದಲ್ಲಿ ಕೆಲಸ ಮಾಡುವ ವೇಳೆ ವಿನು ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ.

ಆಸ್ತಿ ವಿಚಾರಕ್ಕೆ ಅಣ್ಣ ತಮ್ಮನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೀಗ  ಮೃತ ವಿನು ಕುಮಾರ್ ಅಣ್ಣ ಮಣಿ ಎಂಬ ವ್ಯಕ್ತಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಅಣ್ಣ ಮಣಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ತೋಟದಲ್ಲಿ‌ ಕೆಲಸ ಮಾಡುತ್ತಿದ್ದ ವೇಳೆ ವಿನುಕುಮಾರ್ ಮೇಲೆ ಗುಂಡಿ ಹಾರಿಸಿ ಕೊಲೆ ಮಾಡಲಾಗಿದ್ದು, ಗುಂಡಿನ  ಶಬ್ದ ಕೇಳಿ ಸ್ಥಳಕ್ಕೆ ಸ್ಥಳೀಯರು ಬಂದಿದ್ದು ಅಷ್ಟರಲ್ಲೇ ಗುಂಡು ಹಾರಿಸಿದ ವ್ಯಕ್ತಿ ಪರಾರಿಯಾಗಿದ್ದನು.  ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್  ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Key words: Man, killed, firing, Brother, Kodagu

.

The post ಗುಂಡಿನ ದಾಳಿಗೆ ವ್ಯಕ್ತಿ ಬಲಿ: ತಮ್ಮನನ್ನ ಹತ್ಯೆಗೈದ ಅಣ್ಣ..? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Udhayanidhi: “தஞ்சாவூர் மாவட்டத்தில் பேசும்போது மிகவும் ஜாக்கிரதையாகப் பேச வேண்டும்" – உதயநிதி

எதிர்க்கட்சித் தலைவர் உதயநிதி ஸ்டாலின் தஞ்சாவூரில் நடந்த திருமண நிகழ்ச்சி ஒன்றில்...

Home Remedies: వర్షాకాలంలో ఇంట్లో జెర్రులు, దోమలు, చీమలు, నల్లులకు చెక్ పెట్టే చిట్కాలు ఇవే!

Home Remedies: వర్షాకాలం వస్తే చాలు వర్షపు చినుకులతో పాటు రకరకాల...

മദ്യപിക്കാനുള്ള ക്ഷണം നിരസിച്ചു; ട്രെയിനില്‍ മുസ്‌ലിം വിദ്യാര്‍ത്ഥിക്ക് ക്രൂര മര്‍ദനം

ലഖ്‌നൗ: മദ്യം കഴിക്കാന്‍ വിസമ്മതിച്ചതിനെ തുടര്‍ന്ന് മദ്യപ സംഘം മുസ്‌ലിം യുവാവിനെ...