21
September, 2026

A News 365Times Venture

21
Monday
September, 2026

A News 365Times Venture

ಧರೆಗುರುಳಿದ 250 ವರ್ಷದ ಹಿಂದಿನ ಆಲದ ಮರ: ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶ

Date:

ಮೈಸೂರು,ಏಪ್ರಿಲ್,30,2025 (www.justkannada.in):  ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ 250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಧರೆಗೆ ಉರುಳಿದ್ದು, ಪರಿಣಾಮ ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶವಾಗಿರುವ ಘಟನೆ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬೀರೇಗೌಡ ಎಂಬುವರಿಗೆ ಸೇರಿದ ಆಲದ ಮರ ಭಾರಿ ಮಳೆ ಗಾಳಿಗೆ ಬುಡ ಸಮೇತ ಉರುಳಿ ಬಿದ್ದಿದ್ದು ಇದರಿಂದಾಗಿ ಆರು ತೆಂಗಿನ ಮರ, ನಾಲ್ಕು ಮಾವಿನ ಮರಗಳು ಸಂಪೂರ್ಣ ನಾಶವಾಗಿದೆ.

250 ವರ್ಷಗಳ ಹಿಂದಿನ ಪುರಾತನ ಕಾಲದ ಆಲದ ಮರ ಇದಾಗಿದ್ದು, ಇದರಿಂದಾಗಿ ಮಾವಿನ ಫಸಲು ಸಂಪೂರ್ಣ ನೆಲಕಚ್ಚಿದೆ. ಬಾದಾಮಿ ಮಾವಿನ ಕಾಯಿಗಳು ಸಂಪೂರ್ಣ ನೆಲಕ್ಕುದುರಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶವಾಗಿದ್ದು, ನಾಲ್ಕು ಮಾವಿನ ಮರದಿಂದ ಸುಮಾರು ನಾಲ್ಕು ಟನ್ ಮಾವು ಕಟಾವಿಗೆ ಬಂದಿತ್ತು. ಆದರೆ ಇದೀಗ ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದೆ.

Key words: Rain, banyan tree, Destroy , mango, crop

The post ಧರೆಗುರುಳಿದ 250 ವರ್ಷದ ಹಿಂದಿನ ಆಲದ ಮರ: ಲಕ್ಷಾಂತರ ಮೌಲ್ಯದ ಮಾವಿ‌ನ ಬೆಳೆ ನಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മണിപ്പൂരില്‍ വീണ്ടും വെടിവെപ്പ്: 15 വയസുള്ള കുട്ടി കൊല്ലപ്പെട്ടു

ഇംഫാല്‍: മണിപ്പൂരിലെ തമെങ്‌ലോങ് ജില്ലയിലെ തമേയ് മേഖലയില്‍ അജ്ഞാതരായ ആയുധധാരികള്‍ നടത്തിയ...

"மக்கள் தங்குவதற்கு கட்டடம் இருக்கு; ஆனால்…" – விகடன் செய்திக்கு எழும்பூர் மருத்துவமனை விளக்கம்

முதல்வர் விஜய் ஆய்வு நடத்திய எழும்பூர் மகப்பேறு மருத்துவமனையில் அனுமதிக்கப்படும் பெண்களுக்கு...

Virat Curve 5G: 3డీ కర్వ్డ్ AMOLED డిస్‌ప్లే, 6000mAH బ్యాటరీ.. రేపు మధ్యాహ్నం 12 గంటలకు మార్కెట్లోకి విడుదల..

భారతీయ మార్కెట్లో విడుదల కానున్న కొత్త స్మార్ట్‌ఫోన్ లావా విరాట్ కర్వ్...

ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಪತ್ರಕರ್ತರಿಂದ ಒತ್ತಾಯ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in):  ರಾಜ್ಯದ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು...