30
April, 2026

A News 365Times Venture

30
Thursday
April, 2026

A News 365Times Venture

ಪಿಯು ಫಲಿತಾಂಶ : ಸೈನ್ಸ್‌, ಆರ್ಟ್ಸ್‌, ಕಾಮರ್ಸ್‌ ಮೂರರಲ್ಲೂ ಹೆಣ್ಮಕ್ಕಳೇ ಟಾಪರ್ಸ್..!‌

Date:

ಬೆಂಗಳೂರು, ಏ.೦೮,೨೦೨೫ : ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಎಂದಿನಂತೆ ಹೆಣ್ಮಕ್ಕಳೆ ಟಾಪರ್ಸ್‌ .  ಕಲಾ, ವಾಣಿಜ್ಯ, ವಿಜ್ಞಾನ ಮೂರೂ ವಿಭಾಗಗಳಲ್ಲೂ ಮೇಲುಗೈ ಸಾಧಿಸುವ ಮೂಲಕ ವಿದ್ಯಾರ್ಥಿನಿಯರು ದಾಖಲೆ ಬರೆದಿದ್ದಾರೆ.

ಮಂಗಳೂರಿನ ಕೊಡಿಬೈಲ್​ನ ಎಕ್ಸ್​ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ಎಸ್. 597 ಅಂಕ ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ  ಐಎನ್​ಡಿಪಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್.ಆರ್.ಸಂಜನಾ ಬಾಯಿ  597 ಅಂಕ ಗಳಿಸುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಂಗಳೂರಿನ ಕೊಡಿಂಬೈಲ್​ನ ಕೆನೆರಾ ಪಿಯು ಕಾಲೇಜಿನಿ ವಿದ್ಯಾರ್ಥಿನಿ ದೀಪಾಶ್ರೀ ಎಸ್. 599 ಅಂಕ ಗಳಿಸುವ ಮೂಲಕ ವಾಣಿಜ್ಯ ವಿಭಾಗದಲ್ಲಿ ಟಾಪರ್​ ಆಗಿದ್ದಾರೆ.

ಉಡುಪಿ ಫಸ್ಟ್​- ಯಾದಗಿರಿ ಲಾಸ್ಟ್​:

ರಾಜ್ಯದಲ್ಲಿ ಉಡುಪಿ ಜಿಲ್ಲೆ 93.90 ಫಲಿತಾಂಶ ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಶೇ.48.45 ಫಲಿತಾಂಶ ತನ್ನದಾಗಿಸಿಕೊಂಡಿದೆ.

ರಾಜ್ಯದಲ್ಲಿ ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.53, ವಾಣಿಜ್ಯ ವಿಭಾಗದಲ್ಲಿ ಶೇ.76.07, ಹಾಗೂ ವಿಜ಼್ಞಾನ ವಿಭಾಗದಲ್ಲಿ ಶೇ.82ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

key words: PU results, Girl’s topper, Karnataka

PU results: Girl’s topper in science, arts and commerce

The post ಪಿಯು ಫಲಿತಾಂಶ : ಸೈನ್ಸ್‌, ಆರ್ಟ್ಸ್‌, ಕಾಮರ್ಸ್‌ ಮೂರರಲ್ಲೂ ಹೆಣ್ಮಕ್ಕಳೇ ಟಾಪರ್ಸ್..!‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുഖ്യമന്ത്രി സ്ഥാനത്തേക്ക് വി.ഡി സതീശന്‍ എന്നതാണ് ജനവികാരം; പിന്തുണയുമായി മുസ്‌ലിം ലീഗ്

മലപ്പുറം: പ്രതിപക്ഷ നേതാവ് വി.ഡി സതീശന് പരസ്യ പിന്തുണയുമായി മുസ്‌ലിം ലീഗ്....

`திமுக வரக்கூடாது' – கலக்கத்தில் தவாக டு எதிர்ப்பு காட்டிய நிர்வாகி; அச்சத்தில் அமைச்சர்! | கழுகார்

கலக்கத்தில் த.வா.க"தி.மு.க ஆட்சிக்கு வரக்கூடாது!"தி.மு.க ஆட்சிக்கு வந்துவிடக்கூடாது என, அ.தி.மு.க-வினரைவிட அதிகமாக...

ಇಂದು ಅರಣ್ಯ ಇಲಾಖೆ ಹಂಗಾಮಿ ನೌಕರಿಂದ ಮುಷ್ಕರ

ಬೆಂಗಳೂರು,ಏಪ್ರಿಲ್,30,2026 (www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಇಂದು ಅರಣ್ಯ...