23
September, 2026

A News 365Times Venture

23
Wednesday
September, 2026

A News 365Times Venture

ನಾಳೆ ಬಜೆಟ್: ಮತ್ತೆ ದಲಿತರ ಹಣ ದುರ್ಬಳಕೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ- ಬಿ.ವೈ ವಿಜಯೇಂದ್ರ

Date:

ಬೆಂಗಳೂರು,ಮಾರ್ಚ್,6,2025 (www.justkannada.in):  ನಾಳೆ ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದೀರಿ. ಆದರೆ ಮತ್ತೆ ದಲಿತರ ಹಣ ದುರ್ಬಳಕೆ ಮಾಡುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದರು.

ಗ್ಯಾರಂಟಿ ಯೋಜನೆಗೆ  ಎಸ್ ಸಿಎಸ್ಪಿ, ಟಿಎಸ್ಪಿ  ಹಣವನ್ನ ಬೇರೆ  ಯೋಜನೆಗಳಿಗೆ ಬಳಕೆ ಮಾಡುವುದನ್ನ ವಿರೋಧಿಸಿ ಸರಕಾರದ ವಿರುದ್ದ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ  ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ ಬಿವೈ ವಿಜಯೇಂದ್ರ, ದಲಿತರ ಅಭಿವೃದ್ದಿಗೆ ಮೀಸಲಿಟ್ಟ ಹಣ ಬೇರೆ ಕಾರಣಕ್ಕೆ ಬಳಕೆ ಮಾಡಲಾಗುತ್ತಿದೆ.  ಈ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ.  ನಿಮ್ಮ ಧ್ವನಿಯಾಗಿ ನಾನು ಬಂದಿದ್ದೇನೆ.  ಇಂತಹ ಕರಾಳ ದಿನ ನಿರೀಕ್ಷೆ ಮಾಡಿರಲಿಲ್ಲ.  ದಲಿತರು ಬೀದಿಗಿಳಿದು ಹೋರಾಟ ಮಾಡುವ ಕಾಲ ಬಂದಿದೆ. ಸಿದ್ದರಾಮಯ್ಯನವರೇ ದಲಿತರ ಪರ ಕಾಳಜಿ ಎಲ್ಲಿಗೆ ಹೋಯಿತು  ಅಧಿಕಾರ ಬಂದ ಮೇಲೆ ಕಾಂಗ್ರೆಸ್ ಗೆ ದಲಿತರ ಮೇಲಿನ ಕಾಳಜಿ ಮುಗಿಯಿತಾ ..? ಸಿದ್ದರಾಮಯ್ಯ ಅನುಭವಿ ಸಿಎಂ ಆದರೆ ಅಸಹಾಯಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೆ  ಬಿಎಸ್ ವೈ ಅಧಿಕಾರದಲ್ಲಿದ್ದಾಗ ಸುಳ್ಳು ಭರವಸೆ ನೀಡಿಲ್ಲ . ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆ ಈಡೇರಿಸಿಲ್ಲ. ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರ ಕೊಡಬೇಕಿದೆ.  25 ಸಾವಿರ ಕೋಟಿಗೂ ಹೆಚ್ಚು ಹಣ ದುರ್ಬಳಕೆಯಾಗಿದೆ.  ನಾವು ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು. ‘

Key words: Budget, Don’t, misusing, Dalit community, money, B.Y. Vijayendra

The post ನಾಳೆ ಬಜೆಟ್: ಮತ್ತೆ ದಲಿತರ ಹಣ ದುರ್ಬಳಕೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ- ಬಿ.ವೈ ವಿಜಯೇಂದ್ರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇറാനെ നരകത്തിലേക്ക് തള്ളിവിടണോ, അതോ കരാറില്‍ ഏര്‍പ്പെടണോ; യു.എന്‍ പൊതുസഭയില്‍ കടുത്ത മുന്നറിയിപ്പുമായി ട്രംപ്

ന്യൂയോര്‍ക്ക്: ഇറാനുമായി കരാറിലെത്തണോ അതോ രാജ്യത്തെ പൂര്‍ണമായി തകര്‍ക്കണോ എന്നത് സംബന്ധിച്ച്...

தாராபுரம்: திமுக நிர்வாகிகள் வீட்டில் ரூ.48 லட்சம் பறிமுதல்| தீவிர விசாரணையில் தேர்தல் பறக்கும் படை!

திருப்பூர் மாவட்டம் தாராபுரம் (தனி) தொகுதியில் அக்டோபர்- 6- ம் தேதி...

Telangana 22A Land List: 22A నిషేధిత జాబితాపై NHRC సీరియస్.. తెలంగాణ సీఎస్‌కు కీలక ఆదేశాలు

Telangana 22A Land List: తెలంగాణలో సంచలనంగా మారింది 22A.. రాష్ట్రంలో...

ദല്‍ഹി എസ്.ഐ.ആര്‍: വോട്ടര്‍മാര്‍ക്ക് നല്‍കിയ നോട്ടീസുകള്‍ യന്ത്രനിര്‍മിതമെന്ന് സുപ്രീം കോടതി

ന്യൂദല്‍ഹി: ദല്‍ഹിയിലെ വോട്ടര്‍ പട്ടിക പ്രത്യേക തീവ്രപരിഷ്‌കരണവുമായി (എസ്.ഐ.ആര്‍) ബന്ധപ്പെട്ട് വോട്ടര്‍മാര്‍ക്ക്...