20
August, 2026

A News 365Times Venture

20
Thursday
August, 2026

A News 365Times Venture

ಜಮೀನಿನ ಬೆಳೆಗೆ “ ವಕ್ರದೃಷ್ಠಿ”  ಬೀಳದಂತೆ ರೈತನ “ ಮಾಡೆಲ್‌ “ ಪ್ಲಾನ್..!

Date:

ಮೈಸೂರು, ಫೆ.೨೦, ೨೦೨೫:  ಫಲವತ್ತಾದ ಕೃಷಿ ಭೂಮಿಯಲ್ಲಿ ಸೊಗಸಾಗಿ ಬೆಳೆದ ಬೆಳೆಗೆ ಸಾರ್ವಜನಿಕರ ದೃಷ್ಟಿ ಬೀಳಬಾರದೆಂಬ ಕಾರಣಕ್ಕೆ ಭೂತದ ಮುಖವಾಡ ಇರುವ ಬೆಚ್ಚಿದ ಬೊಂಬೆಗಳನ್ನು  ಅಳವಡಿಸುವುದನ್ನ ನೋಡಿದ್ದೇವೆ. ಆದ್ರೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಚುಂಚನಹಳ್ಳಿಯ ಬಳಿ ಇರುವ  ಕಕ್ಕನ ಹಟ್ಟಿ ಗ್ರಾಮದ  ರೈತ ಐನಾತಿ ಐಡಿಯಾ ಹುಡುಕಿದ್ದಾನೆ. ಅರೆಬೆತ್ತಲೆಯಾಗಿ ಇರುವ ಮಾಡೆಲ್ ಗಳ ಫೋಟೋಗಳನ್ನ ತನ್ನ ಜಮೀನಿನ ಸುತ್ತ ಅಳವಡಿಸಿ ಗ್ರಾಮಸ್ಥರು ಮತ್ತು ದಿನನಿತ್ಯ ಸಂಚರಿಸುವ ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣನಾಗಿದ್ದಾನೆ.

ನಂಜನಗೂಡು ತಾಲೂಕಿನ ಕಕ್ಕನಹಟ್ಟಿ ಗ್ರಾಮದ ರೈತ ಸೋಮೇಶ್ ಇಂತಹ ಐನಾತಿ ಐಡಿಯಾ ಹುಡುಕಿ ಚರ್ಚೆಗೆ ಗ್ರಾಸವಾಗಿರುವುದು.

ತನ್ನ ನಾಲ್ಕು ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸೊಗಸಾಗಿ ಮೂಡಿ ಬಂದಿದೆ.ಬೆಳೆ ಮೇಲೆ ಸಾರ್ವಜನಿಕರು ಮತ್ತು ದಾರಿಹೋಕರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ದೃಷ್ಟಿ ಬೊಂಬೆಗಳನ್ನ ಅಳವಡಿಸುವ ಬದಲು ಮಾಡೆಲ್ ಗಳ ಅರೆಬೆತ್ತಲೆ ಫೋಟೋಗಳನ್ನ ಅಳವಡಿಸಿದ್ದು, ಜಮೀನಿನ ಸುತ್ತು ಸುಮಾರು 10 ಸ್ಥಳಗಳಲ್ಲಿ ಮಾಡೆಲ್ ಗಳ ಚಿತ್ರಗಳು ರಾರಾಜಿಸುತ್ತಿವೆ.

ದಾರಿಹೋಕರಂತೂ ಸೊಗಸಾಗಿ ಸಮೃದ್ದಿಯಾಗಿ ಬೆಳೆದ ಬಾಳೆ ಗಿಡಗಳ ಮೇಲೆ ದೃಷ್ಟಿ ಹರಿಸದೆ ಮಾಡೆಲ್ ಗಳನ್ನ ಕಣ್ತುಂಬಿಕೊಂಡು ಸಾಗುತ್ತಿದ್ದಾರಂತೆ. ರೈತ ಸೋಮೇಶ್ ಐನಾತಿ ಐಡಿಯಾ ಕೆಲವು ಗ್ರಾಮಸ್ಥರನ್ನ ಕೆರಳಿಸಿದ್ರೆ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವುದಂತೂ ಸುಳ್ಳಲ್ಲ.

key words: The farmer, model photos, crop, “crooked”.

The farmer’s “model” plan is to ensure that the crop of the farm does not get “crooked”.

The post ಜಮೀನಿನ ಬೆಳೆಗೆ “ ವಕ್ರದೃಷ್ಠಿ”  ಬೀಳದಂತೆ ರೈತನ “ ಮಾಡೆಲ್‌ “ ಪ್ಲಾನ್..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

'தலைவர் ஏண்டா அரசியலுக்கு வந்தார் என நினைத்தேன்…' – அமைச்சர் ஆனந்த் ஓபன் டாக்!

சட்டமன்றத்தில் இன்று நீர்வளத்துறைக்கான மானியக் கோரிக்கை விவாதம் நடந்திருந்தது. இதில் பதிலளித்து...

Tamil Nadu: CJPపై విజయ్ సర్కార్ సంచలన ఆదేశాలు.. ఆ తర్వాత యూ-టర్న్..

Tamil Nadu: తమిళనాడులో సీఎం విజయ్ నేతృత్వంలోని టీవీకే సర్కార్ కీలక...

EXCLUSIVE BREAKING NEWS: MDA ಬದಲಿ ನಿವೇಶನ ಹಂಚಿಕೆ ರದ್ದು: ₹2,000 ಕೋಟಿ ಮೌಲ್ಯದ 1,100 ನಿವೇಶನಗಳಿಗೆ ಕುತ್ತು!

  ಮೈಸೂರು, ಆ.19: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮ ಉಲ್ಲಂಘಿಸಿ...

മഹാത്മാ ഗാന്ധിയുടെ കുടുംബം സി.ജെ.പിക്കൊപ്പം നിൽക്കുന്നു; അത് തങ്ങളുടെ രാജ്യസ്നേഹത്തിനുള്ള ഒരു സർട്ടിഫിക്കറ്റെന്ന് അഭിജീത് ദീപ്കെ

ഛത്രപതി സംഭാജി നഗർ: മഹാത്മാഗാന്ധിയുടെ കുടുംബം തങ്ങൾക്കൊപ്പം നിൽക്കുന്നുവെന്നത് തങ്ങളുടെ രാജ്യസ്നേഹത്തിനുള്ള...