24
September, 2026

A News 365Times Venture

24
Thursday
September, 2026

A News 365Times Venture

ಉದಯಗಿರಿ ಕಲ್ಲು ತೂರಾಟ: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಿಗಾಗಿ ಪೊಲೀಸರ ಹುಡುಕಾಟ

Date:

ಮೈಸೂರು,ಫೆಬ್ರವರಿ,13,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ಪ್ರಚೋದನಾಕಾರಿ ಭಾಷಣವೇ ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಇದೀಗ ಪ್ರಚೋದನಾಕಾರಿ ಭಾಷಣ ಮಾಡಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬಾತನೇ ಪ್ರಚೋದನಾಕಾರಿ ಭಾಷಣ ಮಾಡಿದ್ದು ಎನ್ನಲಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿರುವ ಮುಷ್ತಾಕ್ ಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ

ಮುಫ್ತಿ ಮುಷ್ತಾಕ್ ಮಕ್ಬೋಲಿ ಮೈಕ್ ಹಿಡಿದು ಪ್ರಚೋದನೆ ಮಾಡಿದ್ದ ಎನ್ನಲಾಗಿದೆ. ಧರ್ಮಕ್ಕಾಗಿ ಬದುಕಿರುವ ಮುಸ್ಲಿಂರು ಇನ್ನು ಇದ್ದಾರೆ. ಧರ್ಮ ರಕ್ಷಣೆಯ ಬದ್ದತೆ ನಿನ್ನೆಯೂ ಇತ್ತು ಇವತ್ತು ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಂರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಆತನನ್ನು ನೇಣಿಗೆ ಹಾಕಬೇಕು. ಮರಣದಂಡನೆ ವಿಧಿಸಬೇಕು ನಿಮ್ಮ ಇಚ್ಚೆ ಏನು ? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲಾ ಮುಸ್ಲಿಂರು ಒಂದಾಗಿ ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳ ತಲೆ ಬೇಕಾದರೂ ಬಲಿ‌ಕೊಡುತ್ತೇವೆ ಎಂದು ಮುಷ್ತಾಕ್ ಮೈಕ್‌ ಮೂಲಕ ಕೂಗಿ ಕೂಗಿ ಹೇಳಿದ್ದ. ಇದರಿಂದ ಜನರು ಪ್ರಚೋದನೆಗೊಳಗಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸದ್ಯ ಪ್ರಚೋದನೆ ಮಾಡಿದ ಮುಷ್ತಾಕ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು 13 ಮಂದಿಯನ್ನ ಬಂಧಿಸಿದ್ದಾರೆ.

Key words: Udayagiri, stone pelting, provocative speech, Police,

The post ಉದಯಗಿರಿ ಕಲ್ಲು ತೂರಾಟ: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಿಗಾಗಿ ಪೊಲೀಸರ ಹುಡುಕಾಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഗ്യാനേഷ് കുമാറിനെ ജയിലിലടക്കണം; ബാലറ്റ് പേപ്പറുകള്‍ ഉപയോഗിച്ച് തെരഞ്ഞെടുപ്പുകള്‍ വീണ്ടും നടത്തണം: ഉദ്ധവ് താക്കറെ

ന്യൂദല്‍ഹി: മുഖ്യ തെരഞ്ഞെടുപ്പ് കമ്മീഷണര്‍ ഗ്യാനേഷ് കുമാറിനെതിരെ രൂക്ഷവിമര്‍ശനവുമായി ശിവസേന (യു.ബി.ടി)...

`தேர்தல் முடிவுகள் மீது கடும் சந்தேகங்களை எழுப்புகிறது; ஞானேஷ் குமார் பதவி விலக வேண்டும்!'- ஸ்டாலின்

வாக்காளர் சிறப்பு தீவிர திருத்தம் (SIR) மூலம் வாக்காளர் பட்டியலிலிருந்து சுமார்...

Priyanka Gandhi: ‘మహిళలకు భద్రత లేకపోతే ఎన్ని పథకాలు పెడితే ఏం లాభం?’.. బీహార్, ఢిల్లీ ఘటనలపై ప్రియాంక గాంధీ ఆవేదన

దేశంలో మహిళలపై పెరుగుతున్న నేరాలపై కాంగ్రెస్ ఎంపీ ప్రియాంక గాంధీ వాద్రా...

ശമ്പളം കൊടുക്കാതിരിക്കാൻ എന്താണ് മാർഗം എന്ന നിലയിലേക്കാണ് ‘മാധ്യമം’ മാനേജ്‌മന്റ് പോകുന്നത് – ആർ. ചന്ദ്രശേഖരൻ

കോഴിക്കോട്: ശമ്പളസമരം ഒത്തുതീർക്കണമെന്നാവശ്യപ്പെട്ട് സംയുക്ത ട്രേഡ് യൂണിയ​ന്റെ നേതൃത്വത്തിൽ ‘മാധ്യമം’ ദിനപത്രത്തിന്റെ...