ಬೆಂಗಳೂರು,ಜನವರಿ,31,2025 (www.justkannada.in): ಲಂಚ ಸ್ವೀಕರಿಸುವ ವೇಳೆ ಆರ್ ಐ ಮತ್ತು ಇಬ್ಬರು ಗ್ರಾಮಲೆಕ್ಕಾಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿದೆ.
ಜಮೀನು ಪೌತಿ ಖಾತೆ ಮಾಡಿಕೊಡಲು ವ್ಯಕ್ತಿಯೊಬ್ಬರ ಬಳಿ 2.5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಳುವಳ್ಳಿ ಗ್ರಾಮಲೆಕ್ಕಾಧಿಕಾರಿ ಮಡಿವಾಳಪ್ಪ ಹಾಗೂ ವಿಜಯಪುರ ಗ್ರಾಮಲೆಕ್ಕಾಧಿಕಾರಿ ಸುನಿಲ್ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದು ವಿಜಯಪುರದ ಆರ್ ಐ ಸತ್ಯನಾರಾಯಣ ಪರಾರಿಯಾಗಿದ್ದಾರೆ.
ಮೂವರು ಅಧಿಕಾರಿಗಳು ಗೌತಮ್ ಎನ್ನುವವರ ಬಳಿ ಜಮೀನು ಪೌತಿ ಖಾತೆ ಪೋಡಿ ಮಾಡಿಕೊಡಲು 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಗ್ರಾಮ ಲೆಕ್ಕಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಎಸ್ಪಿ ಪವನ್ ನೆಜ್ಜುರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Key words: Three officials, accepting, bribe, Lokayukta, Raid
The post ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಅಧಿಕಾರಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.