ಮೈಸೂರು,ಜನವರಿ,31,2025 (www.justkannada.in): ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಿ ಇಡಿ ತನಿಖೆ ನಡೆಸುತ್ತಿದೆ. ನನ್ನ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನನ್ನ ಟಾರ್ಗೆಟ್ ಮಾಡಿ ಇಡಿ ತನಿಖೆ ಮಾಡುತ್ತಿದ್ದಾರೆ . ತನಿಖೆ ಮಾಡುತ್ತಿರುವ ಲೋಕಾಯುಕ್ತ ಸ್ವತಂತ್ರ ತನಿಖೆ ಅಲ್ಲವೇ? ಬೇಕು ಅಂತಾನೆ ರಾಜಕೀಯ ಮಾಡಲಾಗುತ್ತಿದೆ. ಇಡಿ ರಿಲೀಸ್ ಮಾಡಿರುವುದು ಸೀಜ್ ರಿಪೋರ್ಟ್ ಅಷ್ಟೇ. ಅಕ್ರಮ ಹಣ ವರ್ಗಾವಣೆ ಆಗಿರುವುದಕ್ಕೆ ಸಾಕ್ಷಿ ಏನಿದೆ? ಇದು ಮನಿ ಲಾಂಡರಿಂಗ್ ಬರಲ್ಲ ಎಂದು ಕೋರ್ಟ್ ಹೇಳಿದೆ ಎಂದರು.
ಉದ್ದೇಶಪೂರ್ವಕವಾಗಿ ರಾಜಕೀಯ ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಪತ್ನಿಗೆ ಇಡಿಯವರು 2 ಬಾರಿ ನೋಟಿಸ್ ಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿ ನನ್ನ ಪತ್ನಿ ನ್ಯಾಯಾಲಯ ಮೊರೆಹೋಗಿದ್ದಾರೆ ಎಂದರು.
Key words: CM Siddaramaiah, ED, deliberately, targeting , me
The post ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಿ ಇಡಿ ತನಿಖೆ-ಸಿಎಂ ಸಿದ್ಧರಾಮಯ್ಯ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.