13
February, 2025

A News 365Times Venture

13
Thursday
February, 2025

A News 365Times Venture

BLACKLIST: ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಫೆ. ೬ ರಂದು ಪ್ರತಿಭಟನೆಗೆ ಕರೆ

Date:

 

ಬೆಂಗಳೂರು, ಜ.೨೭, ೨೦೨೫ :  ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು “ ಬ್ಲಾಕ್ ಲಿಸ್ಟ್”  ಮಾಡಿರುವ , ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಪ್ರತಿಭಟನಾ ಧರಣಿಗೆ ಕರೆ.

ಗಾಂಧಿನಗರದ ಫ್ರೀಡಂ ಪಾರ್ಕ್‌ ನಲ್ಲಿ ಫೆ. ೬ ರಂದು ಬೆಳಗ್ಗೆ ೯.೩೦ಕ್ಕೆ ಪ್ರತಿಭಟನೆ. ರಾಜ್ಯದ ಎಲ್ಲಾ ಸಾಮಾಜಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸುವಂತೆ  ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತರ ಒಕ್ಕೂಟ ಮನವಿ.

ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಮಾಹಿತಿ ಹಕ್ಕು ಬಳಕೆದಾರರ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಲಿಂಗೇಗೌಡ ಹೇಳಿದಿಷ್ಟು..

ಇಂದು 20 ಮಂದಿಯನ್ನು ಆಯೋಗ ಕಪ್ಪುಪಟ್ಟಿಗೆ ಸೇರಿಸಿದೆ. ಇದನ್ನುಆರಂಭದಲ್ಲೇ ವಿರೋಧಿಸಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಆರ್.ಟಿ.ಐ ಕಾರ್ಯಕರ್ತರನ್ನೇ ಬಗ್ಗು ಬಡಿಯುವ ವ್ಯವಸ್ಥೆ ನಿರ್ಮಾಣವಾಗುತ್ತದೆ.

ಕರ್ನಾಟಕ ಮಾಹಿತಿ ಆಯೋಗ, ಸಾಂವಿಧಾನಿಕವಾದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದೆ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವೇ ಮಾಹಿತಿ ಆಯುಕ್ತರಿಗೆ ತಿಳಿಯದಾಗಿದೆ. ಮಾಹಿತಿ ಆಯುಕ್ತರ ಈ ನಡೆ ಒಂದು ಸಾಂಕ್ರಾಮಿಕ ರೋಗವಿದ್ದಂತೆ.  ಇಂದು ಲಸಿಕೆ ಹಾಕದಿದ್ದರೆ, ಎಲ್ಲೆಡೆ ಹರಡುತ್ತದೆ. ಮಾಹಿತಿ ಹಕ್ಕು ಕಾಯ್ದೆಯನ್ನ, ಭ್ರಷ್ಟರ ಜೊತೆ ಶಾಮೀಲಾಗಿ ನಾಶ ಮಾಡುವ ಪ್ರಯತ್ನವಿದು.

ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರ ಹೋರಾಟವನ್ನು ಹತ್ತಿಕ್ಕುವ, ಮುಖ್ಯ ಆಯುಕ್ತರ ನಡೆಯನ್ನು ಖಂಡಿಸಿ ಹೋರಾಟಕ್ಕೆ ಕರೆ ನೀಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು, ಬ್ಯಾನ್ ಮಾಡಲು ಅಥವಾ ಕಪ್ಪುಪಟ್ಟಿಗೆ ಸೇರಿಸಲು ಯಾವ ಕಾನೂನಿನಲ್ಲಿ ಅವಕಾಶವಿಲ್ಲ. ಸಾಮಾಜಿಕ ಹೋರಾಟಗಾರರನ್ನು, ಕಾಯ್ದೆ ಬಳಸದಂತೆ ಕಪ್ಪು ಪಟ್ಟಿಗೆ ಸೇರಿಸುವ ಹಕ್ಕನ್ನು ಆಯುಕ್ತರಿಗೆ ಯಾರು ಕೊಟ್ಟರು  ಎಂದು ಪ್ರಶ್ನಿಸಿದರು.

ಮಾಹಿತಿ ಹಕ್ಕು ಕಾಯ್ದೆ ಹೇಗೆ ದುರ್ಬಳಕೆ ಆಗಿದೆ ಎಂಬುದನ್ನು ಆಯೋಗದ ಮುಖ್ಯ ಆಯುಕ್ತರು ಸಾಬೀತು ಪಡಿಸಬೇಕಾಗುತ್ತದೆ.  ಅಸಂವಿಧನಾತ್ಮಕವಾಗಿ ಮಾಹಿತಿ ಹಕ್ಕು ಕಾಯ್ದೆ ಬಳಕೆದಾರರನ್ನು ಬ್ಲಾಕ್ ಲಿಸ್ಟ್ ಮಾಡಿರುವ , ಕರ್ನಾಟಕ ಮಾಹಿತಿ ಆಯೋಗದ ನಡೆಯನ್ನು ಖಂಡಿಸಿ ಫೆ. ೬ ರಂದು ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ರಾಜ್ಯದ ಎಲ್ಲಾ ಸಾಮಾಜಿಕ ಹೋರಾಟಗಾರರು ಈ ಹೋರಾಟದಲ್ಲಿ ಭಾಗವಹಿಸುವಂತೆ ರಾಮಲಿಂಗೇಗೌಡ  ಮನವಿ ಮಾಡಿದರು.

KEY WORDS: BLACKLIST, Protest against, Karnataka Information Commission, on Feb.6th, RTI

SUMMARY:

BLACKLIST: Protest against Karnataka Information Commission, on Feb.6th

The Karnataka information commission’s move to “blacklist”  RTI activists has called for a sit-in. At Freedom Park in Gandhinagar. The protest will be held at 9.30 am on Feb. 6th. The Right to Information Users and Social Activists Federation has appealed to all social activists in the state to participate in this struggle.

 

The post BLACKLIST: ಕರ್ನಾಟಕ ಮಾಹಿತಿ ಆಯೋಗದ ನಡೆ ಖಂಡಿಸಿ ಫೆ. ೬ ರಂದು ಪ್ರತಿಭಟನೆಗೆ ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

மீண்டும் சர்ச்சையில் சிக்கிய மகா. அமைச்சர்; முதல் மனைவியை மறைத்த விவகாரத்தில் நீதிமன்றம் நோட்டீஸ்

மகாராஷ்டிரா சிவில் சப்ளை மற்றும் நுகர்வோர் பாதுகாப்புத்துறை அமைச்சராக இருப்பவர் தனஞ்சே...

Ambati Rambabu: వంశీని ఎందుకు అరెస్ట్ చేశారో అర్థం కావడం లేదు..

Ambati Rambabu: గన్నవరం మాజీ ఎమ్మెల్యే వల్లభనేని వంశీని పోలీసులు ఎందుకు...

ಗುಪ್ತಚರ ಎಂ.ಲಕ್ಷ್ಮಣ ಮತ್ತು ಭಾರತೀಯ ನ್ಯಾಯಸಂಹಿತೆ..!

ಮೈಸೂರು,ಫೆಬ್ರವರಿ,13,2025 (www.justkannada.in): ವ್ಯಕ್ತಿಯೊಬ್ಬನ ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಮೈಸೂರಿನ ಉದಯಗಿರಿ...

അശ്ലീലപരാമര്‍ശം; യൂട്യൂബര്‍ രണ്‍ബീര്‍ അല്ലാഹ്ബാദിയ ഉള്‍പ്പെടെയുള്ളവര്‍ക്കെതിരെ അസമിലും കേസ്

റായ്പൂര്‍: യൂട്യൂബ് ഷോയായ ഇന്ത്യാസ് ഗോട്ട് ലാറ്റന്റിലെ പോഡ്കാസ്റ്ററും യൂട്യൂബറുമായ രണ്‍വീര്‍...