15
February, 2025

A News 365Times Venture

15
Saturday
February, 2025

A News 365Times Venture

MUDA CASE: ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಾಳೆ.

Date:

 

ಬೆಂಗಳೂರು, ಜ.೨೪, ೨೦೨೫: (www.justkannada.in news)  ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಶನಿವಾರ (ಜ.25) ನಡೆಯಲಿದೆ.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿತ್ತು.

ಇದೇ ವೇಳೆ ನಾಳೆ, ಸಿಎಂ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭೂಮಾಲೀಕ ದೇವರಾಜ್‌ ಅವರ ಅರ್ಜಿ ಸಹ ವಿಚಾರಣೆಗೆ ಬರಲಿದೆ.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ವಿವಾದಿತ ಜಮೀನನ್ನು ಮುಖ್ಯಮಂತ್ರಿ  ಭಾಮೈದ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದ ಭೂಮಾಲೀಕ ಜೆ. ದೇವರಾಜು ಸಲ್ಲಿಸಿರುವ ಎರಡು ಪ್ರತ್ಯೇಕ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆ ನಾಳೆ, ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠದದಲ್ಲಿ ನಡೆಯಲಿದೆ.

ಸಿಎಂ ವಿರುದ್ಧ ವಿಚಾರಣೆಗೆ ಆದೇಶಿಸಿ ಸೆ.24ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಿಎಂ ಮೇಲ್ಮನವಿ ಸಲ್ಲಿಸಿದ್ದಾರೆ. ಸಂಬಂಧವಿಲ್ಲದಿದ್ದರೂ ನನ್ನನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ಆಕ್ಷೇಪಿಸಿ ದೇವರಾಜು ಮೇಲ್ಮನವಿ ಸಲ್ಲಿಸಿದ್ದಾರೆ.

key words: MUDA CASE, Appeal filed, Chief Minister Siddaramaiah, high court

MUDA CASE: Appeal filed by Chief Minister Siddaramaiah to be heard tomorrow.

The post MUDA CASE: ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಾಳೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಹಜ ಸ್ಥಿತಿಯತ್ತ ಮರಳಿದ ಉದಯಗಿರಿ: ಇಂದು ಗೃಹಸಚಿವರಿಂದ ಭೇಟಿ

ಮೈಸೂರು,ಫೆಬ್ರವರಿ,14,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ...

ആര്‍.രാജഗോപാല്‍ ദി ടെലഗ്രാഫിലെ എഡിറ്റര്‍ അറ്റ് ലാര്‍ജ് സ്ഥാനം രാജിവെച്ചു

കൊല്‍ക്കത്ത: പ്രമുഖ മാധ്യമ പ്രവര്‍ത്തകന്‍ ആര്‍.രാജഗോപാല്‍ ദി ടെലഗ്രാഫ് പത്രത്തിന്റെ എഡിറ്റര്‍...

பாலியல் புகாரில் IPS அதிகாரி சஸ்பெண்ட்: “குடும்பத்தை அவமானப்படுத்த நோக்கம்'' – DGP-யிடம் மனைவி மனு

சென்னையில் போக்குவரத்து இணை கமிஷனராகப் பணியாற்றி வரும் ஐ.பி.எஸ் அதிகாரி மகேஷ்குமார்...

Off The Record: పీక్స్లో మదనపల్లి తమ్ముళ్ల తన్నులాట

Off The Record: గ్రూపులకు కేరాఫ్‌గా మారిన ఆ నియోజకవర్గాన్ని సెట్...