24
June, 2026

A News 365Times Venture

24
Wednesday
June, 2026

A News 365Times Venture

ಮೈಸೂರು: ‘ಮನೆ‌ ಮನೆ ಹನುಮ’ ಕಾರ್ಯಕ್ರಮ ಚಾಲನೆ

Date:

ಮೈಸೂರು,ಜೂನ್,24,2026 (www.justkannada.in): ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ಧಿ ಬಡಾವಣೆಯ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ವಿಶ್ವ ಹಿಂದೂ ಪರಿಷತ್ ನ ಧರ್ಮ ಪ್ರಸಾರ ವಿಭಾಗದ ಮನೆ ಮನೆ ಹನುಮ ಧಾರ್ಮಿಕ ಕಾರ್ಯಕ್ರಮಕ್ಕೆ ವೀರಾಂಜನೇಯ ಮಹಾಸಂಸ್ಥಾನಮ್, ಹೇಮಾಪುರ  ಮಾಹಾಪೀಠಂ ಕ್ಷೇತ್ರ ಬಂಗಾರಮಕ್ಕಿಯ ಪೀಠಾಧಿಪತಿ ಮಾರುತಿ ಗುರೂಜಿ ಚಾಲನೆ ನೀಡಿದರು.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ ನ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಹಾಗೂ ಪ್ರತಿ ಮನೆಯಲ್ಲೂ ಹನುಮನ ಪೂಜೆಯ ಮೂಲಕ ಸನಾತನ ಧರ್ಮದ ಆಚರಣೆ ಹಾಗೂ ಜಾಗೃತಿ ಮೂಡಲಿ ಎಂದು ಮಾರುತಿ ಗುರೂಜಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್ ಮಾತನಾಡಿ ವಿಶ್ವ ಹಿಂದೂ ಪರಿಷತ್ ಹನುಮನ ಪೂಜೆಯನ್ನು ಮೈಸೂರಿನ ಪ್ರತಿ ಮನೆಯಲ್ಲೂ ಯಾವುದೇ ಬೇಧ ಭಾವವಿಲ್ಲದೆ ಎಲ್ಲರೂ ಪೂಜೆ ಮಾಡಬಹುದು ಎಂದು ತಿಳಿಸಿದರು.

ಧರ್ಮ ಪ್ರಸಾರ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಪುನೀತ್ ಜಿ, ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ. ಆರ್. ಗಣೇಶ್, ಉದ್ಯಮಿ ಮನು, ವಿಶ್ವ ಹಿಂದೂ ಪರಿಷತ್ ನ ನರಸಿಂಹ ಮೂರ್ತಿ, ಜಗದೀಶ್ ಹೆಬ್ಬಾರ್, ಮಂಜುನಾಥ್, ಹುಲಗಾದ್ರಿ, ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ನಿರ್ದೇಶಕಿ ಸರಸ್ವತಿ ಗಣೇಶ್, ದಿಲೀಪ್, ಮೂಕಾಂಬಿಕಾ ಸತ್ಸಂಗ ಅಧ್ಯಕ್ಷರಾದ ಶುಭಾ ಅರುಣ್, ನಂಜನಗೂಡು ಬ್ರಾಹ್ಮಣ ಸಂಘದ ಫಣೀಶ್, ಸುಧಾ ಪ್ರಕಾಶ್, ಶೈಲಾ, ಚಂದ್ರಶೇಖರ್, ಪೂಜಾ ಪುನೀತ್, ಹೇಮಾ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Key words: Mysore, Mane Mane Hanuma, program

The post ಮೈಸೂರು: ‘ಮನೆ‌ ಮನೆ ಹನುಮ’ ಕಾರ್ಯಕ್ರಮ ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

കിന്‍ഡര്‍ ആശുപത്രിയില്‍ നവജാത ശിശു മരിച്ച സംഭവം; ചികിത്സാപ്പിഴവ് മൂലമെന്ന് ഡി.എം.ഒ റിപ്പോര്‍ട്ട്

കൊച്ചി: കൊച്ചി കിന്‍ഡര്‍ ഹോസ്പിറ്റലില്‍ നവജാത ശിശുമരിച്ചത് ചികിത്സാ പിഴവ് മൂലമെന്ന്...

திருவானைக்காவல்: `டாஸ்மாக் கடையை மூடக் கூடாது' – போராட்டத்தில் குதித்த வியாபாரிகள்; என்ன நடந்தது?

திருச்சி, திருவானைக்காவல் அடுத்த அழகிரிபுரம் பகுதியில் இரண்டு டாஸ்மாக் கடைகள் செயல்பட்டு...

ಸಂಬಂಧಿ ಮೇಲೆ ಇಡಿ ದಾಳಿ ವಿಚಾರ: ನಾಳೆ ಮಾತನಾಡುತ್ತೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,24,2026 (www.justkannada.in): ತಮ್ಮ ಸಂಬಂಧಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ...