ತುಮಕೂರು,ಮೇ,19,2026 (www.justkannada.in): ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನವಿ ಮಾಡಿದರು.
ಇಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದರು.
ತುಮಕೂರು ಜಿಲ್ಲೆ ಬೆಂಗಳೂರಿಗೆ ಬಹಳ ಹತ್ತಿರವಿದೆ. ತುಮಕೂರನ್ನ ಬೆಂಗಳೂರಿನ ಒಂದು ಭಾಗ ಮಾಡಬೇಕೆಂದು ಒತ್ತಾಯ ಮಾಡುತ್ತೇವೆ. ತುಮಕೂರನ್ನ ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಮಾಡಿ. ಈಗಾಗಲೇ ತುಮಕೂರಿಗೆ ಮೆಟ್ರೋ ತರಲು ಸಿದ್ದತೆ ಮಾಡಿದ್ದೇವೆ. ಈಗ ತುಮಕೂರನ್ನು ಬೆಂಗಳೂರಿನ ಒಂದು ಭಾಗ ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.
Key words: Tumkur, ‘Bengaluru North District, Home Minister, Parameshwar
The post ತುಮಕೂರನ್ನು ‘ಬೆಂಗಳೂರು ಉತ್ತರ ಜಿಲ್ಲೆ’ ಎಂದು ಘೋಷಣೆ ಮಾಡಿ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





