16
May, 2026

A News 365Times Venture

16
Saturday
May, 2026

A News 365Times Venture

ನಂದಿನಿ ಉತ್ಪನ್ನ ಬಗ್ಗೆ ಅಪಪ್ರಚಾರ  ಮಾಡಿದರೇ ಅಗತ್ಯ ಕ್ರಮ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್‌

Date:

ಬೆಂಗಳೂರು,ಫೆಬ್ರವರಿ,18,2026 (www.justkannada.in):  ನಂದಿನಿ ಉತ್ಪನ್ನ ಬಳಸಿದರೆ ಕ್ಯಾನ್ಸರ್‌ ಬರುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವ  ಹಿನ್ನೆಲೆಯಲ್ಲಿ ಈ ಬಗ್ಗೆ  ಮಾಜಿ ಸಂಸದ, ಬಮೂಲ್‌ ಅಧ್ಯಕ್ಷ ಡಿ.ಕೆ. ಸುರೇಶ್‌ ಅವರು ಪ್ರತಿಕ್ರಿಯಿಸಿ ಅಗತ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್, ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿ. ನಂದಿನಿ ಉತ್ಪನ್ನಗಳನ್ನು ತಯಾರಿಸುವ ವೇಳೆ ಯಾವುದೇ ರೀತಿಯ ಕಲಬೆರಕೆ ಮಾಡುವುದಿಲ್ಲ. ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ. ಈ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ನಾವು ಖಾಸಗಿಯವರ ಜತೆ ಸ್ಪರ್ಧೆ ಮಾಡಬೇಕಾದಾಗ ಅಪಪ್ರಚಾರ ಮಾಡುವುದು ಸಹಜ. ನಂದಿನಿ ಯಾವತ್ತೂ ಗುಣಮಟ್ಟದ ಜತೆ ರಾಜಿಯಾಗಿಲ್ಲ. ನಂದಿನಿಗೆ ಎಷ್ಟೇ ನಷ್ಟವಾದರೂ ಎಂದಿಗೂ ಗ್ರಾಹಕರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡಿಲ್ಲ, ಗುಣಮಟ್ಟದ ಉತ್ಪನ್ನಗಳನ್ನು ಮುಂದೆಯೂ ನೀಡಲಿದೆ ಎಂದು ಡಿಕೆ ಸುರೇಶ್ ತಿಳಿಸಿದರು.

Key words: action, Nandini product, false information, D.K. Suresh

The post ನಂದಿನಿ ಉತ್ಪನ್ನ ಬಗ್ಗೆ ಅಪಪ್ರಚಾರ  ಮಾಡಿದರೇ ಅಗತ್ಯ ಕ್ರಮ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

രാഹുൽ ഗാന്ധിയുടെ വിദേശയാത്രകളിൽ ദുരൂഹത; സാമ്പത്തിക സ്രോതസ്സ് വെളിപ്പെടുത്തണമെന്ന് കിരൺ റിജിജു

ന്യൂദൽഹി: കോൺഗ്രസ് നേതാവും ലോക്‌സഭാ എം.പിയുമായ രാഹുൽ ഗാന്ധിയുടെ വിദേശയാത്രകളെയും അതിനായി...

'ஆயிரம் கோடிக்கணக்கில் இந்தியாவில் இருந்து வெளியேறும் பணம்' இந்திய ரூபாய் மதிப்பு ரூ.96-க்கு சரிவு!

அமெரிக்க டாலருக்கு எதிரான இந்திய ரூபாயின் மதிப்பு தொடர்ந்து வீழ்ச்சியடைந்துகொண்டே வருகிறது....

Shocking Love Story: ముసలోడికి దసరా పండగ.. 22 ఏళ్ల యువతితో పెళ్లి చేసిన గ్రామస్తులు..

Shocking Love Story: బీహార్ లోని కతిహార్‌లో ఒక లవ్ స్టోరీ...