12
February, 2026

A News 365Times Venture

12
Thursday
February, 2026

A News 365Times Venture

ಆಳಂದದ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

Date:

ಕಲಬುರಗಿ, ಫೆಬ್ರವರಿ,12,2026 (www.justkannada.in):  ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಹೌದು, ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಸುಪ್ರೀಂ ಕೋರ್ಟ್ ಸಂಪೂರ್ಣ ಅನುಮತಿ ನೀಡಿದೆ. ದರ್ಗಾ ಆವರಣದಲ್ಲಿ ಪೂಜೆಗೆ ಅವಕಾಶ ನೀಡಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಗಾ ಸಮಿತಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಪೂಜೆಗೆ ತಡೆ ನೀಡಲು ನಿರಾಕರಿಸಿದೆ.

ನೆನ್ನೆ ಕಲಬುರಗಿ ಹೈಕೋರ್ಟ್‌ ​ಪೀಠ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಅನುಮತಿ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್​ ಹೈಕೋರ್ಟ್​​ನ ಆದೇಶವನ್ನು ಎತ್ತಿ ಹಿಡಿದಿದೆ.

ಸಂವಿಧಾನದ 32ನೇ ವಿಧಿ (Article 32) ಇಂತಹ ಉದ್ದೇಶಗಳಿಗಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರ ವಿರುದ್ಧ ಗರಂ ಆಗಿದೆ.  ಕೂಡಲೇ ಅರ್ಜಿಯನ್ನು ಹಿಂಪಡೆಯುವಂತೆ ದರ್ಗಾ ಪರ ಅರ್ಜಿದಾರರಿಗೆ ಸೂಚನೆ ನೀಡಿತು.  ಆಳಂದದ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗವಿದ್ದು ಇಲ್ಲಿ ಪೂಜೆ ಸಲ್ಲಿಸುವ ವಿಚಾರವಾಗಿ ಕಳೆದ ಕೆಲವು ವರ್ಷಗಳಿಂದ ಎರಡು ಸಮುದಾಯಗಳ ನಡುವೆ ಕಾನೂನು ಹೋರಾಟ ನಡೆಯುತ್ತಿದೆ.

Key words: Supreme Court, green signal, Shivaratri puja , Alanda dargah

The post ಆಳಂದದ ದರ್ಗಾದಲ್ಲಿ ಶಿವರಾತ್ರಿ ಪೂಜೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

 ಮಹಾಶಿವರಾತ್ರಿ: ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು,ಫೆಬ್ರವರಿ,12,2026 (www.justkannada.in): ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಮೂಹ...

സ്‌പെഷ്യല്‍ എഡ്യൂക്കേറ്റര്‍മാരുടെ നിയമനം: സര്‍ക്കാര്‍ ഒന്നും ചെയ്തില്ലെന്ന് ഇടതുസംഘടന

തിരുവനന്തപുരം: സ്‌പെഷ്യല്‍ എഡ്യൂക്കേറ്റര്‍മാരുടെ നിയമനത്തില്‍ സര്‍ക്കാര്‍ നടപടിയെടുക്കുന്നില്ലെന്ന് വിമര്‍ശിച്ച് ഹരജിക്കാര്‍. സ്ഥിര...

`டெல்லி ஆட்சியாக இருந்தால் இருந்துட்டுப் போகட்டுமே' – சொல்கிறார் திண்டுக்கல் சீனிவாசன்

திண்டுக்கல்லில் எம்.வி.முத்தையா அரசு மகளிர் கலைக் கல்லூரி கௌரவ விரிவுரையாளர்கள் நடத்தும்...

Nepal vs Italy: ఇటలీ సంచలనం.. 10 వికెట్లతో అద్భుత విజయం!

Nepal vs Italy: ఐసీసీ పురుషుల టీ20 వరల్డ్ కప్ 2026...