28
August, 2026

A News 365Times Venture

28
Friday
August, 2026

A News 365Times Venture

ಮೈಸೂರು: ಸಿಸಿಬಿಯ 8 ಪೊಲೀಸರು ಎತ್ತಂಗಡಿ

Date:

ಮೈಸೂರು,ಫೆಬ್ರವರಿ,6,2026 (www.justkannada.in):  ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ ಜಾಲಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾದ ಆರೋಪದ ನಡುವೆ ಮೈಸೂರಿನ ಸಿಟಿ ಕ್ರೈಂ ಬ್ರಾಂಚ್‌ (CCB)ನಲ್ಲಿ ದೊಡ್ಡ ಮಟ್ಟದ ಬದಲಾವಣೆ ನಡೆದಿದೆ.

ಕರ್ತವ್ಯ ಲೋಪ, ಅಪರಾಧ ಕೃತ್ಯಗಳ ಪತ್ತೆಯಲ್ಲಿ ನಿರ್ಲಕ್ಷ್ಯ ಹಾಗೂ ಡ್ರಗ್ ಪೆಡ್ಲರ್‌ ಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವ ಆರೋಪಗಳ ಹಿನ್ನೆಲೆ ಎಂಟು ಮಂದಿ ಪೊಲೀಸರನ್ನು ತಕ್ಷಣದಿಂದಲೇ ಎತ್ತಂಗಡಿ ಮಾಡಲಾಗಿದೆ ಎಂದು ಮೂಲಗಳು ಜಸ್ಟ್ ಕನ್ನಡಗೆ ತಿಳಿಸಿವೆ.

ಇದಕ್ಕೆ ಜೊತೆಯಾಗಿ ರೌಡಿ ಪ್ರತಿಬಂಧಕ ದಳದ ಮೂವರು ಸಿಬ್ಬಂದಿಗೂ ವರ್ಗಾವಣೆ ಶಿಕ್ಷೆ ವಿಧಿಸಲಾಗಿದ್ದು, ನಗರದ ಕಾನೂನು ಸುವ್ಯವಸ್ಥೆ ಮತ್ತು ಡ್ರಗ್ ನಿಯಂತ್ರಣದ ಮೇಲಿನ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲಾಖೆ ಕಠಿಣ ಸಂದೇಶ ನೀಡಿದಂತಾಗಿದೆ.

ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಡ್ರಗ್ ಜಾಲ, ಪೆಡ್ಲರ್‌ ಗಳ ಚಟುವಟಿಕೆ ಹಾಗೂ ಯುವಕರ ಸೆಳೆತ ಹೆಚ್ಚುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿತ್ತು. ಈ ಹಿನ್ನೆಲೆ ಮೇಲಾಧಿಕಾರಿಗಳ ಗಮನಕ್ಕೆ ಹಲವು ಅಂಶಗಳು ಬಂದಿದ್ದು, ಕಾರ್ಯಕ್ಷಮತೆ ಪರಿಶೀಲನೆಯ ಬಳಿಕ ಈ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ವಿಭಾಗದೊಳಗೆ ಕಾರ್ಯಕ್ಷಮತೆ ಹೆಚ್ಚಿಸುವುದು, ಡ್ರಗ್ ವಿರುದ್ಧ ವಿಶೇಷ ದಾಳಿ ಬಲಪಡಿಸುವುದು ಮತ್ತು ಅಪರಾಧ ನಿಯಂತ್ರಣಕ್ಕೆ ಹೊಸ ತಂಡಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಸಿಸಿಬಿಯಿಂದ ವರ್ಗಾವಣೆಯಾದವರು: ಶಿವಣ್ಣ, ದೊಡ್ಡೇಗೌಡ, ಅನಿಲ್, ರಾಜು, ಉಮಾ ಮಹೇಶ್ವರ್, ರಾಮಸ್ವಾಮಿ, ಪ್ರಕಾಶ್ ಹಾಗೂ ಗೋವಿಂದ

Key words: Mysore, 8 CCB police, Transfer

The post ಮೈಸೂರು: ಸಿಸಿಬಿಯ 8 ಪೊಲೀಸರು ಎತ್ತಂಗಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಿ.ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ- ಸಿಎಂ ಡಿಕೆಶಿ

ನವದೆಹಲಿ,ಆಗಸ್ಟ್,27,2026 (www.justkannada.in):  ಸಚಿವ ಬಿ. ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ...

ഫലസ്തീന്‍ ആക്ഷനെ യു.എസ് ഭീകര പട്ടികയില്‍ ഉള്‍പ്പെടുത്തി; നിരോധനം നീക്കാന്‍ ബ്രിട്ടിഷ് പ്രധാനമന്ത്രിക്ക് കത്ത്‌

വാഷിങ്ടണ്‍: ബ്രിട്ടണ്‍ ആസ്ഥാനമായി പ്രവര്‍ത്തിക്കുന്ന ഫലസ്തീന്‍ അവകാശ സംഘടനയായ ഫലസ്തീന്‍ ആക്ഷനെ...

`அரசுக்கு திமுக பஞ்சபாண்டவர்களாக துணை நிற்கும்!' – புதுச்சேரி எதிர்க்கட்சித் தலைவர் நாஜிம்

புதுச்சேரி சட்டப்பேரவையில் கவர்னர் உரைக்கு நன்றி தெரிவிக்கும் தீர்மானத்தின் மீது பேசிய...

PMSBY: రూ.20తో రూ.2 లక్షల బీమా.. ఈ ప్రభుత్వ పథకం గురించి తెలుసా?

PMSBY: సాధారణంగా బీమా పాలసీ తీసుకోవాలంటే ప్రతి ఏడాది భారీ మొత్తంలో...