14
March, 2026

A News 365Times Venture

14
Saturday
March, 2026

A News 365Times Venture

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಐವರು ಪ್ರಯಾಣಿಕರು ಸಾವು

Date:

ಮುಂಬೈ, ಜೂನ್, 9,2025 (www.justkannada.in):  ಚಲಿಸುತ್ತಿದ್ದ ರೈಲಿನಿಂದ ಬಿದ್ದ ಐವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಹರಾಷ್ಟ್ರದ ಥಾಣೆಯ ಮುಂಬ್ರಾ ರೈಲು ನಿಲ್ದಾಣದಲ್ಲಿ ನಡೆದಿದೆ.

ದೀವಾ-ಕೋಪರ್ ಪುಷ್ಪಕ್ ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ 10ಕ್ಕೂ ಅಧಿಕ ಪ್ರಯಾಣಿಕರು ಕೆಳಗೆ ಬಿದ್ದಿದ್ದು, ಐದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಮುಂಬೈ ಸಿಎಸ್ ಟಿನಿಲ್ದಾಣದಿಂದ ಲಖನೌಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ರೈಲಿನಿಂದ 10-12 ಪ್ರಯಾಣಿಕರು ಬಿದ್ದಿದ್ದಾರೆ. ಹಲವರು ಗಂಭಿರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ರೈಲಿನಲ್ಲಿ ಅತಿಯಾದ ಜನಸಂದಣಿ ಉಂಟಾಗಿದ್ದು, ಈ ವೇಳೆ ಹಲವು ಪ್ರಯಾಣಿಕರು ಬಾಗಿಲುಗಳಲ್ಲಿ ನೇತಾಡುತ್ತಾ ಪ್ರಯಾಣಿಸುತ್ತಿದ್ದರು. ಈ ಸಮಯದಲ್ಲಿ ಆಯತಪ್ಪಿ ಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಘಟನೆಯಲ್ಲಿ ಹಲವರು ಗಾಯಗೊಂಡಿದ್ದ, ಗಾಯಾಳುಗಳನ್ನು ಥಾಣೆ ಸಿವಿಲ್ ಆಸ್ಪತ್ರೆ ಮತ್ತು ಕಲ್ಯಾಣ್‌ ನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.vtu

Key words: Five passengers, die, falling,  moving train

The post ಚಲಿಸುತ್ತಿದ್ದ ರೈಲಿನಿಂದ ಬಿದ್ದ ಐವರು ಪ್ರಯಾಣಿಕರು ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಾಟಾಳ್‌ ನಾಗರಾಜು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ: ಸದನದಲ್ಲಿ ಉತ್ತರ ಕೊಟ್ಟ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ಮಾರ್ಚ್,13,2026 (www.justkannada.in): ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಅವರಿಗೆ ರಾಜ್ಯೋತ್ಸವ...

കേരളം എല്ലാവര്‍ക്കും റേഷന്‍ ഉറപ്പാക്കിയ രാജ്യത്തെ ഏക സംസ്ഥാനം: മന്ത്രി ജി.ആര്‍. അനില്‍

തിരുവനന്തപുരം: രാജ്യത്ത് എല്ലാ കുടുംബങ്ങള്‍ക്കും റേഷന്‍ ഉറപ്പാക്കിയ ഏക സംസ്ഥാനമാണ് കേരളമെന്ന്...

மோனலிசா போஸ்லேவுக்கு 18 வயது பூர்த்தி ஆகும் முன்பே திருமணம் நடந்ததா? விவாதத்துக்கு காரணம் என்ன?

பிரயாக்ராஜில் கடந்த ஆண்டு நடந்த மகா கும்பமேளாவில் ருத்ராட்சம் மற்றும் மாலைகள்...

Mother Daughter Suicide: పెళ్లి ఇంట్లో చావు కేకలు! వరుడి నిందలతో సాఫ్ట్‌వేర్ ఇంజినీర్, ఆమె తల్లి బలి..

Mother Daughter Suicide: పెళ్లి కాకముందే.. యువతిని అనుమానించాడు.. నీ ప్రవర్తన...