4
October, 2026

A News 365Times Venture

4
Sunday
October, 2026

A News 365Times Venture

ಚಾಮುಂಡಿ ಬೆಟ್ಟ :  ವಾಹನ ದಟ್ಟಣೆಗೆ ಕಡಿವಾಣ! ಬೆಟ್ಟದ ಕೆಳಗೇ ಪಾರ್ಕಿಂಗ್ ವ್ಯವಸ್ಥೆ,  ವಿಐಪಿ ಸಂಸ್ಕೃತಿಗೂ ಕಡಿವಾಣ ಚಿಂತನೆ

Date:

 

ಹುಂಡಿ ಹಣದ ಮಾಸಿಕ ಎಣಿಕೆಗೆ ಸೂಚನೆ; ಗೆಸ್ಟ್‌ಹೌಸ್ ನಿರ್ವಹಣೆ ಕೆಎಸ್‌ಟಿಡಿಸಿಗೆ ವಹಿಸಲು ಪ್ರಸ್ತಾವನೆ

ಮೈಸೂರು, ಅ.4: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ಚಾಮುಂಡಿ ಬೆಟ್ಟದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮಹತ್ವದ ಯೋಜನೆ ರೂಪಿಸುವ ಚಿಂತನೆ ನಡೆದಿದೆ.

ಬೆಟ್ಟದ ಮೇಲ್ಭಾಗದಲ್ಲೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟದ ಕೆಳಭಾಗದಲ್ಲಿ ವಿಶಾಲವಾದ ಜಾಗ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ ಸೂಕ್ತ ಜಾಗ ಖರೀದಿಸುವ ಬಗ್ಗೆಯೂ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.

ಕಂದಾಯ ಹಾಗೂ ಮುಜರಾಯಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಚಾಮುಂಡಿ ಬೆಟ್ಟದ ನಿರ್ವಹಣೆ, ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುವುದು, ಹುಂಡಿ ಹಣದ ನಿರ್ವಹಣೆ ಹಾಗೂ ವಿಐಪಿ ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆದಿದೆ.

ಈ ಕುರಿತು ಸಭೆಯಲ್ಲಿ ಭಾಗವಹಿಸಿದ್ದ  ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಿ. ಶರತ್ ಅವರು “ ಜಸ್ಟ್ ಕನ್ನಡ”  ಜತೆ ಮಾತನಾಡಿದರು..

ಬೆಟ್ಟದ ಕೆಳಭಾಗದಲ್ಲೇ ಪಾರ್ಕಿಂಗ್ ವ್ಯವಸ್ಥೆಗೆ ಒತ್ತು:

ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದು ಭಕ್ತರು ಹಾಗೂ ಪ್ರವಾಸಿಗರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬೆಟ್ಟದ ಮೇಲಿನ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ, ಬೆಟ್ಟದ ಕೆಳಭಾಗದಲ್ಲಿ ವಿಸ್ತಾರವಾದ ಜಾಗವನ್ನು ಗುರುತಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಅಗತ್ಯ ಬಿದ್ದಲ್ಲಿ ಪಾರ್ಕಿಂಗ್ ಉದ್ದೇಶಕ್ಕೆ ಸೂಕ್ತ ಜಾಗವನ್ನು ಖರೀದಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ. ಈ ಯೋಜನೆ ಜಾರಿಯಾದರೆ ಬೆಟ್ಟದ ಮೇಲಿನ ವಾಹನ ದಟ್ಟಣೆ ಕಡಿಮೆಯಾಗುವುದರ ಜತೆಗೆ ಭಕ್ತರ ಸಂಚಾರಕ್ಕೂ ಅನುಕೂಲವಾಗುವ ನಿರೀಕ್ಷೆಯಿದೆ.

ಮೂರು ತಿಂಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಇನ್ಮುಂದೆ ಪ್ರತಿ ತಿಂಗಳಿಗೇ?

ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆಯನ್ನು ಪ್ರಸ್ತುತ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತಿದೆ. ಇದನ್ನು ಪ್ರತಿ ತಿಂಗಳು ನಡೆಸುವಂತೆ ಸೂಚನೆ ನೀಡಲಾಗಿದೆ.

ಹುಂಡಿ ಹಣವನ್ನು ಕಾಲಕಾಲಕ್ಕೆ ಎಣಿಕೆ ಮಾಡಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವುದರಿಂದ ಹಣಕಾಸಿನ ನಿರ್ವಹಣೆ ವ್ಯವಸ್ಥಿತವಾಗುವುದರ ಜತೆಗೆ, ದೇವಸ್ಥಾನದ ನಿಧಿಗೆ ಬಡ್ಡಿ ರೂಪದಲ್ಲಿ ಆದಾಯವೂ ದೊರೆಯಲಿದೆ ಎಂಬ ಉದ್ದೇಶ ಈ ಕ್ರಮದ ಹಿಂದಿದೆ. ಹುಂಡಿ ಹಣದ ನಿರ್ವಹಣೆಯಲ್ಲಿ ಹೆಚ್ಚು ಪರಿಣಾಮಕಾರಿ ಹಣಕಾಸು ವ್ಯವಸ್ಥೆ ರೂಪಿಸುವ ಅಗತ್ಯದ ಬಗ್ಗೆಯೂ ಗಮನ ಹರಿಸಲಾಗಿದೆ.

ಆಷಾಢ ಮಾಸದಲ್ಲಿ ವಿಐಪಿ ಸಂಸ್ಕೃತಿಗೆ ಕಡಿವಾಣ?

ಚಾಮುಂಡಿ ಬೆಟ್ಟದಲ್ಲಿ ವಿಶೇಷವಾಗಿ ಆಷಾಢ ಮಾಸದಲ್ಲಿ ವಿಐಪಿ ದರ್ಶನದ ವ್ಯವಸ್ಥೆ ಹೆಚ್ಚಾಗುತ್ತಿರುವುದು ಸಾಮಾನ್ಯ ಭಕ್ತರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ವಿಐಪಿಗಳಿಗೆ ಆದ್ಯತೆ ನೀಡುವ ಸಂದರ್ಭದಲ್ಲಿ ದೀರ್ಘಕಾಲ ಸರದಿಯಲ್ಲಿ ನಿಂತು ದರ್ಶನ ಪಡೆಯುವ ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ವಿಐಪಿ ದರ್ಶನಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿ, ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸುವಂತೆ ಸೂಚಿಸಲಾಗಿದೆ. ವಿಐಪಿ ದರ್ಶನದ ಹೆಸರಿನಲ್ಲಿ ಸಾಮಾನ್ಯ ಭಕ್ತರ ದರ್ಶನಕ್ಕೆ ಅನಗತ್ಯ ಅಡಚಣೆ ಉಂಟಾಗದಂತೆ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು ಈ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.

ಚಾಮುಂಡಿ ಬೆಟ್ಟದ ಗೆಸ್ಟ್‌ಹೌಸ್ ನಿರ್ವಹಣೆ ಕೆಎಸ್‌ಟಿಡಿಸಿಗೆ?

ಚಾಮುಂಡಿ ಬೆಟ್ಟದ ಮೇಲಿರುವ ಅತಿಥಿಗೃಹದ ನಿರ್ವಹಣೆಯ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC)ಕ್ಕೆ ವಹಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ತಿರುಪತಿಯಲ್ಲಿ ಕರ್ನಾಟಕದ ಅತಿಥಿಗೃಹಗಳ ನಿರ್ವಹಣೆಯ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಿರುವ ಮಾದರಿಯಲ್ಲಿ, ಚಾಮುಂಡಿ ಬೆಟ್ಟದ ಅತಿಥಿಗೃಹದ ನಿರ್ವಹಣೆಯನ್ನೂ ಪ್ರವಾಸೋದ್ಯಮ ಇಲಾಖೆಯ ಅಧೀನದ ವ್ಯವಸ್ಥೆಗೆ ನೀಡುವ ಸಲಹೆ ವ್ಯಕ್ತವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ಚರ್ಚೆ

ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಿ. ಶರತ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಚಾಮುಂಡಿ ಬೆಟ್ಟದ ವಾಹನ ದಟ್ಟಣೆ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ, ಹುಂಡಿ ಹಣದ ಮಾಸಿಕ ಎಣಿಕೆ, ವಿಐಪಿ ದರ್ಶನಕ್ಕೆ ಮಾರ್ಗಸೂಚಿ ಹಾಗೂ ಅತಿಥಿಗೃಹ ನಿರ್ವಹಣೆಯ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಒಟ್ಟಾರೆ, ಚಾಮುಂಡಿ ಬೆಟ್ಟದಲ್ಲಿ ವಾಹನ ದಟ್ಟಣೆ ನಿಯಂತ್ರಣದಿಂದ ಹಿಡಿದು ಹುಂಡಿ ಹಣದ ಸಮರ್ಪಕ ನಿರ್ವಹಣೆ ಹಾಗೂ ವಿಐಪಿ ದರ್ಶನ ವ್ಯವಸ್ಥೆಯ ಸುಧಾರಣೆಯವರೆಗೆ ಹಲವು ಬದಲಾವಣೆಗಳಿಗೆ ಚಿಂತನೆ ನಡೆದಿದೆ. ಇವು ಕಾರ್ಯರೂಪಕ್ಕೆ ಬಂದರೆ ಭಕ್ತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದರ ಜತೆಗೆ ಚಾಮುಂಡಿ ಬೆಟ್ಟದ ನಿರ್ವಹಣೆಯಲ್ಲೂ ಸುಧಾರಣೆ ತರಲು ಸಾಧ್ಯವಾಗಲಿದೆ.

KEY WORDS:

Chamundi Hill traffic, Chamundeshwari Temple, Mysuru Chamundi Hill, parking Mysuru, Chamundi Hill, VIP darshan, Chamundi Hill development, Hundi collection, KSTDC guesthouse, Mysuru tourism

Source link

LEAVE A REPLY

Please enter your comment!
Please enter your name here

Share post:

Popular

More like this
Related

കൊല്‍ക്കത്തയില്‍ ആലിയ സര്‍വകലാശാല വിദ്യാര്‍ത്ഥികള്‍ക്ക് നേരെ അക്രമം: ‘ജിഹാദി’ എന്ന് വിളിച്ച് മര്‍ദിച്ചതായി പരാതി

  കൊല്‍ക്കത്ത: പശ്ചിമ ബംഗാളിലെ കൊല്‍ക്കത്തയില്‍ ആലിയ സര്‍വകലാശാലയിലെ മൂന്ന് വിദ്യാര്‍ത്ഥികള്‍ക്ക്...

'எஸ்ஐஆர் பாஜக-விற்கு சாதகமானது என்றால், தவெக எப்படி ஆட்சிக்கு வந்தது?' – வானதி சீனிவாசன் கேள்வி

கோவை கணபதி பகுதியில் பிரதமர் நரேந்திர மோடியின் பிறந்த நாளையொட்டி இலவச...

Producers Council : మళ్లీ రానున్న ‘నంది’ జాతర…. సీఎంకు థాంక్స్ చెప్పిన నిర్మాతల మండలి

తెలుగు చలనచిత్ర పరిశ్రమకు, తెలుగు ప్రజల సంస్కృతికి ఎంతో భావోద్వేగమైన అనుబంధం...

ಮೈಸೂರು ದಸರಾ ಚಿತ್ರಕಲಾ ಸ್ಪರ್ಧೆ: ವಿಜೇತ ಮಕ್ಕಳಿಗೆ ಬಹುಮಾನವಾಗಿ ಸೈಕಲ್ ವಿತರಣೆ

ಮೈಸೂರು,ಅಕ್ಟೋಬರ್,3,2026 (www.justkannada.in):  ನಾಡಹಬ್ಬ ಮೈಸೂರು ದಸರಾ-2026 ಅಂಗವಾಗಿ ದಸರಾ ಚಿತ್ರಸಂತೆ...