7
October, 2026

A News 365Times Venture

7
Wednesday
October, 2026

A News 365Times Venture

ಅ,6 ರಂದು ಮೈಸೂರು ಪಾಲಿಕೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ

Date:

ಮೈಸೂರು,ಅಕ್ಟೋಬರ್,3,2026 (www.justkannada.in): ಇ-ಖಾತಾ ಯುಎಲ್‌ಎಂಎಸ್ (ULMS)ನಲ್ಲಿ ಕಟ್ಟಡ ನಕ್ಷೆ ಪಡೆಯಲು ಮತ್ತು ಕಟ್ಟಡ ಪೂರ್ಣಗೊಂಡ ವರದಿ (ಸಿ.ಆ‌ರ್) ವಿಳಂಬತೆ ಬಗ್ಗೆ  ಅಕ್ಟೋಬರ್ 6 ರಂದು ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಆಯೋಜಿಸಲಾಗಿದೆ.

ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು,  ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಹಾಗೂ ಎಲ್ಲಾ 09 ವಲಯ ಕಚೇರಿಗಳಲ್ಲಿ ಸಾರ್ವಜನಿಕರು ಈ ಮೊದಲು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಿದ್ದು, ಈವರೆಗೂ ಇ-ಖಾತಾ ಪಡೆಯಲು ಸಾಧ್ಯವಾಗದಿರುವ ವಿಳಂಬ ಪ್ರಕರಣಗಳು ಹಾಗೂ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ/ಸಿ.ಆರ್ ಪಡೆಯುವುದಕ್ಕೆ’ ಸಂಬಂಧಿಸಿದಂತೆ ಯು.ಎಲ್.ಎಂ.ಎಸ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಈವರೆಗೂ ವಿವಿಧ ಕಾರಣಗಳಿಗೆ ಕಟ್ಟಡ ನಕ್ಷೆ / ಸಿ.ಆರ್ (Completion Report) ಮಂಜೂರಾತಿ ಆಗದೇ ವಿಳಂಬವಾಗಿರುವ ಪ್ರಕರಣಗಳನ್ನು ಏಕಕಾಲದಲ್ಲಿ, ಪರಿಹರಿಸಲು ಮತ್ತು ಈ ಸಂಬಂಧ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದಿನಾಂಕ 06-10-2026 ರಂದು ಸಾರ್ವಜನಿಕರ ಕುಂದುಕೊರತೆ ಸಭೆ ಆಯೋಜಿಸಲಾಗಿದೆ.  ಅಂದು  ಬೆಳಿಗ್ಗೆ-11.00 ಗಂಟೆಗೆ ಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಮತ್ತು ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಮೈಸೂರು ಇವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಅಹವಾಲು ಪಡೆಯಲು ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ  ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.

ಹಾಗೆಯೇ  ಇ-ಖಾತಾ, ಯುಎಲ್‌ಎಂಎಸ್ (ULMS) ಪೋರ್ಟಲ್‌ನಲ್ಲಿ ಕಟ್ಟಡ ನಕ್ಷೆ & ಕಟ್ಟಡ ಪೂರ್ಣಗೊಂಡ ವರದಿ (ಸಿಆ‌ರ್) ಪಡೆಯಲು ಈಗಾಗಲೇ ಪಾಲಿಕೆಯ ಕೇಂದ್ರ ಕಚೇರಿ ಹಾಗೂ ಎಲ್ಲಾ 9 ವಲಯ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ವಿಳಂಬ ಆಗಿರುವ ಪ್ರಕರಣಗಳನ್ನು ಮಾತ್ರ ಈ ಸಭೆಯಲ್ಲಿ ಪರಿಶೀಲಿಸಲಾಗುವುದು.

ಜೊತೆಗೆ ಸಾರ್ವಜನಿಕರು ಈಗಾಗಲೇ ಅಗತ್ಯ ಪೂರಕ ದಾಖಲೆಗೋಂದಿಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ಅಂದು ಪರಿಶೀಲಿಸಲಾಗುವುದು. ಸಾರ್ವಜನಿಕರು ಈ ಸಭೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

Key words: Public, grievance, meeting, Mysuru City Corporation, October 6

Source link

LEAVE A REPLY

Please enter your comment!
Please enter your name here

Share post:

Popular

More like this
Related

ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,6,2026 (www.justkannada.in): “ರಾಜ್ಯದ ಮಠಗಳು, ಸ್ವಾಮೀಜಿಗಳ ಬಗ್ಗೆ ನನಗೆ...

വോട്ടര്‍പട്ടികയില്‍ നിന്ന് പേരുകള്‍ നീക്കാന്‍ വ്യാജമായി ഫോം-7 സമര്‍പ്പിച്ചു; തെലങ്കാനയില്‍ ബി.ജെ.പി ഏജന്റിനെതിരെ എഫ്.ഐ.ആര്‍

ഹൈദരാബാദ്: വോട്ടര്‍പട്ടികയില്‍ നിന്ന് പേരുകള്‍ നീക്കം ചെയ്യുന്നതിനായി വ്യാജമായി ഫോം ഏഴ്...

தேர்தல் ஆணையர் பதவி விலகக் கோரி தொடர் போராட்டம்; டெல்லியில் ராகுல் காந்தி கைது!

டெல்லியில் இன்று (அக்.6) எஸ்.ஐ.ஆர். முறைகேடு விவகாரத்தில் இந்தியத் தலைமைத் தேர்தல்...

Off The Record: ఇప్పుడు ఎమ్మెల్సీ.. తర్వాత అసెంబ్లీ? బీఆర్ఎస్-లెఫ్ట్ కెమిస్ట్రీ కుదిరేనా..?

Off The Record: తెలంగాణలో రెండు గ్రాడ్యుయేట్ ఎమ్మెల్సీ స్థానాలకు ఎన్నికల...