4
October, 2026

A News 365Times Venture

4
Sunday
October, 2026

A News 365Times Venture

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ ಮೆಂಟ್ ನಿಂದ 2000 ಕೋಟಿ ರೂ. ಗಳಿಕೆ- ಸಿಎಂ ವಿರುದ್ದ ಕೇಂದ್ರ ಸಚಿವ HDK ಮತ್ತೆ ಗುಡುಗು

Date:

ಬೆಂಗಳೂರು, ಅಕ್ಟೋಬರ್, 3, 2026 (www.justkannada.in): ನೈಸ್ ರಸ್ತೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಶನಿವಾರವೂ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದರು.

ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿ ಇರುವ ಶೋಭಾ ಅಪಾರ್ಟ್ಮೆಂಟ್ ಯಾರದು? ಅದಕ್ಕೆ ಹಾಲಿ ಮುಖ್ಯಮಂತ್ರಿ ಸಿಎಂ ಅವರ ಕುಟುಂಬ, ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೂ ಏನು ಸಂಬಂಧ? ಅಮಾಸೆಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಅನ್ನುವವರು ಯಾರು? ಈ ಮುಖ್ಯಮಂತ್ರಿ ತಮ್ಮ ಮತ್ತು ತಾಯಿ ಹೆಸರಿಗೆ ಆ ಭೂಮಿಯನ್ನು ಖರೀದಿಸಿದ್ದು ಹೇಗೆ? ಒಮ್ಮೆ ಸರ್ಕಾರಿ ಯೋಜನೆಗೆ ನೋಟಿಫೈ ಆಗಿರುವ ಭೂಮಿಯನ್ನು ಇವರು ಖರೀದಿಸಲು ಹೇಗೆ ಸಾಧ್ಯವಾಯಿತು? NOC (ನಿರಪೇಕ್ಷಣಾ ಪತ್ರ) ಹೇಗೆ ಸಿಕ್ಕಿತು? ಅಲ್ಲಿ ಕಟ್ಟಲಾಗಿರುವ ಗಗನಚುಂಬಿ ಶೋಭಾ ಅಪಾರ್ಟ್ಮೆಂಟ್ ಮೂಲಕ ಅವರು ₹2000 ಕೋಟಿ ಮೌಲ್ಯದ ಆಸ್ತಿಯನ್ನು ಮಾಡಿದ್ದಾರೆ ಎಂದು ಅವರು ದೂರಿದರು.

ಈ ನೈಸ್ ಅಕ್ಕಪಕ್ಕದಲ್ಲಿರುವ ಸ್ವಾಧೀನ ಆಗಿರುವ ಭೂಮಿಗೆ ಬಡವರಿಗೆ ಯಾರಿಗೂ ಈ ನೈಸ್ ಕಂಪನಿ ಗುತ್ತಿಗೆದಾರ NOC ಕೊಟ್ಟಿಲ್ಲ. ಅಷ್ಟೇ ಅಲ್ಲ, ಶ್ರೀ ಸಿದ್ದಗಂಗಾ ಮಠಕ್ಕೆ NOC ನಿರಾಕರಿಸುತ್ತಾನೆ. ಆದರೆ, ಈ ರಸ್ತೆಯ ಸುತ್ತಮುತ್ತ 200-300 ಎಕರೆಯಷ್ಟು ಭೂಮಿಯನ್ನು ಮುಖ್ಯಮಂತ್ರಿ ಮತ್ತವರ ಪರಿವಾರ ಖರೀದಿಸಿದ್ದು ಹೇಗೆ? ಅವರು ಅನ್ಯಾಯದ ಮಾರ್ಗದಲ್ಲಿ ಕಸಿದುಕೊಂಡಿದ್ದಾರೆ. ಹೆದರಿಸಿ ಬೆದರಿಸಿ ಭೂಮಿಯನ್ನು ಕಿತ್ತುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಶುಪಾಲನಿಗೆ 101 ತಪ್ಪು ಮಾಡಲು ಶ್ರೀಕೃಷ್ಣ ಅವಕಾಶ ಕೊಟ್ಟಿದ್ದ:

ಮಿತಿ ಮೀರಿದ ದುರಾಸೆ, ಅಂಕೆ ಇಲ್ಲದ ಭೂದಾಹ, ದೇವರು ಕೊಟ್ಟಿದ್ದು ಸಾಲದು.. ಇನ್ನೂ ಬೇಕು ಬೇಕು ಎನ್ನುವ ಹಪಾಹಪಿ.. ಮನುಷ್ಯನನ್ನು ತಪ್ಪುಗಳ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಕಥೆಯೂ ಹಾಗೆ ಆಗಿದೆ. ಶಿಶುಪಾಲನಿಗೆ ನೂರೊಂದು ತಪ್ಪುಗಳನ್ನು ಮಾಡಲು ಶ್ರೀಕೃಷ್ಣ ಪರಮಾತ್ಮನು ಅವಕಾಶ ಕೊಟ್ಟಂತೆಯೇ ರಾಜ್ಯದ ಜನರೂ ಈ ವ್ಯಕ್ತಿಯ ತಪ್ಪುಗಳನ್ನು ಗಮನಿಸುತ್ತಲೇ ಬಂದು ಕೊನೆಯ ಅವಕಾಶ ನೀಡಿದ್ದಾರೆ. ಅವರ ಭೂದಾಹಕ್ಕೆ ಈಗ ಇಡೀ ನೈಸ್ ರಸ್ತೆ ಯೋಜನೆಯೇ ಸ್ವಾಹಾ ಆಗುವ ಅಪಾಯ ಎದುರಾಗಿದೆ. ಹೈದರಾಬಾದ್ ಉದ್ಯಮಿ ಜತೆ ಶಾಮೀಲಾಗಿ ಇಡೀ ಪ್ರಾಜೆಕ್ಟ್ ಅನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವರ್ಷಕ್ಕೆ ನೈಸ್ ಒಪ್ಪಂದ ಮುಗಿಯುತ್ತದೆ. ನಂತರ ನೈಸ್ ರಸ್ತೆ ಸಂಪೂರ್ಣವಾಗಿ ಆಸ್ತಿ. ಅದಕ್ಕೂ ಮೊದಲೇ ಅದನ್ನು ನುಂಗಿಬಿಡುವ ದುಸ್ಸಾಹಸಕ್ಕೆ ಈ ಮುಖ್ಯಮಂತ್ರಿ ಕೈ ಹಾಕಿದ್ದಾರೆ! ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ.

ಆಮಿಷ ಒಡ್ಡಿದವರನ್ನು ಓಡಿಸಿದ್ದೇನೆ:

ನೈಸ್ ಯೋಜನೆ ಉಸಾಬರಿ ನಿಮಗೇಕೆ ಬೇಕು? ಈ ವಿಷಯದಲ್ಲಿ ನೀವು ಸುಮ್ಮನೆ ಇದ್ದುಬಿಡಿ. ನಿಮಗೆ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ಆಮಿಷ ಒಡ್ಡಲು ಪ್ರಯತ್ನ ಮಾಡಿದ್ದರು. ನನ್ನ ಬಳಿ ಬಂದವರನ್ನು ಉಗಿದು ಹೊರಗಟ್ಟಿದ್ದೇನೆ. ಯಾರಿಂದಲೂ ನನ್ನನ್ನು ಖರೀದಿ ಮಾಡುವುದು ಸಾಧ್ಯವಿಲ್ಲ. ನಾನು ಜನರ ಮನುಷ್ಯ. ಜನರಿಗಾಗಿ ಬದುಕುತ್ತೇನೆ ಮತ್ತು ಅವರಿಗಾಗಿಯೇ ಪ್ರಾಣ ಬಿಡಲು ಸಿದ್ಧನಿದ್ದೇನೆ. ನೈಸ್ ಭೂ ಸಂತ್ರಸ್ತರು ಹಾಗೂ ನಾಡಿನ ಜನರೆಲ್ಲರೂ ಒಗ್ಗಟ್ಟಾಗಿದ್ದಾರೆ ನೈಸ್ ರಸ್ತೆಯನ್ನು ರಾಜ್ಯಕ್ಕೇ ಉಳಿಸಿಕೊಡುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

ಖೇಣಿಯನ್ನು ತಕ್ಷಣವೇ ಬಂಧಿಸಿ:

ಶಿವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು. ಇಂತಹ ಫ್ರಾಡ್ ವ್ಯಕ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ರಕ್ಷಣೆ ಕೊಡುತ್ತ ಬಂದಿದ್ದಾರೆ. ಅಲ್ಲದೆ ಆತನ ಜೊತೆ ಶಾಮೀಲಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾನೆ. ಇಂತಹ ಧರ್ಮ ದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ, ನಾಚಿಕೆಗೇಡು! ಎಂದು  ಹೆಚ್ ಡಿಕೆ ಅವರು ಕಿಡಿಕಾರಿದ್ದಾರೆ.

Key words: ₹2,000 crore, earnings, Sobha Apartment, ​​ CM DK Shivakumar, Union Minister, HDK

Source link

LEAVE A REPLY

Please enter your comment!
Please enter your name here

Share post:

Popular

More like this
Related

Flydubai Attack: ‘‘ఎవరు పంపినా.. భారీ మూల్యం చెల్లించుకోవాలి’’.. నెతన్యాహు హెచ్చరిక!

Flydubai Attack: ఫ్లైదుబాయ్ FZ1073 విమానం ఘటనపై ఇజ్రాయిల్ ప్రధాని బెంజమిన్...

"ஐயப்பப் பக்தர்களின் உணர்வுகளை மதித்து, விருப்பங்களை நிறைவேற்றுவோம்" – கேரள தேவஸ்வம் அமைச்சர் உறுதி

கன்னியாகுமரி மாவட்டம் நாகர்கோவிலை அடுத்த சுசீந்திரம் ஆஸ்ரமத்தில் அகில பாரத ஐயப்பா...

Viral: అదనపు ఆదాయం కోసం ఆటో కొన్న సాఫ్ట్‌వేర్ ఉద్యోగి.. చివరికి ఏం జరిగిందో తెలుసా..

కార్పొరేట్ ఉద్యోగానికి తోడుగా అదనపు ఆదాయం సంపాదించాలనే ఓ సాఫ్ట్‌వేర్ ఉద్యోగి...