3
October, 2026

A News 365Times Venture

3
Saturday
October, 2026

A News 365Times Venture

ಮೈಸೂರು ದಸರಾ-2026 : ಈ ದಿನಗಳಲ್ಲಿ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ

Date:

ಮೈಸೂರು, ಅಕ್ಟೋಬರ್ ,2,2026 (www.justkannada.n):  ನಾಡಹಬ್ಬ ಮೈಸೂರು ದಸರಾ-2026 ಮಹೋತ್ಸವದ ಪ್ರಯುಕ್ತ ಮೈಸೂರು ರಾಜಮನೆತನದವರು ಪ್ರತಿ ವರ್ಷದಂತೆ ಮೈಸೂರು ಅರಮನೆಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿರ್ದಿಷ್ಟ ದಿನಾಂಕಗಳಂದು ಮೈಸೂರು ಅರಮನೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ರತ್ನ ಸಿಂಹಾಸನ ಜೋಡಣೆ ಕಾರ್ಯದ ಪ್ರಯುಕ್ತ ಅಕ್ಟೋಬರ್ ​05 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ,

(File Photo)

ರಾಜವಂಶಸ್ಥರ ಸಿಂಹಾಸನಾರೋಹಣ ಹಾಗೂ ಖಾಸಗಿ ದರ್ಬಾರ್‌ ಧಾರ್ಮಿಕ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಅ.​11 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಮತ್ತು ಅ.​20 ರಂದು ಕಲ್ಯಾಣ ಮಂಟಪದಲ್ಲಿ ಮಹಾನವಮಿ ಹಾಗೂ ಆಯುಧ ಪೂಜೆ ನಡೆಯುವುದರಿಂದ ಸಂಪೂರ್ಣ ದಿನ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಅ.21 ರಂದು ವಿಜಯದಶಮಿ ಹಬ್ಬದ ಪ್ರಯುಕ್ತ ಸಂಪೂರ್ಣ ದಿನ ಸಾರ್ವಜನಿಕರ ಸಾಮಾನ್ಯ ಪ್ರವೇಶವಿರುವುದಿಲ್ಲ. ಕೇವಲ ದಸರಾ ಪಾಸ್‌ ಹಾಗೂ ಜಂಬೂಸವಾರಿ ಟಿಕೆಟ್‌ ಹೊಂದಿರುವವರಿಗೆ ಮಾತ್ರ ಪ್ರವೇಶವಿರುತ್ತದೆ.

ರತ್ನ ಸಿಂಹಾಸನ ವಿಸರ್ಜನೆ ಹಾಗೂ ಭದ್ರತಾ ಕೊಠಡಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ನವೆಂಬರ್ ​19 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.00 ರವರೆಗೆ ಪ್ರವೇಶ ಇರುವುದಿಲ್ಲ ಎಂದು ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Popular

More like this
Related

സി.ജെ.പി പ്രതിഷേധം: ‘ഗ്യാനേഷിന് പിന്നാലെ മോദിയും പോകേണ്ടിവരും’: ദീപ്‌കെ

മുംബൈ: മുഖ്യ തെരഞ്ഞെടുപ്പ് കമ്മീഷണര്‍ ഗ്യാനേഷ് കുമാറിന്റെ രാജിയാവശ്യപ്പെട്ട് കോക്രോച്ച് ജനത...

Punjab: కాంగ్రెస్ కొత్త అధ్యక్షుడిగా పర్గత్ సింగ్ నియామకం.. వరంగ్ స్థానంలో మాజీ హాకీ కెప్టెన్‌కు అవకాశం

పంజాబ్ కాంగ్రెస్‌లో కీలక మార్పు చోటుచేసుకుంది. పంజాబ్ ప్రదేశ్ కాంగ్రెస్ కమిటీ...

ನಾಳೆ ಮೈಸೂರಿಗೆ ಸಿಎಂ ಡಿಕೆ ಶಿವಕುಮಾರ್

ಮೈಸೂರು,ಅಕ್ಟೋಬರ್, 2,2026 (www.justkannada.in): ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಕ್ಟೋಬರ್...