18
September, 2026

A News 365Times Venture

18
Friday
September, 2026

A News 365Times Venture

ಮಂಗಳೂರು ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ ಗೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

Date:

ಮಂಗಳೂರು,ಸೆಪ್ಟಂಬರ್,17,2026 (www.justkannada.in):  ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿ, ಅದರ ಕಾರ್ಯವೈಖರಿ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಪರಿಶೀಲಿಸಿದರು.

ನಗರದ ಸಂಚಾರ ನಿರ್ವಹಣೆ, ಸಾರ್ವಜನಿಕ ಭದ್ರತೆ ಸೇರಿದಂತೆ ವಿವಿಧ ನಗರ ಸೇವೆಗಳನ್ನು ತಂತ್ರಜ್ಞಾನದ ನೆರವಿನಿಂದ ಒಂದೇ ಸೂರಿನಡಿ ಮೇಲ್ವಿಚಾರಣೆ ಮಾಡುವ ಕಮಾಂಡ್ ಸೆಂಟರ್‌ನ ಕಾರ್ಯವಿಧಾನದ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಮಾಂಡ್ ಸೆಂಟರ್‌ನಲ್ಲಿ ಅಳವಡಿಸಲಾಗಿರುವ ತಾಂತ್ರಿಕ ವ್ಯವಸ್ಥೆಗಳು, ನಗರದ ವಿವಿಧ ಭಾಗಗಳ ಮೇಲ್ವಿಚಾರಣೆ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗಳ ಸಮನ್ವಯದ ಕುರಿತು ಅಧಿಕಾರಿಗಳು ಸಚಿವರಿಗ ವಿವರಿಸಿದರು.

ನಗರದ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಕಮಾಂಡ್ ಸೆಂಟರ್‌ನ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಾಗರಿಕರಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾರ್ಗದರ್ಶನ ನೀಡಿದರು.

ನಗರದ ಪ್ರಮುಖ ಪ್ರದೇಶಗಳ ಮೇಲ್ವಿಚಾರಣೆ, ಸಾರ್ವಜನಿಕ ಸುರಕ್ಷತೆ ಹಾಗೂ ನಗರ ಸೇವೆಗಳ ನಿರ್ವಹಣೆಯಲ್ಲಿ ಕಮಾಂಡ್ ಸೆಂಟರ್‌ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ, ಶ್ರೀ ಮೋಹನ್ ಪಿ.ವಿ., ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಬೀಜ ಮತ್ತು ಜೈವಿಕ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಾವಣ್ಯ ಬಲ್ಲಾಳ್ ಜೈನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ರಾಹುಲ್ ರತ್ನಂ ಪಾಂಡೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister, Dr. Yathindra Siddaramaiah, visits, Mangaluru Smart City Command Centre

Source link

LEAVE A REPLY

Please enter your comment!
Please enter your name here

Share post:

Popular

More like this
Related

ನಮಗೆ ರಾಜಕೀಯಕ್ಕಿಂತ ಜನರ ಬದುಕು ಮುಖ್ಯ: ಸಿಎಂ ಡಿ.ಕೆ ಶಿವಕುಮಾರ್

ಮಂಗಳೂರು, ಸೆಪ್ಟಂಬರ್, 18,2026 (www.justkannada.in): ನಮಗೆ ರಾಜಕೀಯಕ್ಕಿಂತ ಜನರ ಬದುಕು...

എല്‍.ജി.ബി.ടി.ക്യു.ഐ+ വ്യക്തികളെ കണ്‍വെര്‍ഷന്‍ തെറാപ്പിക്ക് വിധേയമാക്കരുത്; അത് അശാസ്ത്രീയവും അധാര്‍മികവുമാണ്: ഐ.എം.എ

കൊച്ചി: എല്‍.ജി.ബി.ടി.ക്യു.ഐ പ്ലസ് വ്യക്തികളുടെ ലൈംഗിക ആഭിമുഖ്യവും ലിംഗ സ്വതവും അടിച്ചമര്‍ത്താന്‍...

'பாஜகவும் தேர்தல் ஆணையமும் கைகோத்து ஒரு கட்சியைப் பிளவுபடுத்துகின்றன'- மம்தாவுக்கு ராகுல் ஆதரவு

மேற்கு வங்க சட்டப்பேரவைத் தேர்தலுக்குப் பிறகு திரிணமுல் காங்கிரஸ் கட்சி இரண்டாக...

Trump-Houthi: సౌదీకి ట్రంప్ షాక్! హౌతీలతో రహస్య భేటీ.. అమెరికా సైడ్ అయినట్టేనా?

గత కొద్దిరోజులుగా సౌదీ లక్ష్యంగా హౌతీలు భీకర దాడులు చేస్తున్నారు. తాజాగా...