ಮೈಸೂರು,ಸೆಪ್ಟಂಬರ್,14,2026 (www.justkannada.in): ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಈ ಮಧ್ಯೆ ದಸರಾ ಗೋಲ್ಡ್ ಕಾರ್ಡ್, ಕಂಬಳ ಆಯೋಜನೆ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿ ಲಕ್ಷ್ಮೀ ಕಾಂತರೆಡ್ಡಿ, ಇನ್ನೊಂದು ವಾರದಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆಯಾಗಲಿದೆ. ದಸರಾ ಗೋಲ್ಡ್ ಕಾರ್ಡ್ ಗೆ ಯಾವುದೇ ಬೆಲೆ ರಿಕೆ ಮಾಡಿಲ್ಲ ಎಂದು ತಿಳಿಸಿದರು.
ದಸರಾ ಗೆ ದಕ್ಷಿಣ ಭಾರತದ ಸಿಎಂಗಳಿಗೆ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ಲಕ್ಷ್ಮೀ ಕಾಂತ ರೆಡ್ಡಿ, ಸಿಎಂ ಕಾರ್ಯಾಲಯ ಈ ಬಗ್ಗೆ ಮಾತುಕತೆ ಮಾಡುತ್ತಿದ್ದಾರೆ. ಸಿಎಂ ಈ ಬಗ್ಗ ಅಧಿಕೃತವಾಗಿ ಹೇಳಿಕೆ ನೀಡುತ್ತಾರೆ ಎಂದರು.
ಏರ್ ಶೋ ವಿಚಾರದಲ್ಲಿ ಪತ್ರ ವ್ಯವಹಾರ ಮಾಡಿದ್ದೇವೆ ಇನ್ನೂ ಕೇಂದ್ರದಿಂದ ನಮಗೆ ಒಪ್ಪಿಗೆ ಪತ್ರವನ್ನ ಕೊಟ್ಟಿಲ್ಲ. ಅದಕ್ಕೆ ನಮಗೆ ಸಮಯ ಕೂಡ ಇದೆ. ದಸರಾದಲ್ಲಿ ಎರಡು ದಿನಗಳ ಕಾಳ ಕಂಬಳ ನಡಯುತ್ತದೆ. ಹಗಲು ರಾತ್ರಿ ಕಂಬಳ ನಡೆಯುತ್ತೆ. 8 ಸಾವಿರ ಜನ ಕುಳಿತು ಕಂಬಳ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸಿನಿಮಾ ನಿರ್ದೇಶಕರು ನಟ ನಟಿಯರು ಭಾಗಿಯಾಗಲಿದ್ದಾರೆ. ಚಲನಚಿತ್ರೋತ್ಸವ ರದ್ದು ಮಾಡಿರುವುದು ಕಮಿಟಿಯ ತೀರ್ಮಾನ ಎಂದು ಡಿಸಿ ಲಕ್ಷ್ಮೀ ಕಾಂತ ರೆಡ್ಡಿ ತಿಳಿಸಿದರು.
Key words: Dasara, Gold Card, released, week, Mysuru DC, Lakshmikanth Reddy





