10
September, 2026

A News 365Times Venture

10
Thursday
September, 2026

A News 365Times Venture

ಚಲನಚಿತ್ರ ದಸರಾ ರದ್ದು ನಿರ್ಧಾರ ಮರು ಪರಿಶೀಲಿಸಿ – ಜೋಗಿ ಮಂಜು ಮನವಿ

Date:

ಮೈಸೂರು,ಸೆಪ್ಟಂಬರ್,9,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುತ್ತಿದ್ದ ಚಲನಚಿತ್ರ ದಸರಾವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ, ಈ ಬಗ್ಗೆ ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೈಸೂರು ಯುವ ಭಾರತ್ ಸಂಘಟನೆ ಸಂಚಾಲಕ ಜೋಗಿ ಮಂಜು ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ  ಜೋಗಿ ಮಂಜು ಅವರು, ಪ್ರೇಕ್ಷಕರ ಸ್ಪಂದನೆ ಕಡಿಮೆಯಾಗಿದೆ ಎಂಬ ಕಾರಣವಿದ್ದರೆ, ಅದಕ್ಕೆ ಕಾರ್ಯಕ್ರಮವನ್ನು ರದ್ದುಪಡಿಸುವುದು ಪರಿಹಾರವಲ್ಲ. ಕಾರ್ಯಕ್ರಮದ ಗುಣಮಟ್ಟ ಹೆಚ್ಚಿಸಿ, ವ್ಯಾಪಕ ಪ್ರಚಾರ ನೀಡಿ, ಕನ್ನಡದ ಹಿರಿಯ ಕಲಾವಿದರು, ಯುವ ಪ್ರತಿಭೆಗಳು, ನಿರ್ದೇಶಕರು, ತಂತ್ರಜ್ಞರು ಹಾಗೂ ಚಿತ್ರಪ್ರೇಮಿಗಳನ್ನು ಒಳಗೊಳ್ಳುವ ಮೂಲಕ ಚಲನಚಿತ್ರ ದಸರಾವನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕನ್ನಡ ಚಿತ್ರರಂಗವು ನಮ್ಮ ನಾಡಿನ ಸಂಸ್ಕೃತಿಯ ಪ್ರಮುಖ ಭಾಗ. ಮೈಸೂರು ದಸರಾ ವೇದಿಕೆಯಲ್ಲಿ ಅದಕ್ಕೆ ಸೂಕ್ತ ಸ್ಥಾನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಈ ನಿರ್ಧಾರವನ್ನು ಹಠಮಾರಿತನದಿಂದ ಮುಂದುವರಿಸದೆ, ಕನ್ನಡ ಚಿತ್ರರಂಗದ ಭಾವನೆಗಳಿಗೆ ಸ್ಪಂದಿಸಬೇಕು   ಚಲನಚಿತ್ರ ದಸರಾವನ್ನು ರದ್ದುಪಡಿಸುವ ನಿರ್ಧಾರವನ್ನು ಮರುಪರಿಶೀಲಿಸಿ, ಚಲನಚಿತ್ರ ದಸರಾವನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Key words: Mysore dasara, cancel, film festival Dasara, Reconsider, Jogi Manju

The post ಚಲನಚಿತ್ರ ದಸರಾ ರದ್ದು ನಿರ್ಧಾರ ಮರು ಪರಿಶೀಲಿಸಿ – ಜೋಗಿ ಮಂಜು ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ലൊവേനിയയില്‍ ആദ്യമായി ഇസ്രഈല്‍ എംബസി തുറന്നു; തലസ്ഥാനത്ത്‌ വന്‍ പ്രതിഷേധം

ലുബ്ലിയാന: സ്ലൊവേനിയന്‍ തലസ്ഥാനമായ ലുബ്ലിയാനയില്‍ ഇസ്രഈലിന്റെ എംബസി തുറക്കുന്നതില്‍ വന്‍ പ്രതിഷേധം....

'புதின் முயற்சி, தென்னாப்பிரிக்கா என்ட்ரி, மன்மோகன் சிங் யோசனை' – 'BRICS' கதையைப் பகிர்ந்த காங்கிரஸ்

வருகிற செப்டம்பர் 12, 13 தேதிகளில், BRICS மாநாடு புதுடெல்லியில் நடக்கவிருக்கிறது....

Sweet Atukulu Recipe: వినాయక చవితి స్పెషల్.. కరకరలాడే అటుకుల తీపి ప్రసాదం.! సులువుగా చేసుకోండి ఇలా..

Sweet Atukulu Recipe: పండుగలు, విశేష పూజా దినాల్లో దేవుడికి నైవేద్యం...

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್: ಮನೆ, ಕಚೇರಿ ಸೇರಿ 18 ಕಡೆಗಳಲ್ಲಿ ದಾಳಿ, ಪರಿಶೀಲನೆ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in):  ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ಜಾರಿ...