8
September, 2026

A News 365Times Venture

8
Tuesday
September, 2026

A News 365Times Venture

ತೆರಿಗೆ ವಿನಾಯಿತಿ ಪಡೆದ ಸಂಸ್ಥೆಗಳಿಂದ ಸೇವಾ ಶುಲ್ಕ ಕಡ್ಡಾಯ ವಸೂಲಿಗೆ ಮೈಸೂರು ಪಾಲಿಕೆ ಆಯುಕ್ತರಿಂದ ಸೂಚನೆ

Date:

ಮೈಸೂರು,ಸೆಪ್ಟಂಬರ್,7,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ವತಿಯಿಂದ ಇಂದು ನಡೆದ ಕಂದಾಯ ಪರಿಶೀಲನಾ ಸಭೆಯಲ್ಲಿ, ಆಸ್ತಿ ತೆರಿಗೆಯಿಂದ ವಿನಾಯಿತಿ ಪಡೆದಿರುವ ವಿವಿಧ ಸಂಸ್ಥೆಗಳಿಂದ ಸೇವಾ ಶುಲ್ಕ ವಸೂಲಾತಿ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಇತರೆ ಅರ್ಹ ಸಂಸ್ಥೆಗಳಿಗೆ ನಿಯಮಾನುಸಾರ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದರೂ, ಪಾಲಿಕೆಯಿಂದ ಒದಗಿಸಲಾಗುವ ನಾಗರಿಕ ಸೌಲಭ್ಯಗಳು ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಅನ್ವಯವಾಗುವ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು  ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಇದುವರೆಗೆ ಆಸ್ತಿ ತೆರಿಗೆ ವಿನಾಯಿತಿ ಪಡೆದಿರುವ ಎಲ್ಲಾ ಸಂಸ್ಥೆಗಳ ವಿವರಗಳನ್ನು ವಲಯವಾರು ಪರಿಶೀಲಿಸಿ, ಅವರಿಗೆ ಅನ್ವಯವಾಗುವ ಸೇವಾ ಶುಲ್ಕವನ್ನು ನಿಗದಿಪಡಿಸಿ, ಬಾಕಿ ಉಳಿದಿರುವ ಮೊತ್ತವನ್ನು ಕಡ್ಡಾಯವಾಗಿ ವಸೂಲಿ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತೆರಿಗೆ ವಿನಾಯಿತಿ ಪಡೆದಿರುವ ಸಂಸ್ಥೆಗಳ ಸಂಪೂರ್ಣ ಪಟ್ಟಿಯನ್ನು ಪುನರ್‌ಪರಿಶೀಲಿಸಿ, ಸೇವಾ ಶುಲ್ಕದ ಬಾಕಿ ಮೊತ್ತವನ್ನು ಗುರುತಿಸಿ, ಸಂಬಂಧಿಸಿದ ಸಂಸ್ಥೆಗಳಿಗೆ ಬೇಡಿಕೆ ನೋಟಿಸ್‌ಗಳನ್ನು ಜಾರಿಗೊಳಿಸಿ, ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಸೇವಾ ಶುಲ್ಕ ವಸೂಲಾತಿಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡುವುದಿಲ್ಲ. ವಲಯವಾರು ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಬಾಕಿ ಮೊತ್ತದ ವಸೂಲಾತಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ನಿರ್ದೇಶನ ನೀಡಿದ್ದಾರೆ.

Key words: MCC, Commissioner, collection,  service charges, tax exempted, organizations

The post ತೆರಿಗೆ ವಿನಾಯಿತಿ ಪಡೆದ ಸಂಸ್ಥೆಗಳಿಂದ ಸೇವಾ ಶುಲ್ಕ ಕಡ್ಡಾಯ ವಸೂಲಿಗೆ ಮೈಸೂರು ಪಾಲಿಕೆ ಆಯುಕ್ತರಿಂದ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಿದ್ಯುತ್ ನಿಗಮಕ್ಕೆ ಆರ್ಥಿಕ ನಷ್ಟ ಆರೋಪ: ನಾಲ್ವರು ಸಿಬ್ಬಂದಿ ಅಮಾನತು

ಮೈಸೂರು,ಸೆಪ್ಟಂಬರ್,8,2026 (www.justkannada.in):  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಚಾವಿಸನಿನಿ) ಎನ್.ಆರ್.ಮೊಹಲ್ಲಾ...

എ.എഫ്.ഡിയുടെ തെരഞ്ഞെടുപ്പ് മുന്നേറ്റം ആശങ്കാകരം; ജര്‍മനി വീണ്ടും തീവ്ര വലതിന്റെ കയ്യിലേക്കെന്ന് യൂറോപ്യന്‍ നേതാക്കള്‍

പാരീസ്: ജര്‍മനിയിലെ സാക്സോണി-അന്‍ഹാള്‍ട്ട് സംസ്ഥാന തെരഞ്ഞെടുപ്പില്‍ തീവ്ര വലതുപക്ഷ പാര്‍ട്ടിയായ ആള്‍ട്ടര്‍നേറ്റീവ്...

"மூன்று கோப்புகள் இருப்பதாக முதல்வர் சொன்னார், ஏன் அதைப் பற்றி பேசவில்லை? சம்மந்தமே.!" – பெ.சண்முகம்

மார்க்சிஸ்ட் கம்யூனிஸ்ட் கட்சியின் மாநில செயலாளர் பெ.சண்முகம் சட்டமன்ற செயல்பாடுகள் குறித்து...

Mojtaba Khamenei: లండన్‌లో మొజ్తబా ఖమేనీ ఇల్లు వేలం.. ఖరీదు ఎంతంటే..!

ఇరాన్ సర్వోన్నత నాయకుడు మొజ్తబా ఖమేనీ లండన్‌లోని నివాసం అమ్మకానికి పెట్టారు....