8
September, 2026

A News 365Times Venture

8
Tuesday
September, 2026

A News 365Times Venture

ನೈಸ್ ಯೋಜನೆ; ಕಾನೂನಿನ ಚೌಕಟ್ಟಿನಲ್ಲೇ ಕ್ರಮ: ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

Date:

ಬೆಂಗಳೂರು, ಸೆಪ್ಟಂಬರ್, 7,2026 (www.justkannada.in) :  “ನೈಸ್ ಯೋಜನೆ ಕುರಿತಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಕಾನೂನು ಚೌಕಟ್ಟಿನಲ್ಲೇ ಕೈಗೊಳ್ಳಲಿದೆ” ಎಂದು ಸಿಎಂ ಡಿ .ಕೆ ಶಿವಕುಮಾರ್ ಅವರು ಹೇಳಿದರು.

ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನೈಸ್ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ ಕಾನೂನು ಉಲ್ಲಂಘಿಸಿ ಸಂಪುಟ ತೀರ್ಮಾನ ಕೈಗೊಂಡಿದೆ ಎಂದು ಬಹಿರಂಗ ಪತ್ರ ಬರೆದಿರುವ ಬಗ್ಗೆ ಗಮನ ಸೆಳೆದಾಗ, “ನಾವು ಏನು ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡುತ್ತೇವೆ. ಕಾನೂನು ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಎಲ್ಲವನ್ನೂ ಮರುಪರಿಶೀಲನೆ ಮಾಡುತ್ತಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡುವುದಿಲ್ಲ. ಕಾನೂನು ಉಲ್ಲಂಘನೆಯಾಗಿದ್ದರೆ ಕೋರ್ಟ್ ಇದೆ, ಹೋರಾಟ ಮಾಡಲಿ” ಎಂದು ತೀಕ್ಷ್ಣವಾಗಿ ಹೇಳಿದರು.

ಆಸ್ತಿ ಕಳೆದುಕೊಂಡ ರೈತರ ರಕ್ಷಣೆ ಸರ್ಕಾರದ ಜವಾಬ್ದಾರಿ:

“ರೈತರು ಆಸ್ತಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಹಿಂದಿನ ಸರ್ಕಾರಗಳು ಒಪ್ಪಂದಗಳಿಗೆ ಸಹಿ ಮಾಡಿ ಕೊಟ್ಟಿವೆ. ರೈತರು ಆಸ್ತಿ ಕಳೆದುಕೊಂಡಿದ್ದಾರೆ, ಅವರನ್ನು ರಕ್ಷಣೆ ಮಾಡಬೇಕು. ನನಗೂ ಪ್ರಜ್ಞೆ ಇದೆ. ಮನುಷ್ಯ ವಿದ್ಯಾವಂತನಾಗಿರದಿದ್ದರೂ ಬುದ್ಧಿವಂತನಾಗಿರಬೇಕು, ಸಾಮಾನ್ಯ ಪ್ರಜ್ಞೆ ಇರಬೇಕು” ಎಂದು ತಿರುಗೇಟು ನೀಡಿದರು.

ಇನ್ನಷ್ಟು ತಾಲ್ಲೂಕುಗಳಲ್ಲಿ ಬರ ಘೋಷಣೆ: ವೈಜ್ಞಾನಿಕ ವರದಿ ಆಧರಿಸಿ ಕ್ರಮ

ಬರ ವೀಕ್ಷಣೆಯ ಬಗ್ಗೆ ಕೇಳಿದಾಗ, “ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರ ಘೋಷಣೆ ವಿಚಾರದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವರದಿಗಳನ್ನು ಆಧರಿಸಿ 2–3 ಹಂತಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಇನ್ನೂ ಹಲವು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು” ಎಂದು ಹೇಳಿದರು.

“ಹಲವು ತಾಲ್ಲೂಕಿನಿಂದ ಬರದ ವರದಿಗಳು ಬರುತ್ತಿವೆ. ಇನ್ನೂ ಬಹಳ ತಾಲೂಕುಗಳು ಘೋಷಣೆಯಾಗುತ್ತವೆ. ಬಹಳ ಕಡೆ ಭೀಕರ ಬರ ಇದೆ. 21 ದಿನ ಮಳೆಯಾಗದ ಸ್ಥಳಗಳನ್ನು ಗುರುತಿಸಿ ತಾಂತ್ರಿಕ ವರದಿ ಆಧರಿಸಿ ತೀರ್ಮಾನ ಮಾಡಲಾಗುವುದು” ಎಂದರು.

ಶಾಸಕರು ಆತಂಕ ಪಡಬೇಡಿ: ಸಿಎಂ ಅಭಯ

“ಶಾಸಕರು ಯಾರೂ ಆತಂಕ ಪಡಬೇಡಿ. ಎಲ್ಲೆಲ್ಲಿ ಬರ ಇದೆ ಎಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು. ಉಪಮುಖ್ಯಮಂತ್ರಿ ವರದಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ  ಮಾತನಾಡಿದ್ದೇವೆ. ಒಂದೇ ಸಲ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಹಂತಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದರು.

ರೈತರ ಸಮಸ್ಯೆಗೆ ವಿಶೇಷ ಅಧಿವೇಶನ

“ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆದಿರುವುದಾಗಿ. ಬರಪೀಡಿತ ಪ್ರದೇಶಗಳ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ರೈತರಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ” ಎಂದರು.

Key words: Nice plan, Action, law, CM DK Shivakumar

The post ನೈಸ್ ಯೋಜನೆ; ಕಾನೂನಿನ ಚೌಕಟ್ಟಿನಲ್ಲೇ ಕ್ರಮ: ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಿದ್ಯುತ್ ನಿಗಮಕ್ಕೆ ಆರ್ಥಿಕ ನಷ್ಟ ಆರೋಪ: ನಾಲ್ವರು ಸಿಬ್ಬಂದಿ ಅಮಾನತು

ಮೈಸೂರು,ಸೆಪ್ಟಂಬರ್,8,2026 (www.justkannada.in):  ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಚಾವಿಸನಿನಿ) ಎನ್.ಆರ್.ಮೊಹಲ್ಲಾ...

എ.എഫ്.ഡിയുടെ തെരഞ്ഞെടുപ്പ് മുന്നേറ്റം ആശങ്കാകരം; ജര്‍മനി വീണ്ടും തീവ്ര വലതിന്റെ കയ്യിലേക്കെന്ന് യൂറോപ്യന്‍ നേതാക്കള്‍

പാരീസ്: ജര്‍മനിയിലെ സാക്സോണി-അന്‍ഹാള്‍ട്ട് സംസ്ഥാന തെരഞ്ഞെടുപ്പില്‍ തീവ്ര വലതുപക്ഷ പാര്‍ട്ടിയായ ആള്‍ട്ടര്‍നേറ്റീവ്...

"மூன்று கோப்புகள் இருப்பதாக முதல்வர் சொன்னார், ஏன் அதைப் பற்றி பேசவில்லை? சம்மந்தமே.!" – பெ.சண்முகம்

மார்க்சிஸ்ட் கம்யூனிஸ்ட் கட்சியின் மாநில செயலாளர் பெ.சண்முகம் சட்டமன்ற செயல்பாடுகள் குறித்து...

Mojtaba Khamenei: లండన్‌లో మొజ్తబా ఖమేనీ ఇల్లు వేలం.. ఖరీదు ఎంతంటే..!

ఇరాన్ సర్వోన్నత నాయకుడు మొజ్తబా ఖమేనీ లండన్‌లోని నివాసం అమ్మకానికి పెట్టారు....