ಬೆಂಗಳೂರು,ಸೆಪ್ಟಂಬರ್,4,2026 (www.justkannada.in): ಕೆಪಿಎಸ್ ಸಿ ಹಗರಣದಲ್ಲಿ ಬಂಧಿತನಾಗಿರುವ ಬಸವರಾಜ ಕನ್ನಾಳೆ ಬಾಲ್ಕಿಯ ಬಿಜೆಪಿ ಕಾರ್ಯಕರ್ತ. ನನ್ನ ವಿರುದ್ದ ಸ್ಪರ್ಧೆಗೆ ಸಿದ್ದತೆ ನಡೆಸಿದ್ದ ಎಂದು ಗ್ರಾಮೀಣಾಭಿವೃದ್ದಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಈ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಬಸವರಾಜ ಕನ್ನಾಳೆ ಬಿಜೆಪಿಯವರ ಶಿಫಾರಸಿನಿಂದ ಸಿಂಡಿಕೇಟ್ ಸದಸ್ಯನಾಗಿದ್ದೇನೆ ಎಂದಿದ್ದ. ರಾಜ್ಯಪಾಲರು ಯಾವ ಮಾನದಂಡದಲ್ಲಿ ಆತನನ್ನು ನೇಮಿಸಿದರು? ಬಸವರಾಜ ಕನ್ನಾಳೆ ನನ್ನ ಕಚೇರಿಗೆ ಬಂದು ಆಶೀರ್ವಾದ ಕೇಳಿದ್ದರು ಎಂದು ವೈರಲ್ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದರು.
ಬಸವರಾಜ ಕನ್ನಳೆ ಜೊತ ಬಿಜೆಪಿ ನಾಯಕರ ಫೋಟೋಗಳೂ ಇವೆ ಕನ್ನಾಳೆ ಪ್ರಕರಣದಲ್ಲಿ ಬಿಜೆಪಿ ಜೆಡಿಎಸ್ ರಾಜಕೀಯ ಮಾಡುತ್ತಿದೆ. ಜೆಡಿಎಸ್ ಬಿಜೆಪಿ ತಮ್ಮ ಪಾಪವನ್ನ ಕಾಂಗ್ರೆಸ್ ಮೇಲೆ ಹೊರಿಸುತ್ತಿದೆ ಕೆಪಿಎಸ್ ಸಿ ಹಗರಣದ ಬಗ್ಗೆ ಎಲ್ಲ ಆಯಾಮಗಳ ತನಿಖೆ ನಡೆಯುತ್ತಿದೆ. ಕೆಪಿಎಸ್ ಸಿ ಹಗರಣದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲಿದೆ. ಹಾಲು ಯಾವುದು ನೀರು ಯಾವುದು ತನಿಖೆಯಿಂದ ಬಹಿರಂಗವಾಗಲಿ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
Key words: BJP worker, Basavaraj Kannale, Minister, Ishwar Khandre
The post ಬಸವರಾಜ ಕನ್ನಾಳೆ ಬಾಲ್ಕಿಯ ಬಿಜೆಪಿ ಕಾರ್ಯಕರ್ತ: ನನ್ನ ವಿರುದ್ದ ಸ್ಪರ್ಧೆಗೆ ಸಿದ್ದತೆ ನಡೆಸಿದ್ದ- ಸಚಿವ ಈಶ್ವರ್ ಖಂಡ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





