29
August, 2026

A News 365Times Venture

29
Saturday
August, 2026

A News 365Times Venture

ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ವಿಧಾನಸೌಧ, ಮೈಸೂರು ಅರಮನೆ..!

Date:

ಬೆಂಗಳೂರು,ಆಗಸ್ಟ್,29,2026 (www.justkannada.in): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮಿಗೆ ಮೂರು ವರ್ಷಗಳ ಸಂಭ್ರಮ.

ಈ ಸಂಭ್ರಮದ ಸವಿನೆನಪಿಗಾಗಿ  ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣಕನ್ನಡ  ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ(ಆ.30) ಸಂಜೆ 6ರಿಂದ ರಾತ್ರಿ 10ರವರೆಗೆ ಗುಲಾಬಿ ಬಣ್ಣ(ಪಿಂಕ್ ಲೈಟ್)ದ ಬೆಳಕಿನಲ್ಲಿ ಕಂಗೊಳಿಸಲಿವೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ 2,000/- ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿರುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದು ಇದೇ ಆ.30ಕ್ಕೆ  ಮೂರು ವರ್ಷಗಳನ್ನು ಪೂರೈಸಲಿದೆ.

ಸರ್ಕಾರವು ಗೃಹಲಕ್ಷ್ಮೀ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ(PINK) ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಇದುವರೆಗೂ ಸದರಿ ಯೋಜನೆ ಅಡಿ 1.20ಕೋಟಿ ಫಲನುಭವಿಗಳ ಖಾತೆಗೆ 76500ಕೋಟಿಗೂ  ಹೆಚ್ಚು ಹಣ ಪಾವತಿಸಲಾಗಿದೆ.

Key words: Grihalakshmi, third Year,  Vidhana Soudha, Mysore Palace, pink lights!

The post ಗೃಹಲಕ್ಷ್ಮಿಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ವಿಧಾನಸೌಧ, ಮೈಸೂರು ಅರಮನೆ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.പിയില്‍ ബി.ജെ.പി സീറ്റുകള്‍ കുറയും; കാരണം ജെന്‍ സീ അല്ല, മറ്റൊരു തലമുറയെന്ന് സര്‍വേ

ന്യൂദല്‍ഹി: നിലവിലെ സാഹചര്യത്തില്‍ ഉത്തര്‍ പ്രദേശില്‍ ബി.ജെ.പിക്ക് ജയിക്കാവുന്ന സീറ്റുകളുടെ എണ്ണത്തില്‍...

’பெரியார், அம்பேத்கர் பெயர் விடுபட்டதற்கு நானே தார்மீக பொறுப்பு’ – அமைச்சர் சம்பத்குமார் விளக்கம்!

கோவை கவுண்டர்மில்ஸ் பகுதியில் உள்ள தனியார் கல்லூரியில் தமிழ்நாடு வீட்டுவசதி வாரியம்...

OTR: రాఖీతో పొలిటికల్‌ బంధం బలపడుతుందా..

రాఖీతో పొలిటికల్‌ బంధం బలపడుతుందా..? లేక పండగ పండగే.. రాజకీయం రాజకీయమేనని...

87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK

ಮಂಡ್ಯ,ಆಗಸ್ಟ್,29,2026 (www.justkannada.in): ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಬಿ. ನಾಗೇಂದ್ರ...