28
August, 2026

A News 365Times Venture

28
Friday
August, 2026

A News 365Times Venture

ಬಿ.ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ- ಸಿಎಂ ಡಿಕೆಶಿ

Date:

ನವದೆಹಲಿ,ಆಗಸ್ಟ್,27,2026 (www.justkannada.in):  ಸಚಿವ ಬಿ. ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಸಚಿವ ಬಿ.ನಾಗೇಂದ್ರ ರಾಜೀನಾಮೆ ಬಗ್ಗೆ ಚರ್ಚೆ ವಿಚಾರವಾಗಿ ನವದೆಹಲಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಸಚಿವ ನಾಗೇಂದ್ರ ಪಕ್ಷದ ನಿಷ್ಟಾವಂತ ನಾಯಕ. ಅವರು ಪಕ್ಷಕ್ಕೆ ಆಸ್ತಿ.  ನಾಗೇಂದ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹೈಕಮಾಂಡ್ ನಾಯಕರ  ಮುಂದೆ ವಾಸ್ತವಾಂಶ ಹೇಳಿದ್ದೇನೆ. ಹೈಕಮಾಂಡ್ ನಾಯಕರು ನಿರ್ಧಾರ ತೆಗದುಕೊಳ್ಳಲಿದ್ದಾರೆ  ವಿಪಕ್ಷಗಳ ಒತ್ತಡಕ್ಕೆ ಮಣಿಯುವ ಸಮಯ ಬಂದಿಲ್ಲ. ಕೇಂದ್ರ ಸಚಿವರ ಮೇಲೆ ಕೇಸ್ ಇಲ್ವಾ? ಎಂದು ಪ್ರಶ್ನಿಸಿದರು.

ಸಚಿವ ನಾಗೇಂದ್ರ ವಿರುದ್ದ ಯಾವುದೇ ಸಾಕ್ಷ್ಯಗಳಿಲ್ಲ. ಹೆಚ್ಚು ಎಸ್ ಟಿ ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ.  ಹೆಚ್ಚು ಎಸ್ ಟಿ ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಹೀಗೆ ಮಾಡುತ್ತಿದೆ.  ಪಾದಯಾತ್ರೆ ಮಾಡುವವರನ್ನ ತಡೆಯಲು ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಬಿಜೆಪಿಗರು ಮಾತನಾಡಲು ತಯಾರಿರಲಿಲ್ಲ ಸುಮ್ಮನೇ ಮಾತನಾಡುತ್ತಾರೆ.  ಚರ್ಚೆಗೆ ಬಿಜೆಪಿ ಸಿದ್ದ ಇಲ್ಲ. ಬಿಜೆಪಿಯವರ ವಿರುದ್ದ ಹಲವು ಹಗರಣವಿತ್ತು. ಹೀಗಾಗಿ  ಭಯದಲ್ಲಿ ಸದನದಲ್ಲಿ ಚರ್ಚಿಸಿಲ್ಲ ಎಂದು  ಸಿಎಂ ಡಿಕೆ ಶಿವಕುಮಾರ್  ಟಾಂಗ್ ಕೊಟ್ಟರು.

Key words: B. Nagandra, ready , sacrifice, party, CM DK Shivakumar

The post ಬಿ.ನಾಗೇಂದ್ರ ಪಕ್ಷದ ಹಿತಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿದ್ದಾರೆ- ಸಿಎಂ ಡಿಕೆಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഫലസ്തീന്‍ ആക്ഷനെ യു.എസ് ഭീകര പട്ടികയില്‍ ഉള്‍പ്പെടുത്തി; നിരോധനം നീക്കാന്‍ ബ്രിട്ടിഷ് പ്രധാനമന്ത്രിക്ക് കത്ത്‌

വാഷിങ്ടണ്‍: ബ്രിട്ടണ്‍ ആസ്ഥാനമായി പ്രവര്‍ത്തിക്കുന്ന ഫലസ്തീന്‍ അവകാശ സംഘടനയായ ഫലസ്തീന്‍ ആക്ഷനെ...

`அரசுக்கு திமுக பஞ்சபாண்டவர்களாக துணை நிற்கும்!' – புதுச்சேரி எதிர்க்கட்சித் தலைவர் நாஜிம்

புதுச்சேரி சட்டப்பேரவையில் கவர்னர் உரைக்கு நன்றி தெரிவிக்கும் தீர்மானத்தின் மீது பேசிய...

PMSBY: రూ.20తో రూ.2 లక్షల బీమా.. ఈ ప్రభుత్వ పథకం గురించి తెలుసా?

PMSBY: సాధారణంగా బీమా పాలసీ తీసుకోవాలంటే ప్రతి ఏడాది భారీ మొత్తంలో...

ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿಹಾಕಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರುಗಿ,ಆಗಸ್ಟ್,27,2026 (www.justkannada.in): ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡುವ ಸಾಧ್ಯತೆ...