27
August, 2026

A News 365Times Venture

27
Thursday
August, 2026

A News 365Times Venture

ಆಸ್ತಿ ಉಯಿಲಿನ ಸಾಕ್ಷಿ ಬಂಧನ ಹಿನ್ನೆಲೆ: ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Date:

ಬೆಂಗಳೂರು,ಆಗಸ್ಟ್,27,2026 (www.justkannada.in): ಆಸ್ತಿ ಉಯಿಲಿನ ಸಾಕ್ಷಿಯೊಬ್ಬರನ್ನು ಪೊಲೀಸರು ಬಂಧಿಸಿದ ಹಿನ್ನೆಲೆ,  ಬಂಧನವನ್ನು ಕಾನೂನು ಬಾಹಿರ ಎಂದು ಘೋಷಿಸಿದ ಹೈಕೋರ್ಟ್ ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯ ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದೆ.

ಆಸ್ತಿ ಉಯಿಲಿನ ಸಾಕ್ಷಿ ಕೆಎನ್ ಮೋಹನ್ ರೆಡ್ಡಿ ಬಂಧನ ಕಾನೂನು ಬಾಹಿರಬವೆಂದು ಆದೇಶಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು, ವೈಟ್ ಫೀಲ್ಡ್ ತನಿಖಾಧಿಕಾರಿ ಸುನೀಲ್ ಮತ್ತು  ಎಸಿಬಿ ಡಿಸಿಪಿಗೆ  ತರಾಟೆಗೆ ತೆಗದುಕೊಂಡು ಕಾನೂನು ಬಾಹಿರ ಬಂಧನಗಳನ್ನ ನಿಲ್ಲಿಸಲು ಸೂಚಿಸಿತು.

ಆಗಸ್ಟ್  27ಕ್ಕೆ  ಹಾಜರಾಗಲು ನೋಟಿಸ್ ಕೊಟ್ಟು ಆಗಸ್ಟ್ 25ರಂದೇ ಬಂಧನ. ಮಾಡಿದ್ದೀರಿ.  ಯಾವುದೇ ಕಾರಣಗಳಿಲ್ಲದ್ದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ.   ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ?  ಕೊಲೆಯಂತಹ ಕೇಸ್ ತನಿಖೆ ಬಿಟ್ಟು ಸಿವಿಲ್ ವ್ಯಾಜ್ಯ ಹಿಂದೆ ಬಿದ್ದಿದ್ದೀರಾ?  ಇಲ್ಲಿ ಕಾನೂನಿನ ಆಡಳಿತವಿಲ್ಲ.  ಪೊಲೀಸ್ ರಾಜ್ಯವಾಗುವುದನ್ನ ತಪ್ಪಿಸಿ ಇಲ್ಲವಾದರೇ ಉಕ್ಕಿನ ಕೈಗಳಿಂದ ನಿಲ್ಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು.

ಅಲ್ಲಿ ಇಲ್ಲಿ ಒಳ್ಳೆ ಕೆಲಸ ಮಾಡುತ್ತಾರೆಂದು ಬಿಟ್ಟಿದ್ದೇವೆ.  ಸಿವಿಲ್ ಕೇಸ್ ನಲ್ಲಿ ಪೊಲೀಸರ ಮಧ್ಯಪ್ರವೇಶವೇಕೆ?  ಉನ್ನತ ಅದಿಕಾರಿಗಳ ಒತ್ತಡದಿಂದ ಬಂಧಿಸಿದ್ದಾರಾ? ಎಸಿಪಿ, ಡಿಸಿಪಿ ಏನು ಮಾಡುತ್ತಿದ್ದಾರೆ? ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಎಂದು ಕ್ಲಾಸ್ ತೆಗೆದುಕೊಂಡ ನ್ಯಾಯಪೀಠವು,  ಆಸ್ತಿ ಉಯಿಲಿನ ಸಾಕ್ಷಿ ಬಂಧನ ಕಾನೂನು ಬಾಹಿರವೆಂದು ಘೋಷಿಸಿತು. ಹಾಗೆಯೇ ತನಿಖಾಧಿಕಾರಿ ಉನ್ನತಾಧಿಕಾರಿಗಳ ಜೇಬಿನಿಂದ 3 ಲಕ್ಷ ದಂಡ ಭರಿಸಲು ಆದೇಶ ಹೊರಡಿಸಿತು.

Key words:  arrest, witness, property will,  High Court, imposes, fine

The post ಆಸ್ತಿ ಉಯಿಲಿನ ಸಾಕ್ಷಿ ಬಂಧನ ಹಿನ್ನೆಲೆ: ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മണ്ഡല പുനര്‍നിര്‍ണയം: പ്രത്യേക പാര്‍ലമെന്റ് സമ്മേളന നീക്കത്തില്‍ മോദിക്ക് കത്തയച്ച് ഖാര്‍ഗെ

ന്യൂദല്‍ഹി: മണ്ഡല പുനര്‍നിര്‍ണയ ബില്ല് അവതരിപ്പിക്കാന്‍ പാര്‍ലമെന്റിന്റെ പ്രത്യേക സമ്മേളനം നടത്താനുള്ള...

'விமர்சித்த உதயநிதி; மாலையில் திடீரென அவைக்குள் வந்த முதல்வர் விஜய்!' – பின்னணி என்ன?

சட்டமன்றத்தில் மானியக் கோரிக்கை மீதான விவாதம் நடந்து வரும் நிலையில், முதல்வர்...

OTR: టీడీపీకి మింగుడుపడని ఆలూరు, మంత్రాలయం నియోజకవర్గాలు

OTR: ఒక్కొక్కరు కాదు…. ఒకేసారి ఇద్దరు మంత్రులు. ఇక మీదట మోహరింపులు...

ಲಿಂಗಾಂಬುಧಿ ಕೆರೆ ಪ್ರವೇಶ ಶುಲ್ಕ ವಿರೋಧಿಸಿ ವಾಯುವಿಹಾರಿಗಳ ಪ್ರತಿಭಟನೆ

ಮೈಸೂರು,ಆಗಸ್ಟ್,27,2026 (www.justkannada.in):  ಲಿಂಗಾಂಬುಧಿ ಕೆರೆ ನಿರ್ವಹಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ...