27
August, 2026

A News 365Times Venture

27
Thursday
August, 2026

A News 365Times Venture

ಲಿಂಗಾಂಬುಧಿ ಕೆರೆ ಪ್ರವೇಶ ಶುಲ್ಕ ವಿರೋಧಿಸಿ ವಾಯುವಿಹಾರಿಗಳ ಪ್ರತಿಭಟನೆ

Date:

ಮೈಸೂರು,ಆಗಸ್ಟ್,27,2026 (www.justkannada.in):  ಲಿಂಗಾಂಬುಧಿ ಕೆರೆ ನಿರ್ವಹಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ವಿಧಿಸಲು ಮುಂದಾಗಿರುವ ಪ್ರವೇಶ ಶುಲ್ಕವನ್ನು ಕೈಬಿಡುವಂತೆ ಒತ್ತಾಯಿಸಿ ವಾಯುವಿಹಾರಿಗಳು ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಸಹಾಯಕ ವಲಯ ಅರಣ್ಯಾಧಿಕಾರಿ ಪ್ರಮೋದ್ ಅವರಿಗೆ ಸಲ್ಲಿಸಿದರು.

ಲಿಂಗಾಂಬುಧಿ ಮಿತ್ರರ ಬಳಗದ ಅಧ್ಯಕ್ಷ ನಾಗೇಶ್ ಸೇರಿದಂತೆ ಮುಖಂಡರು ಹಾಗೂ ವಾಯುವಿಹಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜನರ ವಿರೋಧದ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕ ಹಿಂಪಡೆಯುವ ಕುರಿತು ವಲಯ ಅರಣ್ಯಾಧಿಕಾರಿಯೊಂದಿಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಪ್ರಮೋದ್ ಭರವಸೆ ನೀಡಿದರು.

ಆದರೆ, ಪ್ರವೇಶ ಶುಲ್ಕದ ಆದೇಶವನ್ನು ತೆರವುಗೊಳಿಸಿ, ಲಿಖಿತವಾಗಿ ಶುಲ್ಕ ಹಿಂಪಡೆಯುವ ಆದೇಶ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಇದೇ ವಿಚಾರವಾಗಿ ಆಗಸ್ಟ್ 30ರ ಭಾನುವಾರ ಲಿಂಗಾಂಬುಧಿ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಹಾಗೂ ವಾಯುವಿಹಾರಿಗಳು ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ENGLISH SUMMARY…

Protest Against Lingambudhi Park Entry Fee

Mysuru: Morning walkers submitted a petition to the Forest Department opposing the proposed entry fee at Lingambudhi Park.

Officials assured them that the demand to withdraw the fee would be discussed with higher authorities. However, protesters warned that their agitation would continue until a written order withdrawing the fee is issued.

A mass protest is planned on August 30 at Lingambudhi Park, with citizens and morning walkers urged to participate in large numbers.

Key words: Protest, Against ,Lingambudhi Park, Entry Fee

The post ಲಿಂಗಾಂಬುಧಿ ಕೆರೆ ಪ್ರವೇಶ ಶುಲ್ಕ ವಿರೋಧಿಸಿ ವಾಯುವಿಹಾರಿಗಳ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

എന്റെ മരണത്തിന് ഏക ഉത്തരവാദി എം.വി.ഡി; ഫേസ്ബുക്ക് പോസ്റ്റിന് പിന്നാലെ ജീവനൊടുക്കി ഓട്ടോ ഡ്രൈവര്‍

മലപ്പുറം: തന്റെ മരണത്തിന്റെ ഏക ഉത്തരവാദി കേരളത്തിലെ മോട്ടോര്‍ വാഹന വകുപ്പ്...

`சட்டமன்றம் தனிநபர் மோதல்கள் நிறைந்த 'டிராமா மன்றமாக' மாறிவிடக் கூடாது!' – அண்ணாமலை

கோவையில் உள்ள தனியார் கல்லூரியில் நடைபெற்ற நிகழ்ச்சியில் 'வீ தி லீடர்ஸ்'...

Nepal-Tibet Flash Floods: కైలాస మానస సరోవర్ యాత్ర నిలిపివేత.. అన్ని మార్గాలు మూసివేత..? వెనక్కి వెళ్లిపోండి..!

Nepal-Tibet Flash Floods: నేపాల్, టిబెట్‌ సరిహద్దు ప్రాంతాల్లో సంభవించిన భారీ...

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ: ಆದರೂ ನಾನು ಒಳ ಮೀಸಲಾತಿ, ಸಾಮಾಜಿಕ ನ್ಯಾಯದ ಪರ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್‌, 25,2026 (www.justkannada.in): ನಾನೀಗ ಸರ್ಕಾರದ ಮುಖ್ಯಸ್ಥನಲ್ಲ. ಅಧಿಕಾರ ಇರಲಿ,...