ಬೆಂಗಳೂರು,ಆಗಸ್ಟ್,24,2026 (www.justkannada.in): ಕೈಗಾರಿಕೆ–ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸ ಸಲುವಾಗಿ ಜಪಾನ್‌ನ ಜೆನ್ ಸೆಟ್ ತಯಾರಿಕಾ ಕಂಪನಿಯ ನಿಯೋಗವು ಬೆಂಗಳೂರಿನ ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವೀನ್ಯತಾ ಪ್ರತಿಷ್ಠಾನಕ್ಕೆ ಭೇಟಿ ನೀಡಿತು.
ನಿಯೋಗವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ಭೇಟಿ ಮಾಡಿ, ತಂತ್ರಜ್ಞಾನ ಸಹಯೋಗ, ಜಂಟಿ ಉದ್ಯಮಗಳು, ತಂತ್ರಜ್ಞಾನ ವರ್ಗಾವಣೆ ಹಾಗೂ ಕೈಗಾರಿಕೆ–ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವ, ಜಪಾನಿನ ತಂತ್ರಜ್ಞಾನ, ಗುಣಮಟ್ಟ ಮತ್ತು ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ಭಾರತದ ಉತ್ಪಾದನಾ ಸಾಮರ್ಥ್ಯ, ವೆಚ್ಚ ಸ್ಪರ್ಧಾತ್ಮಕತೆ ಕುರಿತು ಚರ್ಚೆ ನಡೆದವು.
ಈ ವೇಳೆ ಮಾತನಾಡಿದ ಕುಲಪತಿ ಪ್ರೊ.ವಿದ್ಯಾಶಂಕರ್, “ಈ ಭೇಟಿಯು ಬಲವಾದ ಅಂತಾರಾಷ್ಟ್ರೀಯ ಕೈಗಾರಿಕಾ ಸಹಭಾಗಿತ್ವಗಳನ್ನು ನಿರ್ಮಿಸುವ ವಿಟಿಯುನ ಪ್ರಯತ್ನಗಳ ಭಾಗವಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿ ಕ್ಯಾಂಪಸ್ ನಲ್ಲಿ ಮೊಬಿಲಿಟಿ ಮತ್ತು ಎನರ್ಜಿ ಕ್ಷೇತ್ರದಲ್ಲಿ ಸೆಂಟರ್ ಆಫ್ ಎಕ್ಸ ಲೆನ್ಸ್ ಸ್ಥಾಪಿಸಲು ವಿಟಿಯು ಭಾರತೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕೆಗಳೊಂದಿಗೆ ಸಹಯೋಗ ಮಾಡುತ್ತಿದೆ. ಇದರ ಭಾಗವಾಗಿ ಜಪಾನ್ ನಿಯೋಗ ಭೇಟಿ ನೀಡಿದೆ” ಎಂದರು.
ಈ ವೇಳೆ ವಿಟಿಯು ಕುಲಸಚಿವ ಡಾ. ಪ್ರಸಾದ ರಾಂಪುರೆ, ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ. ಸುದರ್ಶನ್ ರೆಡ್ಡಿ, ವಿಶೇಷ ಅಧಿಕಾರಿ ಡಾ. ಅಜಿತ್ ಪದ್ಯಾಣ, ವಿಟಿಯು ಪ್ರೊಫೆಸರ್ ಆಫ್ ಪ್ರಾಕ್ಟೀಸ್ ಡಾ. ಕಲ್ಯಾಣಕುಮಾರ್ ಹಟ್ಟಿ ಇತರರು ಇದ್ದರು.
ENGLISH SUMMARY..
Japan Delegation Visits VTU Bengaluru Centre
Discussion on Industry–Academia Agreement
Bengaluru: A delegation from a Japanese genset manufacturing company visited the Visvesvaraya Research and Innovation Foundation in Bengaluru to explore opportunities for industry–academia collaboration.
The delegation met Visvesvaraya Technological University (VTU) Vice-Chancellor Prof. S. Vidyashankar and held discussions on technology collaboration, joint ventures, technology transfer, industry–academia partnerships, Japanese technology, quality and engineering excellence, as well as India’s manufacturing capabilities and cost competitiveness.
Speaking on the occasion, VTU Vice-Chancellor Prof. Vidyashankar said, “This visit is part of VTU’s efforts to build strong international industrial partnerships. VTU is collaborating with Indian and international industries to establish a Centre of Excellence in the mobility and energy sectors at the Muddenahalli campus, the birthplace of Sir M. Visvesvaraya. As part of this initiative, the Japanese delegation visited VTU.”
VTU Registrar Dr. Prasad Rampure, VTU Regional Director Dr. Sudarshan Reddy, Special Officer Dr. Ajith Padyana, VTU Professor of Practice Dr. Kalyan Kumar Hatti, and others were present on the occasion.
Key words: Japanese delegation, visits, VTU, Bengaluru centre
The post VTU ಬೆಂಗಳೂರು ಕೇಂದ್ರಕ್ಕೆ ಜಪಾನ್ ನಿಯೋಗ ಭೇಟಿ, ಚರ್ಚೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





