19
August, 2026

A News 365Times Venture

19
Wednesday
August, 2026

A News 365Times Venture

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮತ್ತೆ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸರ್ಕಾರ ತೀರ್ಮಾನ

Date:

ಬೆಂಗಳೂರು,ಆಗಸ್ಟ್,19,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ   KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಅವರನ್ನು ಮತ್ತೆ ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಶಿವಶಂಕರಪ್ಪ ಅವರ ವಿರುದ್ಧ ರಾಜ್ಯಪಾಲರು ಕೈಗೊಂಡಿದ್ದ ಅಮಾನತು ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ, ಅವರನ್ನು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಮರು ನೇಮಕ ಮಾಡಿವಂತೆ ಆದೇಶಿಸಿದೆ.  ಈ ಬೆನ್ನಲ್ಲೇ ಇದೀಗ, ರಾಜ್ಯ ಸರ್ಕಾರವು ಕಾನೂನು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದು, ಶಿವಶಂಕರಪ್ಪ ಅವರನ್ನು ಮತ್ತೆ ಅಮಾನತುಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಿದ್ಧತೆ ನಡೆಸಿದೆ.

ಈ ಹಿಂದಿನ ಅಮಾನತು ಪ್ರಕ್ರಿಯೆಯಲ್ಲಿ ಕಂಡುಬಂದಿದ್ದ ತಾಂತ್ರಿಕ ಲೋಪವೇ ಹೈಕೋರ್ಟ್ ಆದೇಶಕ್ಕೆ ಪ್ರಮುಖ ಕಾರಣವಾಗಿತ್ತು. ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಶಿಫಾರಸ್ಸಿನ ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟು ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತ್ತು. ಅಲ್ಲದೆ 7 ದಿನದಲ್ಲಿ ಶಿವಶಂಕರಪ್ಪ ಅವರನ್ನು ಮತ್ತೆ ಕೆಪಿಎಸ್ ಸಿ ಅಧ್ಯಕ್ಷರನ್ನಾಗಿ ಮರು ನೇಮಿಸುವಂತೆ ಆದೇಶಿಸಿದೆ.

ಆದರೆ ಇದೀಗ ರಾಜ್ಯ ಸರ್ಕಾರ ಆಗಸ್ಟ್ 21 ರಂದು ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಶಿವಶಂಕರಪ್ಪ ಅವರನ್ನು  ಮತ್ತೆ ಅಮಾನತುಗೊಳಿಸಲು  ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

Key words: Government, recommend, Governor, suspension, KPSC, Shivashankarappa

The post KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮತ್ತೆ ಅಮಾನತಿಗೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸರ್ಕಾರ ತೀರ್ಮಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Pakistan: ఇమ్రాన్ ఖాన్‌కు ఊరట.. 9 నెలల తర్వాత భార్య, సోదరిని కలిసిన మాజీ ప్రధాని..

Pakistan: పాకిస్తాన్ మాజీ ప్రధానమంత్రి మరియు పాకిస్తాన్ తెహ్రీక్-ఎ-ఇన్సాఫ్ (పిటిఐ) వ్యవస్థాపకుడు...

നിങ്ങള്‍ എന്തിനാണ് ഷോര്‍ട്ട്‌സ് ധരിച്ചത്, ഹിന്ദുസംസ്‌കാരം എന്താണെന്ന് അറിയില്ലേ; പൂനെയില്‍ വിനോദ സഞ്ചാരികള്‍ക്ക് ഹിന്ദുത്വ മര്‍ദനം

പൂനെ: പൂനെ സിംഹഗഡ് കോട്ടയില്‍ വിനോദസഞ്ചാരികള്‍ക്ക് നേരെ ആക്രമണം. ഷോര്‍ട്‌സ് ധരിച്ചെത്തിയതിനായിരുന്നു...

"தவெக 10 சீட்டுக்கு மேல் ஜெயித்தால்…" – சவாலில் தோற்றதால் மீசையை மழித்த அதிமுக மாசெ

அ.தி‌.மு.க-வின் நீலகிரி மாவட்ட செயலாளராகத் தற்போது பதவி வகித்து வருகிறார் வழக்கறிஞர்...