9
August, 2026

A News 365Times Venture

9
Sunday
August, 2026

A News 365Times Venture

ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

Date:

ಬೆಂಗಳೂರು,ಆಗಸ್ಟ್,7,2026 (www.justkannada.in): ಹೈಕಮಾಂಡ್ ಒಂದು ವೇಳೆ ಪಕ್ಷದ ಜವಾಬ್ದಾರಿ ನೀಡಿದರೇ ಸ್ವೀಕರಿಸುವೆ. ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೆಲ ಸಚಿವರನ್ನು ಬದಲಿಸಿ ಅಸಮಾಧಾನಿತರಿಗೆ ಸ್ಥಾನ ನೀಡುವ ವಿಚಾರ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂಬ ವಿವೇಚನೆ ಸಿಎಂಗೆ ಇದೆ.  ಹೈಕಮಾಂಡ್ ಜೊತೆ ಮಾತನಾಡಿ ಯಾರಿಗೆ ಜವಾಬ್ದಾರಿ ಕೊಟ್ಟರೆ  ಚೆನ್ನಾಗಿ ಕೆಲಸ ಮಾಡುತ್ತಾರೆ  ಎಂದುದು ನೋಡಿ ಜವಾಬ್ದಾರಿ ಕೊಡುತ್ತಾರೆ.  135 ಶಾಸಕರಿದ್ದೇವೆ ಮಂತ್ರಿಮಂಡಲದಲ್ಲಿ 33 ಸಚಿವರಿಗೆ ಮಾತ್ರ ಸ್ಥಾನ.  ಹೀಗಿರುವಾಗ ಎಲ್ಲ ಶಾಸಕರಿಗೂ ಪ್ರಾತಿನಿಧ್ಯ ನೀಡುವುದು ಕಷ್ಟ ಆಗುತ್ತೆ. ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

ಅಕಸ್ಮಾತ್ ಹೈಕಮಾಂಡ್ ಗೆ ಅನಿಸಿ ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಹೈಕಮಾಂಡ್ ನಾಳೆ ಪಕ್ಷದ ಜವಾಬ್ದಾರಿ ನೀಡಿದರೇ ಸ್ವೀಕರಿಸುವೆ. ಇದು ಎಲ್ಲರಿಗೂ ಅನ್ವಯಾಗುತ್ತೆ, ಅಸಮಾಧಾನ ಪಡುವಂಥದ್ದೇನಿಲ್ಲ ಎಂದರು.

Key words:  ready, resign, party, work, Home Minister, Priyank Kharge

The post ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದ- ಗೃಹ ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

"ரஷ்யாவுடன் கைகோர்க்கும் வடகொரியா; தென் கொரியாவிற்கும் ஆபத்து" – ஜெலன்ஸ்கி எச்சரிக்கை

ஈரான் போரில் அமைதிப் பேச்சுவார்த்தை நடந்துகொண்டிருக்க, இன்னொரு பக்கம், ரஷ்யா -...

Vaibhav Sooryavanshi: హెల్మెట్ పగిలేలా బంతి విసురుతా… వైభవ్ సూర్యవంశీకి షాకింగ్ ఛాలెంజ్..

భారత యువ క్రికెట్ సంచలనం వైభవ్ సూర్యవంశీపై ఆస్ట్రేలియా మాజీ వేగవంతమైన...

ಆ.13ರ  ಬಂದ್ ಮುಂದೂಡುವುದು ಸೂಕ್ತ – ಕುರುಬೂರು ಶಾಂತಕುಮಾರ್

ಮೈಸೂರು,ಆಗಸ್ಟ್,7,2026 (www.justkannada.in):  ತಮಿಳುನಾಡಿಗೆ ನೀರು ಬಿಡುದಂತೆ ಆಗ್ರಹಿಸಿ ಆಗಸ್ಟ್ 13...

നാല് വര്‍ഷത്തിനിടെ ഇരുപതിലധികം ആണ്‍കുട്ടികളെ പീഡിപ്പിച്ചു; മൊബൈലില്‍ ഇരുനൂറിലേറെ ദൃശ്യങ്ങള്‍; മഹാരാഷ്ട്രയില്‍ 22കാരന്‍ അറസ്റ്റില്‍

മുംബൈ: മഹാരാഷ്ട്രയിലെ നന്തുര്‍ബാറില്‍ പ്രായപൂര്‍ത്തിയാകാത്ത ആണ്‍കുട്ടികളടക്കം 20ലേറെ പേരെ ലൈംഗികമായി പീഡിപ്പിച്ചെന്ന...