20
July, 2026

A News 365Times Venture

20
Monday
July, 2026

A News 365Times Venture

ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ

Date:

ಬೆಂಗಳೂರು,ಜುಲೈ,18,2026 (www.justkannada.in): ಬಿಡದಿ ಟೌನ್‌ ಶಿಪ್‌  ಯೋಜನೆ ವಿರೋಧಿಸಿ  ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಪ್ರತ್ಯೇಕ ಪಾದಯಾತ್ರೆಗೆ ಮುಂದಾಗಿವೆ.

ಬಿಡದಿ ಟೌನ್‌ಶಿಪ್ ಯೋಜನೆಯ ವಿರುದ್ಧ ನಿನ್ನೆ ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿತ್ತು. ಈ ಬೆನ್ನಲ್ಲೆ ಇದೀಗ ಜೆಡಿಎಸ್ ಮೂರು ದಿನಗಳ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ. ಬಿಡದಿಯ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಈ ಪಾದಯಾತ್ರೆ ನಡೆಯಲಿದೆ. ಜುಲೈ 30, 31 ಮತ್ತು ಆಗಸ್ಟ್ 1 ರಂದು  ಪಾದಯಾತ್ರೆ ನಡೆಯಲಿದೆ ಎಂದು ಘೋಷಣೆ ಮಾಡಿದೆ.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣ ರೆಡ್ಡಿ, ಸುದ್ದಿಗೋಷ್ಠಿ ನಡೆಸಿ ಈ ಪಾದಯಾತ್ರೆ ಬಗ್ಗೆ ಘೋಷಣೆ ಮಾಡಿದ್ದಾರೆ. ಪಾದಯಾತ್ರೆಗೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದು,  ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಯ ನೇತೃತ್ವ ವಹಿಸುತ್ತಾರೆ ಎಂದಿದ್ದಾರೆ.

‘ಬಿಡದಿ ಟೌನ್‌ಶಿಪ್ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತೇವೆ. ಸರ್ಕಾರ ಉನ್ನತ ಮಟ್ಟದ ಕಮಿಟಿ ರಚಿಸುವುದಾಗಿ ಹೇಳಿತ್ತು. ಅದರೆ  ಫೈನಲ್ ನೋಟಿಫಿಕೇಷನ್ ಹೊರಡಿಸಿದೆ. ಇದಕ್ಕೆ ವಿರೋಧಿಸಿ ಪಾದಯಾತ್ರೆಗೆ ಮುಂದಾಗಿದ್ದೇವೆ ಎಂದರು.

Key words: JDS, Padayatre, July 30, against, Bidadi Township

The post ಬಿಡದಿ ಟೌನ್ ಶಿಪ್  ವಿರೋಧಿಸಿ ಜು.30ರಿಂದ JDS ಪಾದಯಾತ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സി.ജെ.പി മാര്‍ച്ച്: പ്രതിഷേധക്കാരെ അടിച്ചോടിച്ച് പൊലീസ്; ജന്തര്‍ മന്തറില്‍ സംഘര്‍ഷം

  ന്യൂദല്‍ഹി: നീറ്റ് പരീക്ഷാ ക്രമക്കേടില്‍ കേന്ദ്ര വിദ്യാഭ്യാസ മന്ത്രി ധര്‍മേന്ദ്ര...

திமுக எம்எல்ஏ கைது: “திமுக-வினரைத் துன்புறுத்த வேண்டும் என்ற நோக்கில்…" – ஆர்.எஸ். பாரதி கண்டனம்

தி.மு.க அமைப்புச் செயலாளர் ஆர்.எஸ். பாரதி சென்னையில் செய்தியாளர்களைச் சந்தித்தார். அப்போது,...

Zohran Mamdani: నెతన్యాహూను అరెస్ట్ చేస్తాం.. న్యూయార్క్ మేయర్ హెచ్చరిక..

Zohran Mamdani: ఇజ్రాయిల్ ప్రధాని బెంజమిన్ నెతన్యాహూ ఐక్యరాజ్యసమితి సదస్సు కోసం...