16
July, 2026

A News 365Times Venture

16
Thursday
July, 2026

A News 365Times Venture

ಚಿನ್ನಸ್ವಾಮಿ ಕ್ರೀಡಾಂಗಣ ದುರಂತ: ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

Date:

ಬೆಂಗಳೂರು, ಜುಲೈ,14,2026 (www.justkannada.in): 2025ರ ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ (ಸ್ಟಾಂಪೀಡ್) ಘಟನೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ತನಿಖೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಬಿ. ದಯಾನಂದ ಅವರನ್ನು ಮೊದಲು ಅಮಾನತುಗೊಳಿಸಲಾಗಿತ್ತು. ಬಳಿಕ ಅಮಾನತು ಆದೇಶವನ್ನು ಹಿಂಪಡೆದು, ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ಆರಂಭಿಸಲಾಗಿತ್ತು.

ಸರ್ಕಾರವು ಆರೋಪ ಪತ್ರ ಹಾಗೂ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಬಿ. ದಯಾನಂದ ಅವರು 2025ರ ಸೆಪ್ಟೆಂಬರ್ 8ರಂದು ತಮ್ಮ ಲಿಖಿತ ಉತ್ತರ ಸಲ್ಲಿಸಿದ್ದರು. ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ಅವರು ತಳ್ಳಿಹಾಕಿ, ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದರು.

ಅಧಿಕಾರಿಯ ಉತ್ತರ ಹಾಗೂ ಆಡಳಿತ ಇಲಾಖೆಯ ಅಭಿಪ್ರಾಯವನ್ನು ಪರಿಶೀಲಿಸಿದ ನಂತರ, ಸಮರ್ಥ ಪ್ರಾಧಿಕಾರವು ಇಲಾಖಾ ವಿಚಾರಣೆಯನ್ನು ಕೈಬಿಡುವ ನಿರ್ಧಾರ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಜುಲೈ 14, 2026ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಆದೇಶ ಹೊರಡಿಸಿದ್ದು, ಬಿ. ದಯಾನಂದ ವಿರುದ್ಧ ಆರಂಭಿಸಲಾಗಿದ್ದ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ, ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಅವರನ್ನು ನಿರ್ದೋಷಿ (Exonerated) ಎಂದು ಘೋಷಿಸಿದೆ. ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದೆ.

Key words: Chinnaswamy Stadium, tragedy, Government, IPS officer, B. Dayanand

The post ಚಿನ್ನಸ್ವಾಮಿ ಕ್ರೀಡಾಂಗಣ ದುರಂತ: ಐಪಿಎಸ್ ಅಧಿಕಾರಿ ಬಿ. ದಯಾನಂದ ವಿರುದ್ಧದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘നീ മുസ്‌ലിം അല്ലേ’ എന്ന് ചോദിച്ച് കുത്തിയത് 15 തവണ; ഇന്ത്യന്‍ യുവാവിന് നേര്‍ക്ക് യു.എസില്‍ വംശീയ ആക്രമണം

വാഷിങ്ടണ്‍: യുഎസിലെ യൂട്ട സംസ്ഥാനത്ത് ഇന്ത്യക്കാരനായ യുവാവിന് നേര്‍ക്ക് വംശീയ ആക്രമണം....

தரையில் அமரும் பயணிகள்; மூக்கை பிடிக்கும் அளவுக்கு சுகாதார சீர்கேடு- பெரம்பலூர் பேருந்து நிலைய அவலம்

பெரம்பலூர் புதிய பேருந்து நிலையத்தில் மாணவர்கள், பணிக்குச் செல்வோர், ஊர்களுக்குச் செல்வோர்...

HMDA చీఫ్ ఇంజనీర్ పై ACB ఉక్కుపాదం.. 20 గంటల సోదాలు.. రూ.100 కోట్ల ఆస్తుల గుర్తింపు.!

HMDA Chief Engineer Asset: హైదరాబాద్ మెట్రోపాలిటన్ డెవలప్‌మెంట్ అథారిటీ (HMDA)...

ഇ-20 വീഡിയോ ഗഡ്കരിയെ താറടിക്കാനെന്ന ബി.ജെ.പി ഐ.ടി സെല്‍ കണ്‍വീനറുടെ പരാതിയില്‍ 4 പേര്‍ക്കെതിരെ കേസ്

നാഗ്പൂര്‍: ഇ-20 ഇന്ധനത്തെക്കുറിച്ച് വീഡിയോ ചെയ്ത നാല് ഇന്‍ഫ്‌ളൂവന്‍സര്‍മാര്‍ക്കെതിരെ കേസ്. ബി.ജെ.പി...