ಕಲಬುರಗಿ,ಜುಲೈ,14,2026 (www.justkannada.in): ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಸೆಂಟ್ರಲ್ ಜೈಲಿನಿಂದ ಮೂವರು ಸಜಾಕೈದಿಗಳು ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
ಮಸ್ತಾನ್, ಸಂತೋಷ್, ಸಾಗರ್ ಪರಾರಿಯಾಗಿರುವ ಸಜಾ ಕೈದಿಗಳು ತಡರಾತ್ರಿ 3 ಗಂಟೆಗೆ ವೇಳೆಗೆ ಈ ಮೂವರು ಸಜಾ ಕೈದಿಗಳು ಜೈಲಿನ ಕಾಂಪೌಡ್ ಹಾರಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ .
ಬೀದರ್ ಕೊಲೆ ಕೇಸ್ ನಲ್ಲಿ ಮೂವರು ಕೈದಿಗಳು ಶಿಕ್ಷೆಗೊಳಗಾಗಿದ್ದರು ಫರತಹಬಾದ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಕೈದಿಗಳು ಜೈಲಿನಿಂದ ಎಸ್ಕೇಪ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೈದಿಗಳ ಪತ್ತೆಗೆ ಪೊಲೀಸಲು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.
Key words: Three prisoners, escape, jail, Kalburagi
The post ಗೃಹ ಸಚಿವರ ತವರು ಜಿಲ್ಲೆಯಲ್ಲೇ ಜೈಲಿನಿಂದ ಮೂವರು ಕೈದಿಗಳು ಎಸ್ಕೇಪ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





