9
July, 2026

A News 365Times Venture

9
Thursday
July, 2026

A News 365Times Venture

ವಯನಾಡಿನಲ್ಲಿ ಭೀಕರ  ಗುಡ್ಡ ಕುಸಿತ; ಮೂವರು ಸಾವು

Date:

ವಯನಾಡ್​,ಜುಲೈ,7,2026 (www.justkannada.in):  ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆಯುತ್ತಿರುವ ಟ್ವಿನ್-ಟನಲ್ ಯೋಜನಾ ಕಾಮಗಾರಿ ಸ್ಥಳದಲ್ಲಿ ಸಂಭವಿಸಿರುವ ಭಾರೀ ಪ್ರಮಾಣದ ಗುಡ್ಡ ಕುಸಿತದಿಂದ ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂಕುಸಿತದಲ್ಲಿ ಸುಮಾರು ಏಳು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು. ಮೂವರು ಮೃತಪಟ್ಟಿದ್ದಾರೆ. ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಯನಾಡ್​ನಲ್ಲಿನ ಮೆಪ್ಪಾಡಿ ಬಳಿಯ ಕಲ್ಲಾಡಿಯ ಹತ್ತಿರ ಭಾರಿ ಭೂಕುಸಿತ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಈ ಭೂ ಕುಸಿತ ಸಂಭವಿಸಿದೆ. ಇಲ್ಲಿ ವಯನಾಡ್​ ಜಿಲ್ಲೆ ಮತ್ತು ಮಲ್ಲಪುರಂಗೆ ಸಂಪರ್ಕಿಸುವ ರಸ್ತೆ ಸುರಂಗ ಮಾರ್ಗದ ಯೋಜನೆ ಕಾರ್ಯ ಸಾಗುತ್ತಿತ್ತು. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಈ ವರದಿಯಾಗುತ್ತಿದ್ದಂತೆ ಕಲ್ಲಪೆಟ್ಟದಿಂದ ಅಗ್ನಿಶಾಮಕ ದಳ ಮತ್ತು ರಕ್ಷಣಾ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೇರಳ ಸಿಎಂ  ವಿ.ಡಿ. ಸತೀಶನ್ ತುರ್ತು ಸಭೆ  ನಡೆಸಿದ್ದು ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಚಿವರಾದ ಟಿ. ಸಿದ್ದಿಕ್ ಮತ್ತು ಎ. ಪಿ. ಅನಿಲ್ ಕುಮಾರ್ ಅವರಿಗೆ ಸ್ಥಳಕ್ಕೆ ತೆರಳಿ ಉಸ್ತುವಾರಿ ನೋಡಿಕೊಳ್ಳುವಂತೆ ಆದೇಶಿಸಿದರು.

Key words: landslide, Wayanad, three dead

The post ವಯನಾಡಿನಲ್ಲಿ ಭೀಕರ  ಗುಡ್ಡ ಕುಸಿತ; ಮೂವರು ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അവര്‍ക്ക് ശക്തമായ തിരിച്ചടി നല്‍കും; ഇറാനുമായുള്ള വെടിനിര്‍ത്തല്‍ കരാര്‍ അവസാനിച്ചുവെന്ന് ട്രംപ്

വാഷിങ്ടണ്‍: ബുധനാഴ്ച രാത്രി ഇറാനെതിരെ ശക്തമായ ആക്രമണങ്ങള്‍ നടത്തുമെന്ന മുന്നറിയിപ്പുമായി യു.എസ്...

`இனி தனித்தனி தணிக்கை இல்லை' – புளியறை சோதனைச்சாவடிகள் ஒருங்கிணைப்பு – மாவட்ட நிர்வாகம் அறிவிப்பு!

தென்காசி மாவட்டம், செங்கோட்டை வட்டம், புளியறை கிராமத்தில் செயல்பட்டு வரும் வட்டார...

ബീഹാറില്‍ മുസ്‌ലിം യുവതിയെ നിര്‍ബന്ധിച്ച് സിന്ദൂരമണിയിച്ചു; ബലമായി നിഖാബ് അഴിപ്പിച്ച് ഹിന്ദുത്വര്‍

നവാഡ: ബീഹാറിലെ നവാഡ ജില്ലയില്‍ വെച്ച് മുസ്‌ലിം യുവതിയെയും അവരുടെ സുഹൃത്തായ...