ಮೈಸೂರು,ಜುಲೈ,6,2026 (www.justkannada.in): ಕುಡಿದು ಆಟೋದಲ್ಲಿ ಬಂದಿದ್ದ ಮೂವರು ಕ್ಯಾಂಟರ್ ಗೆ ಅಟೋ ಟಚ್ ಆಗಿದಕ್ಕೆ ಗಲಾಟೆ ಮಾಡಿದ್ದು ಈ ವೇಳೆ ಜಗಳ ಬಿಡಿಸಲು ಬಂದ ಜನರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಗುಂಗ್ರಾಲ್ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ಇಟ್ಟಿಗೆಗೂಡಿನ ನಿವಾಸಿಗಳಾದ ಜಿತೇಂದ್ರ, ಗುರುರಾಜ್, ಗುರುಪ್ರಸಾದ್ ರಾಹುಲ್ ಎಂಬುವವರೇ ಹಲ್ಲೆ ಮಾಡಿರುವ ವ್ಯಕ್ತಿಗಳು, ಕ್ಯಾಂಟರ್ ಗೆ ಅಟೋ ಟಚ್ ಆಗಿದಕ್ಕೆ ಗಲಾಟೆ ಶುರುವಾಗಿದ್ದು ಈ ವೇಳೆ ಜಗಳ ಬಿಡಿಸಲು ಬಂದವರ ಮೇಲೆಯೇ ಚಾಕುವಿನಿಂದ ಅಟ್ಯಾಕ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಚಾಕುವಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಸೆರೆ ಹಿಡಿದಿದ್ದಾರೆ.
ಚಾಕುವಿನಿಂದ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರನ್ನು ಸ್ಥಳೀಯರು ಹಿಡಿದು ಗೂಸ ಕೊಟ್ಟು ಪೋಲಿಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ 5 ಯುವಕರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ, ಪಡೆಯುತ್ತಿದ್ದಾರೆ.
Key words: Riot, Mysore, Attack, fight, injury
The post ಮೈಸೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಜಗಳ ಬಿಡಿಸಲು ಬಂದವರ ಮೇಲೆಯೇ ಅಟ್ಯಾಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





