ಬೆಂಗಳೂರು,ಜುಲೈ,1,2026 (www.justkannada.in): ಗ್ಯಾರಂಟಿ ಯೋಜನೆಗಳನ್ನ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಎಲ್ಲರಿಗೂ ಉಚಿತ ಅಂತ ಹೇಳಿ ಈಗ ಯಾಕೆ ಪರಿಷ್ಕರಣೆಗೆ ಮುಂದಾಗಿದ್ದಾರೆ? ಗೃಹಲಕ್ಷಿ ಯೋಜನೆಯಲ್ಲಿ 225 ಕೋಟಿ ರೂ. ಲೂಟಿಯಾಗಿದೆ. ಆಗ ಯಾಕೆ ಎಫ್ ಐಆರ್ ಹಾಕಿಲ್ಲ. ಎಸ್ ಐಟಿ ರಚಿಸಿಲ್ಲ? ಗೃಹಲಕ್ಷ್ಮಿ ಯೋಜನೆಯಲ್ಲಿ 2 ತಿಂಗಳ ಹಣವನ್ನೇ ಕೊಟ್ಟಿಲ್ಲ. ಆ ಬಗ್ಗೆ ಕೇಳಿದರೇ ಅಂದಿನ ಸಚಿವರು ಉಡಾಫೆಯಿಂದ ಹೇಳಿದರು. ಆ ಹಣ ಎಲ್ಲಿ ಹೋಯಿತು? ತನಿಖೆಗೆ ಯಾಕೆ ಆದೇಶ ಮಾಡಿಲ್ಲ? ಬಡವರ ಹಸರಿನಲ್ಲೇ ಷಡ್ಯಂತ್ರ ಆಗಿದೆ ಎಂದು ಹರಿಹಾಯ್ದರು.
ಎಸ್ ಐಆರ್ ಕುರಿತು ಕಾಂಗ್ರೆಸ್ ನಾಯಕರ ಟೀಕೆ ವಿಚಾರ ಪ್ರತಿಕ್ರಿಯಿಸಿದ ಸಿ.ಟಿ ರವಿ, ಕಾಂಗ್ರೆಸ್ ಅವಧಿಯಲ್ಲಿ 7 ಎಸ್ ಐಆರ್ ನಡೆದಿದೆ. ಇದು 8ನೇ ಎಸ್ ಐಆರ್ . ನಕಲಿ ಮತಗಳು ಸೇರಬಾರದು ಅಂತಾ ಎಸ್ ಐಆರ್ ನಡೆಯುತ್ತಿದೆ. ಶುದ್ದೀಕರಣ ಪ್ರಕ್ರಿಯೆಯೆನ್ನೇ ಅನುಮಾನದಿಂದ ನೋಡುತ್ತಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಟೂಲ್ ಕಿಟ್ ಎಂದು ಕಿಡಿಕಾರಿದರು.
Key words: loot, Rs 225 crore, Grihalakshmi scheme, MLC, CT Ravi
The post ಗೃಹಲಕ್ಷ್ಮೀ ಯೋಜನೆಯಲ್ಲಿ 225 ಕೋಟಿ ರೂ. ಲೂಟಿ: ಯಾಕೆ FIR ಹಾಕಿಲ್ಲ? MLC ಸಿಟಿ ರವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





