24
June, 2026

A News 365Times Venture

24
Wednesday
June, 2026

A News 365Times Venture

ನೀಟ್ ಪರೀಕ್ಷಾರ್ಥಿ ತಡವಾಗಿ ಬಂದ ಪ್ರಕರಣ: ಬೆಂಗಳೂರು ಟ್ರಾಫಿಕ್ ಪೊಲೀಸ್ ಸ್ಪಷ್ಟನೆ

Date:

ಬೆಂಗಳೂರು, ಜೂ.23,2026 (www.justkannada.in): ಜೂನ್ 21ರಂದು ನಡೆದ ನೀಟ್ (NEET) ಪರೀಕ್ಷೆಗೆ ಅಭ್ಯರ್ಥಿಯೊಬ್ಬರು ತಡವಾಗಿ ಆಗಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಹಾಗೂ ಬೆಂಗಳೂರು ನಗರ ಪೊಲೀಸ್ ಇಲಾಖೆ ಸಿಸಿಟಿವಿ ದೃಶ್ಯಾವಳಿ, ಅಭ್ಯರ್ಥಿ ಮತ್ತು ಪೋಷಕರೊಂದಿಗೆ ನಡೆಸಿದ ಸಂವಾದ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ವಾಸ್ತವ ಪರಿಶೀಲನೆ (Fact Check) ವರದಿ ಬಿಡುಗಡೆ ಮಾಡಿದೆ.

ವರದಿ ಪ್ರಕಾರ, ಅಭ್ಯರ್ಥಿ ಮಧ್ಯಾಹ್ನ 12.57ಕ್ಕೆ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಿಂದ ಪರೀಕ್ಷಾ ಕೇಂದ್ರದತ್ತ ಹೊರಟಿದ್ದರು. ಆದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆಯುವ ಅಂತಿಮ ಗಡುವು ಮಧ್ಯಾಹ್ನ 1.30 ಆಗಿತ್ತು. ಅಭ್ಯರ್ಥಿ ಪರೀಕ್ಷಾ ಕೇಂದ್ರದ ಸಮೀಪಕ್ಕೆ 1.33ಕ್ಕೆ ತಲುಪಿದ್ದು, ನಿಗದಿತ ಸಮಯದ ಮೂರೇ ನಿಮಿಷಗಳ ನಂತರ ಆಗಮಿಸಿದ್ದರು.

ಪೊಲೀಸರ ತನಿಖೆಯಲ್ಲಿ ಅಭ್ಯರ್ಥಿ ಪ್ರವೇಶ ಗಡುವಿಗೆ ಕೇವಲ 33 ನಿಮಿಷಗಳ ಮೊದಲು ಮನೆಯಿಂದ ಹೊರಟಿರುವುದು ದೃಢಪಟ್ಟಿದೆ. ಅಲ್ಲದೆ, ಕಡಿಮೆ ದೂರದ ಪರ್ಯಾಯ ಮಾರ್ಗ ಲಭ್ಯವಿದ್ದರೂ ಅಭ್ಯರ್ಥಿ ಹೆಚ್ಚು ಸಮಯ ತೆಗೆದುಕೊಳ್ಳುವ ಉದ್ದವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಇದೇ ವೇಳೆ, ಆ ದಿನ ಸಾರ್ವಜನಿಕ ಕಾರ್ಯಕ್ರಮದಿಂದಾಗಿ ನಗರದಲ್ಲಿ ತೀವ್ರ ಟ್ರಾಫಿಕ್ ದಟ್ಟಣೆ ಉಂಟಾಗಿತ್ತು ಎಂಬ ಆರೋಪಕ್ಕೂ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಮಾರ್ಗದಲ್ಲಿನ ಸಂಚಾರ ಪರಿಸ್ಥಿತಿ ಸಾಮಾನ್ಯವಾಗಿದ್ದು, ಯಾವುದೇ ಗಮನಾರ್ಹ ಟ್ರಾಫಿಕ್ ಜಾಮ್ ಕಂಡುಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಭ್ಯರ್ಥಿಯ ಸಂಚಾರಕ್ಕೆ ನೆರವಾಗಲು ಮಾರ್ಗದುದ್ದಕ್ಕೂ ನಿಯೋಜಿಸಲಾಗಿದ್ದ ಟ್ರಾಫಿಕ್ ಪೊಲೀಸರು ಅಗತ್ಯವಿದ್ದ ಕಡೆಗಳಲ್ಲಿ ವಾಹನ ಸಂಚಾರ ಸುಗಮಗೊಳಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

ತೀರ್ಮಾನ

ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿ, ಅಭ್ಯರ್ಥಿ ಹಾಗೂ ಪೋಷಕರೊಂದಿಗೆ ನಡೆಸಿದ ಸಂವಾದ ಮತ್ತು ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ, ಸಾರ್ವಜನಿಕ ಕಾರ್ಯಕ್ರಮದಿಂದ ಉಂಟಾದ ಟ್ರಾಫಿಕ್ ದಟ್ಟಣೆಯೇ ಅಭ್ಯರ್ಥಿಯ ವಿಳಂಬಕ್ಕೆ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಯ ತಡ ಆಗಮನಕ್ಕೆ ಪ್ರಮುಖ ಕಾರಣಗಳು:

ಪರೀಕ್ಷಾ ಕೇಂದ್ರದ ಪ್ರವೇಶ ಗಡುವಿಗೆ ಕೇವಲ 33 ನಿಮಿಷಗಳ ಮೊದಲು ಮನೆಯಿಂದ ಹೊರಟಿದ್ದು.

ಕಡಿಮೆ ದೂರದ ಮಾರ್ಗ ಬದಲಾಗಿ ಉದ್ದವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು.

ಹೀಗಾಗಿ, ಸಾರ್ವಜನಿಕ ಕಾರ್ಯಕ್ರಮದಿಂದ ಉಂಟಾದ ಟ್ರಾಫಿಕ್ ಜಾಮ್‌ನಿಂದ ಪರೀಕ್ಷಾರ್ಥಿ ತಡವಾಗಿ ಬಂದಿಲ್ಲ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ENGLISH SUMMARY..

NEET Candidate Delay Not Due to Traffic Congestion: Bengaluru Traffic Police

Bengaluru, June 23: Bengaluru Traffic Police has clarified that a NEET candidate’s late arrival at the examination centre on June 21 was not caused by traffic congestion linked to a public event.

Based on CCTV footage, route analysis, and interactions with the candidate and parents, police found that the candidate left home in R.T. Nagar at 12:57 PM, just 33 minutes before the 1:30 PM entry deadline, and reached the exam centre area at 1:33 PM, after the cut-off time.

The investigation revealed that the candidate chose a longer route despite a shorter alternative being available. Police also stated that traffic conditions were generally normal, with no significant congestion caused by the public event.

Traffic personnel deployed along the route were seen facilitating the candidate’s movement wherever required.

Conclusion: The delay was primarily due to the candidate’s late departure and choice of route, not because of traffic congestion arising from the public event. #NEET2026 #BengaluruTrafficPolice #FactCheck #NEETExam #BengaluruNews

Key words: NEET Candidate, Delay, Bengaluru, Traffic Police

The post ನೀಟ್ ಪರೀಕ್ಷಾರ್ಥಿ ತಡವಾಗಿ ಬಂದ ಪ್ರಕರಣ: ಬೆಂಗಳೂರು ಟ್ರಾಫಿಕ್ ಪೊಲೀಸ್ ಸ್ಪಷ್ಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಆಹಾರ ವ್ಯಾಪಾರ ಸಂಸ್ಥೆಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ: 5 ನೋಟಿಸ್ ಜಾರಿ, 43.5 ಕೆಜಿ ಆಹಾರ ಪದಾರ್ಥ ವಶ

ಮೈಸೂರು, ಜೂನ್,23,2026 (www.justkannada.in): ಜಿಲ್ಲಾಧಿಕಾರಿಗಳ ಸೂಚನೆಯಂತೆ ಮೈಸೂರು ನಗರ ಆಹಾರ...

ഇരകള്‍ 800ലധികം, സുഡാനില്‍ ലൈംഗിക അതിക്രമങ്ങള്‍ ‘യുദ്ധത്തിനുള്ള ആയുധം’; വിറങ്ങലിപ്പിക്കുന്ന ക്രൂരതകളുമായി യു.എന്‍ റിപ്പോര്‍ട്ട്

  ജനീവ: സുഡാനിലെ ആഭ്യന്തര സംഘര്‍ഷങ്ങളില്‍ ലൈംഗിക അതിക്രമങ്ങള്‍ വ്യവസ്ഥാപിതമായി ഒരു...

கும்பகோணம்: `மக்கள் புறக்கணித்ததால் இனி அங்கு அமரப் போவதில்லை' – திமுக துணை மேயர்!

தஞ்சாவூர் மாவட்டம், கும்பகோணம் மாநகராட்சி அலுவலகத்தில், மாமன்ற கூட்டம், காங்கிரஸ் கட்சியின்...

CM Vijay: పెరియార్ సామాజిక సూత్రాలు ఓకే.. కానీ నాస్తికత్వం మాకొద్దు.. సీఎం విజయ్ సంచలన ప్రకటన

CM Vijay: తమిళనాడు రాజకీయాల్లో సరికొత్త అధ్యాయాన్ని లిఖిస్తూ ముఖ్యమంత్రి పీఠాన్ని...