23
June, 2026

A News 365Times Venture

23
Tuesday
June, 2026

A News 365Times Venture

ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ದ್ವಿಗುಣ: ಜುಲೈ 1ರಿಂದ ಹೊಸ ನಿಯಮ ಜಾರಿ

Date:

 

ಮೈಸೂರು, ಜೂ.22: ಜನ ವಿಶ್ವಾಸ್ (ತಿದ್ದುಪಡಿ ವಿಧಿಗಳ) ಕಾಯ್ದೆ-2026ರಡಿ ಭಾರತೀಯ ರೈಲ್ವೆ ಟಿಕೆಟ್ ರಹಿತ ಪ್ರಯಾಣ ಸೇರಿದಂತೆ ಹಲವು ಉಲ್ಲಂಘನೆಗಳಿಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿದೆ. ಪರಿಷ್ಕೃತ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಹೊಸ ನಿಯಮಗಳ ಪ್ರಕಾರ, ಟಿಕೆಟ್ ಅಥವಾ ಪಾಸ್ ಇಲ್ಲದೆ ಪ್ರಯಾಣಿಸುವವರಿಗೆ ವಿಧಿಸಲಾಗುವ ಕನಿಷ್ಠ ದಂಡ ₹250ರಿಂದ ₹500ಕ್ಕೆ ಏರಿಕೆಯಾಗಿದೆ. ಅನುಮತಿಸಿದ ದೂರಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಿದರೂ ಕನಿಷ್ಠ ಹೆಚ್ಚುವರಿ ದಂಡ ₹500 ಆಗಲಿದೆ. ಆದರೆ ಗರಿಷ್ಠ ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದೇ ವೇಳೆ, ಅನಧಿಕೃತ ವ್ಯಾಪಾರ (ಹಾಕಿಂಗ್) ನಡೆಸಿದರೆ ₹2,000, ಮಹಿಳೆಯರ ಮೀಸಲು ಬೋಗಿಯಲ್ಲಿ ಪುರುಷರು ಪ್ರಯಾಣಿಸಿದರೆ ₹2,500 ಹಾಗೂ ರೈಲು ಅಥವಾ ರೈಲ್ವೆ ಆವರಣದ ನಿಷೇಧಿತ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ ₹2,000 ದಂಡ ವಿಧಿಸಲಾಗುತ್ತದೆ.

ಈ ಕ್ರಮವು ಟಿಕೆಟ್ ರಹಿತ ಪ್ರಯಾಣ ತಡೆದು, ರೈಲ್ವೆ ಆದಾಯ ಸಂರಕ್ಷಣೆ ಹಾಗೂ ಪ್ರಯಾಣಿಕರ ಶಿಸ್ತನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ.

Key words: Indian Railways, Ticketless Travel, Railway Rules, Jan Vishwas Act, Mysuru Division,

SUMMARY:

Railways Hike Penalty for Ticketless Travel from July 1

Mysuru, June 22: Indian Railways will implement revised penalty provisions under the Jan Vishwas (Amendment of Provisions) Act, 2026, from July 1.

file photo

The minimum penalty for travelling without a valid ticket or pass has been increased from ₹250 to ₹500. The same minimum charge will apply to passengers travelling beyond the permitted distance on their tickets.

Additionally, unauthorized hawking on railway premises will attract a ₹2,000 fine, men travelling in coaches reserved for women will face a ₹2,500 penalty, and smoking in prohibited railway areas will invite a ₹2,000 fine.

The move aims to curb ticketless travel, improve passenger discipline, and protect railway revenue.

#IndianRailways #TicketlessTravel #RailwayRules #JanVishwasAct #MysuruDivision

The post ರೈಲ್ವೆಯಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ದ್ವಿಗುಣ: ಜುಲೈ 1ರಿಂದ ಹೊಸ ನಿಯಮ ಜಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തൃണമൂലിന്റെ പുതിയ ചെയര്‍മാനെ തെരഞ്ഞെടുത്ത് വിമതര്‍, മമതയ്ക്ക് വേണമെങ്കില്‍ മുഖ്യ ഉപദേശകയാകാമെന്ന് ഋതബ്രതയുടെ പരിഹാസം

  കൊല്‍ക്കത്ത: പശ്ചിമ ബംഗാള്‍ നിയമസഭാ തെരഞ്ഞെടുപ്പിലെ കനത്ത പരാജയത്തിന് പിന്നാലെ...

"அமைச்சர் ராஜ்மோகனுக்கு மிரட்டல்" – பத்திரிகையாளர் மன்ற நிகழ்ச்சியைப் புறக்கணித்தாரா ராஜ்மோகன்?

சென்னை பத்திரிகையாளர் மன்றத்தின் நிகழ்ச்சியில் அமைச்சர் ராஜ் மோகன் கலந்து கொள்ளாமல்...

ರಾಮನ ಹೆಸರಲ್ಲಿ ಲೂಟಿ ಮಾಡುವವರು ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಸತ್ಯ ಹೇಳ್ತಾರಾ? ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,22,2026 (www.justkannada.in):  ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಹಿನ್ನೆಲೆ ಮಂಜುನಾಥಸ್ವಾಮಿ ಕ್ಷೇತ್ರ...