20
June, 2026

A News 365Times Venture

20
Saturday
June, 2026

A News 365Times Venture

ಜೀವ ಬೆದರಿಕೆ: ಶ್ರೀ ಪ್ರಣವಾನಂದರಾಮ್ ಸ್ವಾಮೀಜಿಗೆ ಭದ್ರತೆ ನೀಡಿವಂತೆ ಸಿಎಂಗೆ ಮನವಿ

Date:

ಬೆಂಗಳೂರು, ಜೂ,17,2026 (www.justkannda.in):  ಈಡಿಗ ಸಮುದಾಯದ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಕಲಬುರ್ಗಿ ಶ್ರೀ ಶರಣಬಸವೇಶ್ವರ ಮಠ ಹಾವೇರಿ ಪೀಠಾಧಿಪತಿ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಟ್ರಸ್ಟ್ ಹಾಗೂ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಸ್ವಾಮೀಜಿಗಳು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳ ಸದಾಶಿವನಗರ ನಿವಾಸಕ್ಕೆ ಸ್ವಾಮೀಜಿಗಳು ಬುಧವಾರ ಭೇಟಿ ನೀಡಿ ಮನವಿ ಮಾಡಿದರು. ಸರ್ವಧರ್ಮ ಸಮಾಜದ ಸಂಗಮಾನಂದ ಸ್ವಾಮೀಜಿ, ವಿಶ್ವಕರ್ಮ ಸಮಾಜದ ದೊಡ್ಡೇಂದ್ರ ಸ್ವಾಮೀಜಿ, ಬಂಜಾರ ಸಮಾಜದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕುಂಬಾರ ಸಮಾಜದ ಬಸವಮೂರ್ತಿ ಕುಂಬಾರ ಗುಡ್ಡಯ್ಯ ಸ್ವಾಮೀಜಿ, ಹೂಗಾರ ಸಮಾಜದ ಹಳ್ಳಿರಾಯ ನಾಟಿಕಾರ ಸ್ವಾಮೀಜಿ, ಅರೆ ಅಲೆಮಾರಿ ಸಮಾಜದ ಕರುಣಾಕರ ಸ್ವಾಮೀಜಿ, ಪಿಂಜಾರ ಸಮಾಜದ ಮರುಳಶಂಕರ ಸ್ವಾಮೀಜಿಗಳು ಮನವಿ ಸಲ್ಲಿಸಿದರು.

ಪ್ರಣಾವಾನಂದರಾಮ್ ಮಹಾಸ್ವಾಮಿಗಳು ಈಡಿಗ ಹಾಗೂ ಹಿಂದುಳಿದ ಸಮಾಜಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಗೋಕರ್ಣದಲ್ಲಿ ನಡೆದ ಸಮಾಜ ಸಭೆಯಲ್ಲಿ ಧ್ವನಿ ಎತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳಿಗೂ ಸಮನಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು ಎಂದು ಆಗ್ರಹಿಸಿದ್ದರು. ಹೀಗಾಗಿ ಸ್ವಾಮೀಜಿಗಳ ವಿರುದ್ಧ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕುರುಬ ಸಮಾಜದ ಸಂಘಟನೆಗಳು ಹಾಗೂ ಅವುಗಳ ಕೆಲವು ಮುಖಂಡರು ಶ್ರೀಗಳ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಕಾಮೆಂಟ್ ಗಳಲ್ಲಿ ಇದೇ ಸಮುದಾಯಕ್ಕೆ ಸೇರಿದವರು ಶ್ರೀಗಳನ್ನು ಕೊಲ್ಲುತ್ತೇವೆ ಎಂದು ಬರೆದಿದ್ದಾರೆ. ಜಾತಿಗಳ ಮಧ್ಯೆ ಘರ್ಷಣೆ ಆಗಬಾರದು ಹಾಗೂ ಶ್ರೀಗಳಿಗೆ ತೊಂದರೆ ಆಗಬಾರದು. ಹೀಗಾಗಿ ಪ್ರಣಾವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ಒದಗಿಸಬೇಕು” ಎಂದು ಮನವಿ ಮಾಡಿದರು.

Key words: Life threat, security, Sri Pranavanandaram Swamiji, Request, CM

The post ಜೀವ ಬೆದರಿಕೆ: ಶ್ರೀ ಪ್ರಣವಾನಂದರಾಮ್ ಸ್ವಾಮೀಜಿಗೆ ಭದ್ರತೆ ನೀಡಿವಂತೆ ಸಿಎಂಗೆ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അമേരിക്കയുടെ ആഗോള മേധാവിത്വ മോഹങ്ങള്‍ക്ക് ഇറാന്‍ പൂട്ടിട്ടു; സമാധാന കരാര്‍ യു.എസിനുള്ള തിരിച്ചടി: റഷ്യന്‍ രാഷ്ട്രീയ നിരീക്ഷകന്‍

മോസ്‌ക്കോ: അമേരിക്കയുടെ ആഗോള ആധിപത്യം വീണ്ടും ഉറപ്പിക്കനുള്ള യു.എസ് പ്രസിഡന്റ് ഡൊണാള്‍ഡ്...

விஜய் படங்களுக்கு பணியாயாற்றிய பிரபல ஒளிப்பதிவாளர்! – மனோஜ் பரமஹம்சாவுக்கு அரசுப் பொறுப்பு

பிரபல ஒளிப்பதிவாளர் மனோஜ் பரமஹம்சாவுக்கு தமிழ்நாடு அரசுப் பொறுப்பு வழங்கப்பட்டுள்ளது. 'ஈரம்',...

Monsoon 2026: అన్నదాతలకు శుభవార్త.. ఎట్టకేలకు పుంజుకున్న రుతుపవనాలు.. ఈ తేదీల్లో వర్షాలు!

Monsoon 2026: దేశవ్యాప్తంగా దాదాపు రెండు వారాలుగా నత్తనడకన సాగుతూ, తీవ్ర...

ನಗರಾಭಿವೃದ್ಧಿ ಪ್ರಾಧಿಕಾರಗಳು ಕಡ್ಡಾಯವಾಗಿ ಪ್ರತಿ ತಿಂಗಳು ಸಭೆ ನಡೆಸಬೇಕು- ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು,ಜೂನ್,19,2026 (www.justkannada.in): ನಗರಾಭಿವೃದ್ಧಿ ಪ್ರಾಧಿಕಾರಗಳು ಕಾಲ ಕಾಲಕ್ಕೆ ಪ್ರಾಧಿಕಾರದ ಸಭೆ...