ತುಮಕೂರು,ಜೂನ್,8,2026 (www.justkannada.in): ಸಚಿವರಾಗಿದ್ದಾಗ ಜಮೀರ್ ಅಹ್ಮದ್ ಖಾನ್ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಹೀಗಾಗಿ ಜಮೀರ್ ಗೆ ಸಚಿವ ಸ್ಥಾನ ಕೊಟ್ಟರೇ ತಪ್ಪೇನಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, ಜಮೀರ್ ಒಬ್ಬ ಸಮರ್ಥ ನಾಯಕ . ವಿಶೇಷ ವಾಗಿ ಅಲ್ಪಸಂಖ್ಯಾತ ಸಮುದಾಯದ ಸಮರ್ಥ ನಾಯಕ. ಮೊದಲ ಪಟ್ಟಿಯಲ್ಲಿ ಏಕೆ ಸಚಿವ ಸ್ಥಾನ ತಪ್ಪಿತೆಂದು ಮಾಹಿತಿ ಇಲ್ಲ. 2ನೇ ಪಟ್ಟಿಯಲ್ಲಿ ಕೊಡಿ ಎಂದು ಎಲ್ಲರು ಬೇಡಿಕೆ ಇಟ್ಟಿದ್ದಾರೆ. ವರಿಷ್ಠರು ಅದನ್ನು ಪರಿಗಣಿಸುತ್ತಾರೆ ಎಂದು ಅಂದುಕೊಳ್ಳುತ್ತೇನೆ ಎಂದರು.
ಜಮೀರ್ ಸಚಿವರಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದಾರೆ. ಜಮೀರ್ ಗೆ ಸಚಿವ ಸ್ಥಾನ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ. ಶೀಘ್ರದಲ್ಲೇ ಸಚಿವರ 2ನೇ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆ ಮಾಡುತ್ತದೆ ಎಂದರು.
Key words: Zameer Ahmed Khan, ministerial position, DCM, Dr. G. Parameshwar
The post ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ಕೊಟ್ರೆ ತಪ್ಪೇನಿಲ್ಲ- ಡಿಸಿಎಂ ಡಾ.ಜಿ.ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





